ಅಪರಾಧ

ಡ್ರಗ್ಸ್ ಸಮೇತ ಸಿಕ್ಕಿಬಿದ್ದ ರಿಯಾಲಿಟಿ ಶೋ ಡ್ಯಾನ್ಸರ್ ಕಿಶೋರ ಶೆಟ್ಟಿ

ಮಂಗಳೂರು prajakiran.com : ಬಾಲಿವುಡ್ ನಂಟು ಹೊಂದಿರುವ ಹಲವು ರಿಯಾಲಿಟಿ ಶೋ ಡ್ಯಾನ್ಸರ್ ಆಗಿದ್ದ ಕಿಶೋರ್ ಶೆಟ್ಟಿ ಡ್ರಗ್ಸ್ ಸಮೇತ ಸಿಕ್ಕು ಬಿದ್ದಿದ್ದಾನೆ.

ಮಂಗಳೂರು ಸಿಸಿಬಿ ಪೊಲೀಸರು ಇತನನ್ನು ಬಂಧಿಸಿದ್ದು, ಡ್ರಿಲಿಂಗ್ ನಡೆಸುತ್ತಿದ್ದಾರೆ. ಇವನ ಜೊತೆಗೆ ಸಂಪರ್ಕ ಹೊಂದಿದ್ದ ಹಲವರ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

ಮಂಗಳೂರು ಮೂಲದ ಕಿಶೋರ್ ಶೆಟ್ಟಿಗೂ ರಿಯಾಲಿಟಿ ಶೋ ಆಂಕರ್ ಅಕುಲ್ ಬಾಲಾಜಿಗೂ ನಂಟು ಹೊಂದಿರುವ ಮಾಹಿತಿ ಸಿಸಿಬಿ ತನಿಖೆ ವೇಳೆ ಬಯಲಿಗೆ ಬಂದಿದೆ.

ಇತ ಸುಪರ್ ಸ್ಟಾರ್ ಪ್ರಭುದೇವಅವರ ಶಿಷ್ಯನಾಗಿದ್ದು, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋ ರನ್ನರ್ ಅಪ್ ಆಗಿದ್ದ.

ಆನಂತರ ಎಬಿಸಿಸಿ ಸಿನಿಮಾ ನಾಯಕ ನಟನಾಗಿ  ಹೆಸರು ಮಾಡಿದ್ದ. ಇತ ಡ್ರಗ್ಸ್ ಸರಬರಾಜುಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ಹಲವರಿಗೆ ನಡುಕ ಹುಟ್ಟಿಸಿದೆ.

ಮಂಗಳೂರಿಗೆ ಗೋವಾ, ಮುಂಬೈ ಹಾಗೂ ಹಲವಡೆಯಿಂದ ಡ್ರಗ್ಸ್ ಬರುತ್ತಿತ್ತು. ಅದರಲ್ಲೂ ಹಡಗು, ವಿಮಾನ ಹಾಗೂ ಕಾರ್ , ಕೋರಿಯರ್  ಪಾರ್ಸಲ್ ಮೂಲಕವೂ ಸುಗಮವಾಗಿ ಡ್ರಗ್ಸ್ ಕೈ ಸೇರುತ್ತಿತ್ತು ಎಂಬುದು ಬಯಲಿಗೆ ಬಂದಿದೆ.

ಇತನ ಹಿಂದೆ ಇನ್ನು ಯಾರ್ಯಾರು ಇದ್ದಾರೆ ಎಂಬುದು ಸಿಸಿಬಿ ತನಿಖೆ ನಡೆಸುತ್ತಿದೆ.

ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ವರೆಗೆ, ಈಗ ರಿಯಾಲಿಟಿ ಶೋಗಳ ತನಕ ಡ್ರಗ್ಸ್ ಜಾಲದ ನಂಟು ವಿಸ್ತರಿಸಿರುವುದು ಸಿಸಿಬಿ  ತನಿಖೆ ವೇಳೆ ಬಯಲಿಗೆ ಬಂದಿರುವುದು ಕರುನಾಡ ಜನತೆಯನ್ನ ಬೆಚ್ಚಿಬೀಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *