dist hospital dharwad
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ 29 ಕೋವಿಡ್ ಪಾಸಿಟಿವ್, 10 ಸಾವು

13021 ಕೋವಿಡ್  ಪ್ರಕರಣಗಳು : 10228 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com :  ಜಿಲ್ಲೆಯಲ್ಲಿ ಇಂದು 29 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13021 ಕ್ಕೆ ಏರಿದೆ.

ಇದುವರೆಗೆ 10228 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2413 ಪ್ರಕರಣಗಳು ಸಕ್ರಿಯವಾಗಿವೆ. 

68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 356 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು:*  ಹೆಬ್ಬಳ್ಳಿ ಗ್ರಾಮ,ಮನಕಿಲ್ಲಾ ಕುಂಬಾರ ಓಣಿ,ಎಮ್ ಆರ್ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಸಾರಸ್ವತಪುರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಟ್ರೈನಿಂಗ್ ಕಾಲೇಜು ರಸ್ತೆ.

*ಹುಬ್ಬಳ್ಳಿ ತಾಲೂಕು:* ಗೋಕುಲ ರಸ್ತೆಯ ಮಂಜುನಾಥ ನಗರ,ನವನಗರ, ಸಿದ್ದೇಶ್ವರ ಪಾರ್ಕ್, ಮಂಟೂರ, ಹೆಬಸೂರ,ಗೋಕುಲ ರಸ್ತೆಯ ತೋಳನಕೇರಿ ಸರಸ್ವತಿಪುರ ಹತ್ತಿರ,ವಿದ್ಯಾನಗರ, ಸಾಯಿ ನಗರ,ಶ್ರೀನಿಧಿ ಕಾಲೋನಿ,ಶಿರಡಿ ನಗರ

*ಕಲಘಟಗಿ ತಾಲೂಕಿನ*: ಶೀಗಿಗಟ್ಟಿ, *ಕುಂದಗೋಳ ತಾಲೂಕಿನ*: ನೀಲಗುಂದ,ಅಲ್ಲಾಪುರ ಹನುಮಂತ ಗುಡಿ ಹತ್ತಿರ,ಬಾಲಿತೋಟದ ಓಣಿ,

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಗಸನಹಳ್ಳಿ,ಹಿರೇಕೆರೂರ ಹಾಗೂ ಕೊಪ್ಪಳ ಜಿಲ್ಲೆ: ಗಂಗಾವತಿಯ ಇಲಾಹಿ ಕಾಲೋನಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *