ಧಾರವಾಡ prajakiran.com : ಜೂನ್/ಜುಲೈ -೨೦೨೦ ರ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯವು ಇದೇ ಜುಲೈ ೧೩ ರಿಂದ ಪ್ರಾರಂಭವಾಗಲಿವೆ.
ಧಾರವಾಡ ಜಿಲ್ಲೆಯ ಒಟ್ಟು ೧೦ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ಫಲಿತಾಂಶವನ್ನು ಕಾತುರದಿಂದ ಕಾಯುತ್ತಿರುವ ಮಕ್ಕಳಿಗೆ ಬೇಗ ಫಲಿತಾಂಶ ನೀಡುವುದು ಮಹತ್ವದ ಜವಾಬ್ದಾರಿಯಾಗಿದೆ.
ಎಲ್ಲ ಸರ್ಕಾರಿ/ಖಾಸಗಿ ಅನುದಾನಿತ/ ಅನುದಾನರಹಿತ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಲು ಉಪನಿರ್ದೇಶಕರು ಸೂಚಿಸಿದ್ದಾರೆ.
ಮೌಲ್ಯಮಾಪನ ಕೇಂದ್ರಗಳನ್ನು ಪ್ರತಿನಿತ್ಯ ಸ್ಯಾನಿಟೈಜೇಶನ್ ಮಾಡುವದರ ಜೊತೆಗೆ ಪ್ರತಿದಿನ ಕರ್ತವ್ಯದ ಮೇಲಿರುವ ಸಿಬ್ಬಂದಿಗಳಿಗೆ ಆರೋಗ್ಯ ತಪಾಣೆಗಾಗಿ ಆರೋಗ್ಯ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ.
ಶಿಕ್ಷಕರು ಮೌಲ್ಯಮಾಪನ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವುದಲ್ಲದೆ ಮಾಸ್ಕನ್ನು ಧರಿಸುವುದು ಕಡ್ಡಾಯವಾಗಿರುತ್ತದೆ.
ತಮ್ಮ ಅಹಾರ, ನೀರಿನ ಬಾಟಲ್, ಮತ್ತು ಸ್ಯಾನಿಟೈಜರ್ ಇವುಗಳನ್ನು ತಮ್ಮ ಜೊತೆಯಲ್ಲಿ ತರಲು ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.