ರಾಜ್ಯ

ಧಾರವಾಡ ಜಿಲ್ಲೆಯ 108318 ರೈತರಿಗೆ ರೂ.94.22 ಕೋಟಿ ಪರಿಹಾರ ಜಮೆ

 ಮುಂಗಾರು ಮತ್ತು ಹಿಂಗಾರು ಸೇರಿ 117920 ರೈತರಿಗೆ 94.21 ಕೋಟಿ ಪರಿಹಾರ ಜಮೆ -ಜಿಲ್ಲಾ ಉಸ್ತುವಾರಿ ಶಂಕರ ಪಾಟೀಲ ಮುನೇನಕೊಪ್ಪ

ಧಾರವಾಡ prajakiran. com ಜ.12: ಜಿಲ್ಲೆಯಲ್ಲಿ ಜುಲೈ ಮತ್ತು ನವೆಂಬರ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿವಿಧ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಿನಂಪ್ರತಿ ದಾಖಲಿಸಲಾಗಿದ್ದು, ಈವರೆಗೆ 108318 ರೈತರಿಗೆ ಸರಕಾರದಿಂದ ರೂ.94.22 ಕೋಟಿ ಪರಿಹಾರ ಮೊತ್ತವನ್ನು ನೇರವಾಗಿ ಜಿಲ್ಲೆಯ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು 7 ಮನೆಗಳು ಪೂರ್ಣ ಹಾನಿಯಾಗಿದ್ದು ಪ್ರತಿ ಮನೆಗೆ ರೂ.5.00ಲಕ್ಷ ಪಾವತಿಸಬೇಕಾಗಿದ್ದು ಮೊದಲನೇ ಕಂತು ರೂ. 95,100/- ರಂತೆ ರೂ. 6,65,700/- ಪಾವತಿಸಿದೆ. 670 ಮನೆಗಳು ತೀವ್ರತರ ಹಾನಿಯಾಗಿದ್ದು ಮೊದಲನೆ ಕಂತು ರೂ.95,100/- ರಂತೆ ರೂ.6,37,17,000/- ಪಾವತಿಸಿದೆ.

1252 ಮನೆಗಳು ಭಾಗಶಃ ಹಾನಿಯಾಗಿದ್ದು ಒಟ್ಟು ರೂ.50,000/- ರಂತೆ ರೂ.6,26,00,000/-ಪರಿಹಾರ ಧನ ಪಾವತಿ ಮಾಡಲಾಗಿದೆ. ಪರಿಹಾರ ಧನವನ್ನು ಫಲಾನುಭವಿಗಳ ಉಳಿತಾಯ ಖಾತೆಗೆ ನೇರವಾಗಿ ಜಮೆ ಮಾಡಲಾಗಿದ್ದು, ಈವರೆಗೆ ಒಟ್ಟು 1929 ಹಾನಿಯಾದ ಮನೆಗಳಿಗೆ ರೂ.12.70 ಕೋಟಿ ಪರಿಹಾರಧನ ಪಾವತಿಸಲಾಗಿದ್ದು ರೈತರ ಬೆಳೆ ಹಾನಿ ಪರಿಹಾರ ಕಾರ್ಯ ಪ್ರಗತಿ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್  ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜುಲೈ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ವಿವಿಧ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಿನಂಪ್ರತಿ ದಾಖಲಿಸಲಾಗಿದ್ದು 2021 ರ ಮುಂಗಾರು ಮತ್ತು ಹಿಂಗಾರು ಬೆಳೆ ಪರಿಹಾರಕ್ಕಾಗಿ ರೈತರಿಗೆ ಡಿಸೆಂಬರ್ 08 ರಂದು 49816 ಫಲಾನುಭವಿಗಳಿಗೆ ರೂ. 39,47,96,499/-. ಡಿಸೆಂಬರ್ 10 ರಂದು 33450 ಫಲಾನುಭವಿಗಳಿಗೆ 27,97,38,045/-. ಡಿಸೆಂಬರ್ 14 ರಂದು 6642 ಫಲಾನುಭವಿಗಳಿಗೆ ರೂ. 5,24,88,620/-. ಡಿಸೆಂಬರ್ 16 ರಂದು 2323 ಫಲಾನುಭವಿಗಳಿಗೆ ರೂ.1,70,18,775/-. ಡಿಸೆಂಬರ್ 20 ರಂದು 2415 ಫಲಾನುಭವಿಗಳಿಗೆ ರೂ.1,81,61,960/-. ಡಿಸೆಂಬರ್ 24 ರಂದು 4001 ಫಲಾನುಭವಿಗಳಿಗೆ ರೂ.3,14,58,388/-. ಡಿಸೆಂಬರ್ 28 ರಂದು 1621 ಫಲಾನುಭವಿಗಳಿಗೆ ರೂ. 1,02,26,912/-, ಡಿಸೆಂಬರ್ 31 ರಂದು 156 ಫಲಾನುಭವಿಗಳಿಗೆ ರೂ.9,89,576/-, ಜನವರಿ 04 ರಂದು 16588 ಫಲಾನುಭವಿಗಳಿಗೆ ರೂ. 13,06,27,643/-, ಜನವರಿ 10 ರಂದು 908 ಫಲಾನುಭವಿಗಳಿಗೆ ರೂ. 66,65,415/- ಪರಿಹಾರ ಧನ ಪಾವತಿ ಮಾಡಲಾಗಿದ್ದು, ಇದುವರೆಗೆ ಒಟ್ಟು 117920 ಫಲಾನುಭವಿಗಳಿಗೆ ರೂ. 94,21,71,833/- ಪರಿಹಾರ ಧನ ಪಾವತಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *