ರಾಜ್ಯ

ಧಾರವಾಡ ಜಿಲ್ಲೆಯ ಎಲ್ಲಾ ನಾಗರಿಕರು ತಹಶೀಲ್ದಾರ, ಎಸಿ ಕಚೇರಿ ಆನ್ ಲೈನ ನಲ್ಲಿ ಸಂಪರ್ಕಿಸಿ




ಧಾರವಾಡ prajakiran.com : ಜಿಲ್ಲೆಯಲ್ಲಿ ಕರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವುದರಿಂದ ಕೋವಿಡ್-೧೯ ನಿಯಂತ್ರಣ ಮಾಡಲು ಮತ್ತು ಸಾರ್ವಜನಿಕರ ಹಾಗೂ ಕಚೇರಿ ಸಿಬ್ಬಂದಿಗಳ ಆರೋಗ್ಯ ಕಾಪಾಡಲು ಕಂದಾಯ ಇಲಾಖೆಯ ಕೆಲವು ಸೌಲಭ್ಯಗಳನ್ನು ಇ-ಮೇಲ್ ಮತ್ತು ವಾಟ್ಸ್ಪ್ ಮೂಲಕ ನೀಡಲು ಕ್ರಮ ಕೈಗೊಂಡಿದೆ.

ಸೇವೆಗಳನ್ನು ಪಡೆಯಲು ಪದೆ ಪದೇ ಕಚೇರಿಗೆ ಅರ್ಜಿ ಸಲ್ಲಿಸಲು ಬರುತ್ತಿರುವುದರಿಂದ ಸಾರ್ವಜನಿಕರ ಹಾಗೂ ಸಿಬ್ಬಂದಿಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಧಾರವಾಡ ತಹಶೀಲ್ದಾರ ಕಛೇರಿಗೆ ವಿವಿಧ ಕೆಲಸಗಳಿಗಾಗಿ ಅರ್ಜಿ ಸಲ್ಲಿಸುವವರು tahasildardwd@gmail.com ಇಮೇಲ್‌ಗೆ ಅರ್ಜಿ ಸಲ್ಲಿಸಬಹುದು. ಹಾಗೂ ವಾಟ್ಸ್ಪ್ ಮೂಲಕ ಅರ್ಜಿ ಸಲ್ಲಿಸುವವರು.



ಮೊಬೈಲ್ ನಂ. ೭೬೧೯೪೭೧೦೯೩ ಗೆ ಅರ್ಜಿಯ ಫೋಟೊ ಪ್ರತಿ ಸಲ್ಲಿಸುವುದು, ಈ ಕಚೇರಿಯಿಂದ ಸಿಗುವ ಸಾಮಾಜಿಕ ಭದ್ರತೆ ಯೋಜನೆ, ಹಾಗೂ ವಿವಿಧ ಪ್ರಮಾಣ ಪತ್ರಗಳಿಗಾಗಿ ಗ್ರಾಮ ಪಂಚಾಯತದಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಆನ್‌ಲೈನ್ ಕೇಂದ್ರದಲ್ಲಿ ಪಹಣಿ ಪತ್ರಿಕೆಗಳನ್ನು ಪಡೆಯಬಹುದು.

ಈ ಕಚೇರಿಯ ದೂರವಾಣಿ ಸಂಖ್ಯೆ ೦೮೩೬-೨೨೩೩೮೨೨ ಗೆ ಕರೆ ಮಾಡಿ ತಮಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಧಾರವಾಡ ತಹಶೀಲ್ದಾರ ಸಂತೋಷ ಬಿರಾದಾರ   ತಿಳಿಸಿದ್ದಾರೆ.

ಉಪ ವಿಭಾಗಾಧಿಕಾರಿಗಳ ಕಚೇರಿ ಸಂಪರ್ಕ ಸಂಖ್ಯೆ ಮತ್ತು ಇ-ಮೆಲ್ ವಿಳಾಸ : ಸಾರ್ವಜನಿಕರು ಕಚೇರಿಗೆ ಬರುವುದನ್ನು ಕಡಿಮೆ ಮಾಡಿ ತಮ್ಮ ಅರ್ಜಿ/ ಇತರೆ ಆಹವಾಲುಗಳನ್ನು ಉಪವಿಭಾಗಾಧಿಕಾರಿ ಕಾರ್ಯಾಲಯದ ವಾಟ್ಸ್ಆಪ್ ನಂ:೯೪೮೧೧೩೦೯೨೨ ಅಥವಾ ಇ-ಮೇಲ್-  accwd_123@yahoo.com ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.



ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರ ಕಚೇರಿಗಳ ವಾಟ್ಸಪ್ ನಂಬರ್ ಮಾಹಿತಿ.
1. ಜಿಲ್ಲಾಧಿಕಾರಿಗಳ ಕಚೇರಿ, ಧಾರವಾಡ- 9449847641
2. ಉಪವಿಭಾಗಾಧಿಕಾರಿಗಳ ಕಚೇರಿ, ಧಾರವಾಡ- 9481130922
3. ತಹಶೀಲ್ದಾರ ಕಚೇರಿ, ಧಾರವಾಡ- 7619471093
4. ತಹಶೀಲ್ದಾರ ಕಚೇರಿ, ಹುಬ್ಬಳ್ಳಿ ನಗರ- 8088785423
5. ತಹಶೀಲ್ದಾರ ಕಚೇರಿ, ಹುಬ್ಬಳ್ಳಿ- 7019674817
6. ತಹಶೀಲ್ದಾರ ಕಚೇರಿ, ನವಲಗುಂದ- 9880237524
7. ತಹಶೀಲ್ದಾರ ಕಚೇರಿ, ಅಣ್ಣಿಗೇರಿ- 9008249921
8. ತಹಶೀಲ್ದಾರ ಕಚೇರಿ, ಕುಂದಗೋಳ – 7022477439
9. ತಹಶೀಲ್ದಾರ ಕಚೇರಿ, ಕಲಘಟಗಿ- 9880922510
10. ತಹಶೀಲ್ದಾರ ಕಚೇರಿ, ಅಳ್ನಾವರ- 8867039431.

ಜಿಲ್ಲೆಯ ಎಲ್ಲಾ ನಾಗರಿಕರು ತಮಗೆ ಸಂಬಂಧಿಸಿದ ಕಚೇರಿಗಳಿಗೆ ಹೋಗಿ ಅರ್ಜಿ ನೀಡುವ ಬದಲು ವಾಟ್ಸಪ್ ಮೂಲಕ ನೀಡಲು ಜಿಲ್ಲಾಡಳಿತದಿಂದ ಕೋರಿದೆ.
ವಿ.ಸೂ.: ಅರ್ಜಿದಾರರು ಅರ್ಜಿಯಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್, ವಿಳಾಸ ಹಾಗೂ ಅರ್ಜಿ ಸಲ್ಲಿಸಲು ಉದ್ದೇಶವನ್ನು ಲಿಖಿತವಾಗಿ ತಮ್ಮ ಸಹಿಯೊಂದಿಗೆ ಸಲ್ಲಿಸಲು ಕೋರಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *