ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಪಕ್ಷದ ಟಿಕೇಟ್ ಗಾಗಿ ಭಾರೀ ಪೈಪೋಟಿ

ಹುಬ್ಬಳ್ಳಿ -ಧಾರವಾಡ prajakiran.com : ಕರೋನಾ ಮೂರನೇ ಅಲೆ ಆತಂಕದ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಹಾಗೂ ಜೆಡಿಎಸ್ ಸೇರಿದಂತೆ ವಿವಿಧ  ಪಕ್ಷದ ಅಭ್ಯರ್ಥಿಗಳು ತಮ್ಮ ನೆಚ್ಚಿನ ವಾರ್ಡಿನಲ್ಲಿ ಆಕಾಂಕ್ಷಿಗಳಾಗಲು ನಾಯಕರ‌ ಮುಗಿಬಿದ್ದಿದ್ದಾರೆ.

ಕೊನೆ ಕ್ಷಣದಲ್ಲಿ ಯಾರಿಗೆ ಅದೃಷ್ಟ ಒಲಿಯುತ್ತೋ ಯಾರಿಗೆ ಕೈ ಕೋಡುತ್ತೋ ಗೊತ್ತಿಲ್ಲ.

ಟಿಕೇಟ್ ಸಿಗದೆ ಇದ್ದಲ್ಲಿ ಬಂಡಾಯವೇಳಲು ಸಿದ್ದ ಎಂದು ಕೆಲವರು ಬಹಿರಂಗವಾಗಿ ಘೋಷಿಸಿಕೊಳ್ಳುತ್ತಿದ್ದಾರೆ.

ಇದು ಪಕ್ಷದ ಮುಖಂಡರಿಗೆ ಬಿಸಿ ತುಪ್ಪವಾಗಿದ್ದು ಸಮಾಧಾನ ಪಡಿಸಲು ಹರಸಾಹಸ ನಡೆಸುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಆಪ್ ಪಾಲಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸಿ, ಅಧಿಕಾರದ ಗದ್ದುಗೆ ಎರಲು ಹವಣಿಸುತ್ತಿವೆ. 

ಎರಡು ವರ್ಷಗಳಿಂದ ಕಾದು ಕುಳಿತಿದ್ದ ಪಾಲಿಕೆ ಚುನಾವಣೆ ಅಭ್ಯರ್ಥಿಗಳು ಹಾಗೂ ಪಕ್ಷಗಳಿಗೆ ತಮ್ಮ ಅಸ್ತಿತ್ವದ ಸವಾಲಾಗಿದೆ.

ಎಲ್ಲರು ಹೊಸ ಹೊಸ ಕನಸು ಮತದಾರರಿಗೆ ಬಿತ್ತುತ್ತಿದ್ದಾರೆ. ಮತದಾರ ಪ್ರಭು ಮಾತ್ರ ಸದ್ಯಕ್ಕೆ ಯಾವುದೇ ಉತ್ಹಾಹ ತೋರುತ್ತಿಲ್ಲ

ಈಗಾಗಲೇ ಅಖಾಡ ರಂಗೇರುತ್ತಿದ್ದು, ಸೆ. 3ರವರೆಗೆ ಮತ್ತಷ್ಟು ರಂಗೇರಿಸಲಿದೆ. ಮಹತ್ವದ ಬೆಳವಣಿಗೆಗಳನ್ನು ಕಾದು ನೋಡಬೇಕು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *