ಅಪರಾಧ ರಾಜ್ಯ

ಯೋಗೇಶ್ ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಮತ್ತೆ ಚುರುಕು : ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತರ ವಿಚಾರಣೆ

ಧಾರವಾಡ Prajakiran.com :  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯಯೋಗೇಶಗೌಡ ಗೌಡರ ಹತ್ಯೆ ಪ್ರಕರಣದ ಸಿಬಿಐ ತನಿಖೆ ಮತ್ತೆ  ಚುರುಕುಗೊಂಡಿದೆ. ಧಾರವಾಡ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಈ ಹಿಂದೆ ಸರ್ಕಾರಿ ಅಭಿಯೋಜಕಿಯರಾಗಿದ್ದ ಸುಮೀತ್ರಾ ಅಂಚಟಗೇರಿ, ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತರಾದ ಪ್ರಶಾಂತ್ ಕೇಕರೆ, ಬಸವರಾಜ ಮುತ್ತಗಿ, ಸುಮೀತ್ರಾ ಅಂಚಟಗೇರಿ ಸಹೋದರ ವಿಶ್ವನಾಥ ಯಂಡಿಗೇರಿ ಅವರನ್ನು ಗುರುವಾರ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆಯಿಸಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂದು ಧಾರವಾಡ ಉಪನಗರ ಪೊಲೀಸ್ ಠಾಣೆಗೆ […]

ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಧಾರವಾಡ ಹೈಕೋರ್ಟ್

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.  ಧಾರವಾಡದ ಹೈಕೋರ್ಟ್ ಎಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಕೆ.ಎನ್. ನಟರಾಜ್ ಅವರು ಗುರುವಾರ ಈ ಮಹತ್ವದ ಆದೇಶ ಹೊರಡಿಸಿದರು. ಧಾರವಾಡ ಹೈಕೋರ್ಟ್ ನಲ್ಲಿ ಬುಧವಾರ ಸಿಬಿಐ ಪರ ಸುಪ್ರೀಂ ಕೋರ್ಟ್ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಎರಡು ಗಂಟೆಗಳ […]

ರಾಜ್ಯ

ಧಾರವಾಡದಲ್ಲಿ ಜ.26 ರಂದು ಕೇಂದ್ರದ ಕೃಷಿ ನೀತಿಯನ್ನು ಖಂಡಿಸಿ ಟ್ರ್ಯಾಕ್ಟರ್ ಜಾಥಾ

ಧಾರವಾಡ prajakiran.com : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿಯನ್ನು ಖಂಡಿಸಿ ದಿ. 26 ರಂದು ಬೃಹತ್ ಟ್ರಾಕ್ಟರ್ ಜಾಥಾ ಹಮ್ಮಿಕೊಳ್ಳಲು ನಗರದ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬುಧವಾರ ಜರುಗಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳ‌ ಸಭೆಯಲ್ಲಿ ತೀರ್ಮಾನಿಸಲಾಯಿತು. ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ ಅವರ ಮುಂದಾಳತ್ವದಲ್ಲಿ ಕರೆದಿದ್ದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಜ.26 ರಂದು ಟ್ರ್ಯಾಕ್ಟರ್ ಜಾಥಾ ನಡೆಸಿ […]

ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವವಿನಯ ಕುಲಕರ್ಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಜ.21ಕ್ಕೆ ಧಾರವಾಡ ಹೈಕೋರ್ಟ್ ಮುಂದೂಡಿದೆ. ಧಾರವಾಡದ ಹೈಕೋರ್ಟ್ ಎಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಕೆ.ಎನ್. ನಟರಾಜ್ ಅವರು ಈ ಮಹತ್ವದ ಆದೇಶ ಹೊರಡಿಸಿದರು. ಧಾರವಾಡ ಹೈಕೋರ್ಟ್ ನಲ್ಲಿ ಬುಧವಾರ ಸಿಬಿಐ ಪರ ಸುಪ್ರೀಂ ಕೋರ್ಟ್ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಒಂದೂವರೆ ಗಂಟೆಗಳ ಕಾಲ ಮಾಜಿ ಸಚಿವ ವಿನಯ ಕುಲಕರ್ಣಿ […]

ರಾಜ್ಯ

ಸಮಾಜ ಸಂಘಟನೆಗೆ ರೂಪರೇಶಗಳು ಸಿದ್ಧ ಎಂದ ಗಾಲಿ ಜನಾರ್ಧನ ರೆಡ್ಡಿ

ಹೇಮ-ವೇಮ ರೆಡ್ಡಿ ಜನಸಂಘ ಮುಖ್ಯ ಕಾರ್ಯಾಲಯ ಉದ್ಘಾಟನೆ ಬೆಂಗಳೂರು prajakiran.com : ತತ್ವಜ್ಞಾನಿ, ಮಹಾಯೋಗಿ ಶ್ರೀ ವೇಮನರ ೬೦೯ನೇ ಜಯೋಂತ್ಯೋತ್ಸವ ಹಾಗೂ ಹೇಮ-ವೇಮ ರೆಡ್ಡಿ ಜನಸಂಘ ಕರ್ನಾಟಕದ ಮುಖ್ಯ ಕಾರ್ಯಾಲಯದ ಉದ್ಘಾಟನೆ ಬೆಂಗಳೂರು ನಗರದ ಬಸವೇಶ್ವರ ಸರ್ಕಾಲ್‌ನಲ್ಲಿರುವ ಹೈಪಾಯಿಂಟ್ ಕಟ್ಟಡದಲ್ಲಿ ಅತ್ಯಂತ ಭಕ್ತಿ ಪೂರ್ವಕವಾಗಿ ನಡೆಯಿತು. ರೆಡ್ಡಿ ಸಮಾಜದ ಸ್ವಾಮೀಜಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೆಡಗಿನಮುದ್ರ ಅವರು, ವೇಮನವರ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿಗಳು ವೇಮನರ ತತ್ವ ಆದರ್ಶಗಳನ್ನು […]

ಅಪರಾಧ ರಾಜ್ಯ

ಧಾರವಾಡದ ಮಾರಡಗಿ ಯೋಧನ ಮನೆಯಲ್ಲಿ ಕಳ್ಳರ ಕೈ ಚಳಕ

ಧಾರವಾಡ Prajakiran.com: ತಾಲೂಕಿನ ಮಾರಡಗಿ ಗ್ರಾಮದಲ್ಲಿ ಹಿತ್ತಲ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನ ಸೇರಿದಂತೆ ಹಣ ದೋಚಿಕೊಂಡು ಕಳ್ಳರು ಕೈಚಳಕ ತೋರಿಸಿದ ಘಟನೆ ನಡೆದಿದೆ.  ಈ ಕುರಿತು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಇನಸ್ಪೆಕ್ಟರ್ ಶ್ರೀಧರ ಸುತಾರೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಮನೆಯ ಹಿತ್ತಲ ಬಾಗಿಲ ಕೀಲಿ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನ ಸೇರಿದಂತೆ ಹಣ ದೋಚಿಕೊಂಡು […]

ರಾಜ್ಯ

ತಾಂಡವ ಹಿಂದಿ ಚಿತ್ರದಲ್ಲಿ ದೇವತೆಗಳ ಅವಹೇಳನ : ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಧಾರವಾಡ Prajakiran.com : ಹಿಂದೂ ಧರ್ಮದ ದೇವತೆಗಳ ಬಗ್ಗೆ ಅವಹೇಳನ  ಮಾಡಿದ ಹಿನ್ನೆಲೆಯಲ್ಲಿ ತಾಂಡವ ಹಿಂದಿ ಚಲನಚಿತ್ರದ ವಿರುದ್ಧ ಧಾರವಾಡದ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ತಾಂಡವ ಹಿಂದಿ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅವಹೇಳನ ಮಾಡಿದ್ದಾರೆ ಎಂದು ಚಿತ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಚಿತ್ರ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.  ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಸೇರಿದಂತೆ […]

ರಾಜ್ಯ

ಹುಬ್ಬಳ್ಳಿ-ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಒತ್ತಾಯಿಸಿ ಪಾದಯಾತ್ರೆ

ಹೋರಾಟಕ್ಕೆ ಕೆಲಗೇರಿ ಗ್ರಾಮಸ್ಥರು, ಲಾರಿ ಮಾಲೀಕರ ಸಂಘ, ಜನಜಾಗೃತಿ ಸಂಘ ಸೇರಿದಂತೆ ಹಲವರ ಬೆಂಬಲ ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೈಪಾಸ್ ಗಳಿಗೆ ಹುಬ್ಬಳ್ಳಿಯ ಗೊಬ್ಬುರ ಕ್ರಾಸ್ ನಿಂದ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್ ವರೆಗೆ ಬರುವ ಬೈಪಾಸ್ ಗಳ ರಸ್ತೆ ಅಗಲೀಕರಣ, ತಾಂತ್ರಿಕ ನಿರ್ಮಾಣ, ಸರ್ವಿಸ್ ರೋಡ್ ನಿರ್ಮಾಣಕ್ಕೆ ಆಗ್ರಹಿಸಿ ಸೋಮವಾರ ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಈ ಪಾದಯಾತ್ರೆಗೆ ಕೆಲಗೇರಿ ಗ್ರಾಮಸ್ಥರು, ಲಾರಿ ಮಾಲೀಕರ […]

ರಾಜ್ಯ

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ವಿಸ್ತರಿಸದಿದ್ದಲ್ಲಿ ಹೋರಾಟ : ಇಸ್ಮಾಯಿಲ್ ತಮಟಗಾರ ಎಚ್ಚರಿಕೆ

ಧಾರವಾಡ : ಮಹಾರಾಷ್ಟ್ರದ ಥಾಣೆಯಿಂದ ಚೆನ್ನೈವರೆಗಿನ ೧,೨೩೫ ಕಿ.ಮೀ. ಉದ್ದದ ಸುವರ್ಣ ಚತುಷ್ಪಥ ರಸ್ತೆಯಲ್ಲಿ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ ೨೯.೦೪ ಕಿ.ಮೀ. ಉದ್ದನೇ ರಸ್ತೆ ಮಾತ್ರ ಕಿರಿದಾದ ರಸ್ತೆಯಾಗಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆ ನಿರ್ಮಿಸಿರುವ ಈ ರಸ್ತೆ ಇಲ್ಲಿಯವರೆಗೂ ೪೫೦ ಹೆಚ್ಚು ಜನರ ಬಲಿ ಪಡೆದಿದ್ದು, ಕೂಡಲೇ ಇದನ್ನು ವಿಸ್ತರಿಸಲು ಧಾರವಾಡ ಅಂಜುಮನ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಆಗ್ರಹಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಬೈಪಾಸ್ ರಸ್ತೆಗೆ ಪ್ರಸಕ್ತ ಸಂಚಾರ ದಟ್ಟಣೆ ಲಕ್ಷದಲ್ಲಿಟ್ಟುಕೊಂಡಲ್ಲಿ […]

ರಾಜ್ಯ

ಹುಬ್ಬಳ್ಳಿ-ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಶೀಘ್ರದಲ್ಲಿಯೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ

 ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ನಂದಿ ಇನ್ಪಾಸ್ಟಕ್ಷರ್ ಕಂಪನಿ ಮಾಲೀಕ ಅಶೋಕ ಖೇಣಿ ನೇರ ಹೊಣೆ : ದೀಪಕ ಚಿಂಚೋರೆ ಆರೋಪ ಧಾರವಾಡ prajakiran.com : ಧಾರವಾಡದ ಹೊರವಲಯದಲ್ಲಿರುವ ಇಟ್ಟಿಗಟ್ಟಿ ಕ್ರಾಸ್ ಬಳಿ ಜ.15ರಂದು ಸಂಭವಿಸಿದ ಭೀಕರ ಅಪಘಾತಕ್ಕೆ ಅದರ ಗುತ್ತಿಗೆದಾರ ಸಂಸ್ಥೆಯಾಗಿರುವ ನಂದಿ ಇನ್ಪಾಸ್ಟಕ್ಷರ್ ಕಂಪನಿ ಮಾಲೀಕ ಅಶೋಕ ಖೇಣಿ ನೇರ ಹೊಣೆಯಾಗಿದ್ದಾರೆ. ಹೀಗಾಗಿ ಅವರನ್ನು ತಕ್ಷಣ ಬಂಧಿಸಬೇಕು ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದರು. ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ […]