ರಾಜ್ಯ

ಲಂಚ ಪಡೆದಿದ್ದ ಹುಬ್ಬಳ್ಳಿಯ ಭೂಮಾಪಕ ರಮೇಶ ಡವಳಗಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ

ಧಾರವಾಡ ಪ್ರಜಾಕಿರಣ.ಕಾಮ್ ಏ.26 : ಲೋಕಾಯುಕ್ತ ಹಾಗೂ ಎಸಿಬಿ ಪೊಲೀಸ ಠಾಣೆ ಕ್ರೈಂ ನಂಬರ 04/2018 ಕಲಂ.7,13(1) (ಡಿ) ಸಹ ಕಲಂ 13 (2) ಲಂಚ ನಿರೋಧ ಕಾಯ್ದೆ-1988ರ ಆಪಾದಿತ ಅಧಿಕಾರಿ  ರಮೇಶ ತಂದೆ ನೀಲಪ್ಪ ಡವಳಗಿ, ಭೂಮಾಪಕರು, ಉದ್ಯೋಗ: ದೂದಾಖಲೆಗಳ ಉಪ ನಿರ್ದೇಶಕರ ಕಚೇರಿ, ಅರ್ಬನ್ ಪ್ರಾಪರ್ಟಿ ಓನರಶಿಪ್ ರೆಕಾಡ್ರ್ಸ್ ವಿಭಾಗ, ಮಿನಿವಿಧಾನಸೌಧ, ಹುಬ್ಬಳ್ಳಿ ಇವರು ಫಿರ್ಯಾದಿದಾರನ ಜಮೀನಿನ ಸರ್ವೆಯನ್ನು ನ್ಯಾಯಯುತವಾಗಿ ಮಾಡಬೇಕಾದ ಕೆಲಸಕ್ಕೆ ಲಂಚದ ಹಣ ರೂ.4,000/- ಗಳನ್ನು ದಿನಾಂಕ:28-03-2018 ರಂದು ಸ್ವೀಕರಿಸುತ್ತಿರುವ ಸಮಯದಲ್ಲಿ ಲೋಕಾಯುಕ್ತ /ಎಸಿಬಿ ಪೊಲೀಸ್ ಠಾಣೆ, ಧಾರವಾಡ ಅಧಿಕಾರಿಗಳ ಬಲೆಗೆ ಬಿದ್ದಿದ್ದ.

ಅಂದಿನ ಲೋಕಾಯುಕ್ತ /ಎಸಿಬಿ ಪೊಲೀಸ್ ಇನ್ಸ್‍ಪೆಕ್ಟರುಗಳಾದ ಪ್ರಮೋದ ಸಿ. ಯಲಿಗಾರ ಮತ್ತು ಮಂಜುನಾಥ ಜಿ. ಹಿರೇಮಠ, ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಸದರಿ ಪ್ರಕರಣದ ವಿಚಾರಣೆಯನ್ನು ಮಾನ್ಯ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ, ಧಾರವಾಡ ನ್ಯಾಯಾಧೀಶರಾದ ಎನ್. ಸುಬ್ರಮಣ್ಯ ರವರು 25-04-2023 ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ಸದರಿ ಆರೋಪಿತನ ವಿರುದ್ಧ ಅಪರಾಧ ಸಾಬೀತಾಗಿ, ಆರೋಪಿತನಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ.10,000/-ಗಳ ದಂಡ ವಿಧಿಸಿರುತ್ತಾರೆ.

 ಸದರಿ ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ  ಎಸ್.ಎಸ್. ಶಿವಳ್ಳಿಯವರು ಪ್ರಕರಣ ಕುರಿತು ವಾದ ಮಂಡಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *