ರಾಜ್ಯ

ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದಗೆ ಸೋಲುವ ಭೀತಿ

ಕಾಂಗ್ರೆಸ್ ಪಕ್ಷ ಬೆಂಬಲಿಸುವ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ 

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಬೆಲ್ಲದಗೆ ಈ ಬಾರಿ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲಿಸುವ ಸಾಕಷ್ಟು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಡೀಲಿಟ್ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ್ಕೆ ಚಿಂಚೊರೆ ಆರೋಪಿಸಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ವಾಡ್೯ 30,34,35 ಹಾಗೂ 24,25 ಸೇರಿದಂತೆ ಹಲವಾರು ವಾಡ್೯ಗಳಲ್ಲಿ ಕಾಂಗ್ರೆಸ್ ಬೆಂಬಲಿಸುವ ಅಲ್ಪಸಂಖ್ಯಾತರ, ಹಿಂದುಳಿದ ವಗ೯ ಸೇರಿದಂತೆ ಸುಮಾರು ಸಾವಿರಾರು ಮತದಾರರ ಹೆಸರನ್ನು ಡೀಲಿಟ್ ಮಾಡಲಾಗಿದೆ ಎಂದು ಕಿಡಿಕಾರಿದರು.

ಶಾಸಕ ಬೆಲ್ಲದ ಅವರು ಎ.ಎಮ್ ಎಂಬ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಮತದಾರರ ಹೆಸರಿನ ಪಟ್ಟಿ ಪರಿಶೀಲನೆ ನೆಪದಲ್ಲಿ ಮನೆ–ಮನೆಗೆ ತೆರಳಿ ಅವರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ವಿರೋಧ ಕಂಡು ಬಂದರೆ ಪಟ್ಟಿಯಿಂದ ಹೆಸರು ಕೈ ಬಿಡುತ್ತಿದ್ದಾರೆ ಎಂದರು.

ಡಿ.8 ರವರೆಗೆ ಮತದಾರರ ಹೆಸರು ಸೇಪ೯ಡೆ ದಿನಾಂಕವನ್ನು ವಿಸ್ತರಿಸಿ ಇನ್ನೂ 15 ರಿಂದ 20 ದಿನಗಳ ಕಾಲ ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಜಲಮಂಡಳಿಯ ಗುತ್ತಿಗೆ ನೌಕರರನ್ನು ನ್ಯಾಯಾಲಯದ ತೀಪಿ೯ನಂತೆ ಹುದ್ದೆಗಳನ್ನು ಕಾಯಂ ಮಾಡಬೇಕು. ಅವರಿಗೆ ಶೀಘ್ರವೇ ವೇತನ ಮಂಜೂರ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಡಾ.ಸಿ.ಪಿ.ಶಿರಗುಪ್ಪಿ, ರವಿ ಮಾಳಗೇರ್ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *