ರಾಜ್ಯ

ವಿಜ್ಹ್ ಕ್ಲೀಂಜರ್ ಇ-ಸ್ಯಾನಿಟೈಜರ್ ಶೋಧಿಸಿದ ಹುಬ್ಬಳ್ಳಿ ಹುಡುಗ …!





ಹುಬ್ಬಳ್ಳಿ prajakiran.com : ಜಾಗತಿಕ ಮಟ್ಟದಲ್ಲಿ ಇದೊಂದು ಮೊಟ್ಟ ಮೊದಲ ಉತ್ಪನ್ನವಾಗಿದ್ದು, ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ವರ್ಲ್ಡ ಎಂಬಂತಾಗಿದೆ.

ಹುಬ್ಬಳ್ಳಿಯ ಸಿದ್ಧಾರೂಢ ಸಿ. ಅಂಗಡಿ, ಅಬ್ದುಲ್ ರೆಹಮಾನ, ಪರಿಭಾಷಾ ಬಂದೇವಾರ, ಆರತಿ ಲೋಹಾರ, ಸಂದೇಶ ಶೆಟ್ಟಿ ವಿವಿಧ ಕಾಲೇಜಿನ ಇಂಜಿನೀಯರಿಂಗ್ ವಿದ್ಯಾರ್ಥಿಗಳ ಗುಂಪು ಇ-ಸ್ಯಾನಿಟೈಜರ್ ಎಂಬ ಒಂದು ವಿನೂತನ, ವಿಶಿಷ್ಟ ಹಾಗೂ ಪರಿಸರ ಸ್ನೇಹಿ ಉತ್ಪನ್ನವನ್ನು ಆವಿಷ್ಕರಿಸಿದೆ.

ಇದನ್ನು ಜನರಿಗೆ, ಸಾರ್ವಜನಿಕ ಸ್ಥಳ ಹಾಗೂ ವಿವಿಧಡೆ ಬಳಸಲು ಉತ್ಪಾದಿಸಿದ್ದಾರೆ. ಈ ಯಂತ್ರವು ವಿವಿಧ ತರಹದ ವೈರಸ್, ಜರ್ಮ್ಸ, ಮೈಕ್ರೋಬ್ಸ ಮತ್ತು ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ.



ಈ ಯಂತ್ರವನ್ನು ಬಳಸಿ ಕೈಗಳು, ಹಣ್ಣುಗಳು, ತರಕಾರಿ ಹಾಗೂ ಮೆಟಲ್ ವಸ್ತುಗಳನ್ನು ಸ್ಯಾನಿಟೈಜ್ ಮಾಡಬಹುದಾಗಿದೆ.

ಈ ಯಂತ್ರದ ತಯಾರಿಕೆಗೆ ಬೇಕಾದ ಕಲ್ಪನೆ, ವಿನ್ಯಾಸ ಹಾಗೂ ಗುಣಮಟ್ಟ (ಎನ್.ಎ.ಬಿ.ಎಲ್) ಸರ್ಟಿಫಿಕೇಟ ಪಡೆಯುವಲ್ಲಿ ಹುಬ್ಬಳ್ಳಿ ಶಹರದ ಹುಡುಗ ಸಿದ್ಧಾರೂಢ ಸಿ. ಅಂಗಡಿ ಮುಖ್ಯ ಭೂಮಿಕೆ ವಹಿಸಿದ್ದಾರೆ.

ಇವರು ಬೆಂಗಳೂರಿನ ಆರ್.ವಿ ಕಾಲೇಜ ಆಫ್ ಇಂಜಿನೀಯರಿಂಗ್‌ನಲ್ಲಿ ಟೆಲಿ-ಕಮ್ಯೂನಿಕೇಷನ್ ವಿಷಯದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಅದೇ ಕಾಲೇಜಿನ ಮತೀನ್ ಇರ್ಫಾನ ಇನ್‌ಕ್ಯೂಬೇಶನ್ ಸೆಂಟರ್ (ಎಮ್.ಐ.ಐ.ಸಿ)ಯಲ್ಲಿ ನೊಂದಾಯಿತರಾಗಿದ್ದಾರೆ.



ಈಗುಂಪಿನ ಇತರೆ ಸದಸ್ಯರು ಅಬ್ದುಲ್ ರೆಹಮಾನ್, ಆರ್.ವಿ ಕಾಲೇಜ ಆಫ್ ಇಂಜಿನೀಯರಿಂಗ್‌ನಟೆಲಿಕಮ್ಯೂನಿಕೇಶನ್ ವಿದ್ಯಾರ್ಥಿ, ಸಂದೇಶ ಶೆಟ್ಟಿ ಆರ್.ವಿ ಕಾಲೇಜ ಆಫ್ ಇಂಜಿನೀಯರಿಂಗ್‌ನ ಎಲೆಕ್ಟ್ರಾನಿಕ್ಸ ಮತ್ತು ಕಮ್ಯೂನಿಕೇಶನ್ ವಿದ್ಯಾರ್ಥಿ, ಆರತಿ ಲೋಹಾರ ಕೆ.ಎಲ್.ಇ ಕಾಲೇಜ ಆಫ್ ಇಂಜಿನೀಯರಿಂಗ್‌ನಲ್ಲಿ ಬಯೋ-ಟೆಕ್ನಾಲಜಿ ವಿಧ್ಯಾರ್ಥಿನಿ ಹಾಗೂ ಪರಿಬಾಷಾ ಬಂದೇವಾರ ವಿ.ಎಮ್.ಕೆ.ವಿ ಕಾಲೇಜ ಆಫ್ ಇಂಜಿನೀಯರಿಂಗ, ಸೇಲಂನ ವಿಧ್ಯಾರ್ಥಿನಿ ಯಂತ್ರ ತಯಾರಿಸುವಲ್ಲಿಶ್ರಮಿಸಿದ್ದಾರೆ.

ಈ ಯಂತ್ರದ ಬಳಕೆಯಿಂದ ಆರೋಗ್ಯಕರ ಜೀವನಕ್ಕಾಗಿ ಯಥೇಚ್ಚವಾಗಿ ಲಿಕ್ವಿಡ್ ಬಳಸದೇ ಕೈಗಳು ಹಾಗೂ ಇತರೆ ವಸ್ತುಗಳ ಸ್ಯಾನಿಟೈಜ್ ಮಾಡಬಹುದಾಗಿದೆ.

ಈ ಉತ್ಪನ್ನವು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅನಂತಪುರ, ಆಂರ್ಧಪ್ರದೇಶದಲ್ಲಿ ಭಾರತ ಸರಕಾರದಿಂದ ಸ್ಥಾಪಿತ ಅಟಲ್ ಇನ್ನೋವೇಶನ್ ಮಿಶನ್‌ನ ಅಟಲ್ ಇನ್‌ಕ್ಯೂಬೇಶನ್ ಸೆಂಟರ್ ಏರ್ಪಡಿಸಿದ್ದ ಕೋವಿಡ್-೧೯ ಚಾಲೆಂಜ್‌ನಲ್ಲಿ ವಿಜೇತರಾಗಿ ತಯಾರಿಸಲ್ಪಟ್ಟಿದೆ.



ಯಂತ್ರಕ್ಕೆ ವ್ಹಿಜ್-ಕ್ಲೀಂಜರ್ ಎಂದು ಹೆಸರಿಸಲಾಗಿದೆ.  ಇದನ್ನು ವಿದ್ಯುತ್ ಸ್ವಿಚ್‌ಗಳಿಗೆ ಅಳವಡಿಸಿ ೨೦ ನಿಮಿಷಗಳ ವರೆಗೆ ಸ್ಯಾನಿಟೈಜ್ ಮಾಡಿಕೊಳ್ಳಬಹುದಾಗಿದೆ.

ನಂತರ ಈ ಯಂತ್ರವು ೧೦ ನಿಮಿಷ ಸ್ವಯಂ ಸ್ಥಗಿತಗೊಂಡು ಮರುಚಾಲಿತವಾಗುತ್ತದೆ. ಹೀಗೆ ಎರಡು ಲೂಪ್‌ಗಳ ನಂತರ ಸ್ವಯಂ ಸ್ಥಗಿತಗೊಳ್ಳುತ್ತದೆ (ವಿದ್ಯುತ್ ಉಳಿತಾಯ ದೃಷ್ಟಿಯಿಂದ)

 ಈ ಯಂತ್ರದ ಉಪಯೋಗಗಳೆಂದರೇ ಇದನ್ನು ಬಳಸುವದರಿಂದ ಯಾವುದೇ ಸೈಡ್-ಎಫೆಕ್ಟ ಇರುವುದಿಲ್ಲ. ಚರ್ಮಕ್ಕೆ ಯಾವುದೇ ಅಲರ್ಜಿ ಆಗುವದಿಲ್ಲ.



ಸ್ಯಾನಿಟೈಜರ್ ರಿಫಿಲ್ ಮಾಡುವ ಅವಶ್ಯಕತೆಯಿಲ್ಲ. ಲಿಕ್ವಿಡ್-ಸ್ಯಾನಿಟೈಜರ್‌ಗೆ ಹೋಲಿಸಿದಾಗ ಇದು ಉರಿಯದಿರುವ ವಸ್ತು ಎಂದು ಸಿದ್ಧಾರೂಢ ಸಿ. ಅಂಗಡಿ ತಿಳಿಸಿದ್ದಾರೆ.

ಇಂಜಿನೀಯರಿಂಗ್ ವಿದ್ಯಾರ್ಥಿಗಳ ಈ ಸಾಧನೆಯು ಪ್ರಧಾನಿ ನರೇಂದ್ರ ಮೋದಿ ಅವರ “ಆತ್ಮ ನಿರ್ಭರ ಭಾರತ್” ಯೋಜನೆಗೆ ಒಂದು ಉತ್ಕೃಷ್ಟ ಉಧಾಹರಣೆಯಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *