ರಾಜ್ಯ

ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ 95ನೇ ಯ್ಯಾಂಕ್ ಪಡೆದಿದ್ದ ಧಾ‌ರವಾಡದ ಪಿಎಸ್ಐ ಅಭ್ಯರ್ಥಿ ಶ್ರೀಮಂತ ಸಾತಪುರ ಜೈಲುಪಾಲು

ಧಾರವಾಡ prajakiran.com : 545 ಪಿಎಸ್ಐ ಅಕ್ರಮ ನೇಮಕಾತಿ ಆರೋಪದ ಮೇಲೆ ಸಿಐಡಿ ಪೊಲೀಸರಿಂದ ಬಂಧಿತನಾಗಿರುವ ಶ್ರೀಮಂತ ಸಾತಪೂರೆ ಎಂಬಾತನನ್ನು ಅಕ್ಟೋಬರ್ 17 ರ ವರೆಗೆ ಧಾರವಾಡದ ಎರಡನೇ ಪ್ರಧಾನ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

ಧಾರವಾಡದ ಸೆಂಟ್ ಜೋಸೆಫ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಶ್ರೀಮಂತ ಸಾತಪುರೆ ಪರೀಕ್ಷಾ ಕೇಂದ್ರದಲ್ಲಿಯೇ ಬ್ಲೂಟೂತ್ ಬಳಕೆ ಮಾಡಿದ್ದ ಎನ್ನಲಾಗಿದೆ.

9901245785 ಈ ನಂಬರ್‌ನಿಂದ 8123401613 ಗೆ ಕರೆ ಮಾಡಿ ಬ್ಲೂಟೂತ್ ಮೂಲಕ ಉತ್ತರ ಪಡೆದು ಪರೀಕ್ಷೆ ಬರೆದಿದ್ದ ಎಂದು ಸಿಐಡಿ ತನಿಖೆ ವೇಳೆ ಬಯಲಿಗೆ ಬಂದಿತ್ತು.

ಅಲ್ಲದೇ ಪರೀಕ್ಷೆಯಲ್ಲಿ 95 ನೇ ರ್ಯ್ಯಾಂಕ್ ಬಂದಿದ್ದ. ಈ ಕುರಿತಂತೆ ಸಿಐಡಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಧಾರವಾಡದ ಉಪನಗರ ಠಾಣೆಯಲ್ಲಿ ನಿನ್ನೆ ದೂರು ದಾಖಲು ಮಾಡಿದ್ದರು.

ಹೀಗಾಗಿ ಸಿಐಡಿ ಪೊಲೀಸರು ಆರೋಪಿಯನ್ನು ಶುಕ್ರವಾರ ಧಾರವಾಡದ ಎರಡನೇ ಪ್ರಧಾನ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಲಯ ಆರೋಪಿಯನ್ನು ವಿಚಾರಣೆ ನಡೆಸಿ, ಅಕ್ಟೋಬರ್ 17ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *