ಅಂತಾರಾಷ್ಟ್ರೀಯ

ದೇಶದ 32 ಡೆಡ್ಲಿ ಕರೋನಾ ಜಿಲ್ಲೆಗಳಲ್ಲಿ ರಾಜ್ಯದ ಎರಡು ಜಿಲ್ಲೆ….!





ನವದೆಹಲಿ prajakiran.com : ದೇಶದ್ಯಾಂತ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಶೇ. 82 ಸೋಂಕಿತರು ದೇಶದ ಕೇವಲ ಆರು ರಾಜ್ಯಗಳಲ್ಲಿದ್ದಾರೆ ಎಂಬ ಆತಂಕಕಾರಿ ಸಂಗತಿ ಹೊರ ಬಿದ್ದಿದೆ.

ಗುರುವಾರ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆತಂಕಕಾರಿ ಸಂಗತಿ ಹೊರಬಿದ್ದಿದ್ದು, ಅದರಲ್ಲಿ ದೇಶದ 32 ಜಿಲ್ಲೆಗಳನ್ನು ಕರೋನಾ ಹಾಟ್ ಸ್ಪಾಟ್ ಡೆಡ್ಲಿ ಜಿಲ್ಲೆಗಳೆಂದು ಗುರುತಿಸಲಾಗಿದೆ.

ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಆ 32 ಜಿಲ್ಲೆಗಳಲ್ಲಿ ರಾಜ್ಯದ ಎರಡು ಜಿಲ್ಲೆಗಳು ಸ್ಥಾನ ಪಡೆದಿವೆ. ಒಂದು ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಾದರೆ, ಇನ್ನೊಂದು ರಾಜ್ಯದ ಮುಕುಟುಪ್ರಾಯವಾಗಿರುವ ಗಡಿ ಜಿಲ್ಲೆ ಬೀದರ.



ಈವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12509 ಇದ್ದರೆ, ಈ ಪೈಕಿ ಈವರೆಗೆ 2228 ಜನ ಮಾತ್ರ ಬಿಡುಗಡೆಗೊಂಡಿದ್ದಾರೆ.

ಇನ್ನೂಳಿದ 10,103 ಪ್ರಕರಣಗಳು ಸಕ್ರಿಯವಾಗಿವೆ. ಅಲ್ಲದೆ, ಈವರೆಗೆ 177 ಜನ ಚಿಕಿತ್ಸೆ ಫಲಿಸದೆ ವಿವಿಧ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ.

ಅದೇರೀತಿ ಬೀದರನಲ್ಲಿ879 ಸೋಂಕಿತರಿದ್ದು, 562 ಜನ ಬಿಡುಗಡೆಗೊಂಡಿದ್ದಾರೆ. 268 ಸಕ್ರಿಯ ಪ್ರಕರಣಗಳಿವೆ.ಆದರೆ ಈವರೆಗೆ ಚಿಕಿತ್ಸೆ ಫಲಿಸದೆ 49 ಜನ ಸಾವನ್ನಪ್ಪಿದ್ದಾರೆ.



ಹೀಗಾಗಿ ಈ ಎರಡು ಜಿಲ್ಲೆಗಳು ದೇಶದ 32 ಡೆಡ್ಲಿ ಜಿಲ್ಲೆಗಳಲ್ಲಿ ಸ್ಥಾನ ಪಡೆದಿವೆ. ಅವುಗಳ ಮರಣ ಪ್ರಮಾಣ ಕಡಿಮೆಗೊಳಿಸಲು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದು, ಹಲವು ಕಾರ್ಯತಂತ್ರ ರೂಪಿಸಲು ಸಲಹೆ ಕೋರಿದ್ದಾರೆ.

ಅಲ್ಲದೆ, ಭಾರತದಲ್ಲಿ ಸಮುದಾಯಕ್ಕೆ ಕರೋನಾ ಸೋಂಕು ಹರಡಿಲ್ಲ. ಕೆಲವು ಭಾಗಗಳಲ್ಲಿ ಸೋಂಕು ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಿದರು.




ದೇಶದ ಎಲ್ಲಾ ರಾಜ್ಯಗಳೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದೇವೆ. ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕಳವಳ ವ್ಯಕ್ತಪಡಿಸಿದ್ದು, 15 ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ದೇಶದಲ್ಲಿ ದಿನನಿತ್ಯ 400-500 ಸಾವು ಸಂಭವಿಸುತ್ತಿರುವುದರಿಂದ ವಿಶ್ವದ ನಂಬರ್ ಮೂರನೇ ಪಟ್ಟ   ಪಡೆದಿರುವುದು ಅದರಿಂದ ಹಣೆಪಟ್ಟಿ ಕಳಚಿಕೊಳ್ಳಲು ಕಸರತ್ತು ನಡೆಸುತ್ತಿದೆ. ಆದರೂ ಹತೋಟಿ ಸಾಧಿಸಲು ಸಾಧ್ಯವಾಗುತ್ತಿಲ್ಲ.



ಒಂದು ವೇಳೆ ಪರಿಸ್ಥೀತಿ ಹೀಗೆ ಮುಂದುವರೆದರೆ, 40 ಜನ ಸಾವನ್ನಪ್ಪಿರುವ ರಾಜ್ಯದ ಬಳ್ಳಾರಿ, 30 ಜನ ಸಾವನ್ನಪ್ಪಿರುವ ಕಲಬುರಗಿ ಜಿಲ್ಲೆಗಳು ಕೂಡ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.  

ಇದರಿಂದಾಗಿ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದು, ಡೆಡ್ಲಿ ಕರೋನಾ ಹಾಟ್ ಸ್ಪಾಟಗಳ ಜಿಲ್ಲೆ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *