ಜಿಲ್ಲೆ

ಧಾರವಾಡದ ನಿವೃತ್ತ ಡಿಡಿಪಿಐ ವಿ.ಎಂ ಪಾಟೀಲ ಇನ್ನಿಲ್ಲ

ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿನ ಭೋವಿ ಗಲ್ಲಿ ನಿವಾಸಿ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾಗಿದ್ದ ವಿರೂಪಾಕ್ಷಗೌಡ.ಎಂ.ಪಾಟೀಲ (74) ಅವರು ಇಂದು ಮಂಗಳವಾರ ಜೂ.18 ರಂದು ಬೆಳಗಿನ 3.30 ಕ್ಕೆ ಇಹಲೋಕ ತ್ಯಜಿಸಿದರು. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3.30 ಕ್ಕೆ ನೆರವೇರಲಿದೆ. ಮೃತರಿಗೆ ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಹುಬ್ಬಳ್ಳಿ ಧಾರವಾಡ ನಗರ ವಲಯ, ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ ಕ್ಷೇತ್ರದ ಶಿಕ್ಷಣಾಧಿಕಾರಿಯಾಗಿ,ಡೈಟ್ ಪ್ರಾಂಶುಪಾಲರಾಗಿ, ಧಾರವಾಡ ಜಿಲ್ಲೆಯ ಉಪನಿರ್ದೇಶಕ, […]

ಜಿಲ್ಲೆ

ಧಾರವಾಡ : ಶ್ಯಾಮ್ ಮಲ್ಲನಗೌಡರ ಪುತ್ರ ಸಾಯಿಕಿರಣ್ ಇನ್ನಿಲ್ಲ….!

ಶಿಕ್ಷಕ ಶ್ಯಾಮ್ ಮಲ್ಲನಗೌಡರ ಪುತ್ರ ಸಾಯಿಕಿರಣ್ ಇನ್ನಿಲ್ಲ ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲೆಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘಟನೆಯ ಮುಖಂಡ ಹಾಗೂ ಸೇಂಟ್‌ ಜೋಸೆಫ್ ಶಾಲೆ ಶಿಕ್ಷಕರು ಆಗಿರುವ ಶ್ಯಾಮ್ ಮಲ್ಲನ ಗೌಡರ ಪುತ್ರ ಸಾಯಿಕಿರಣ (ಆದರ್ಶ) ಶ್ಯಾಮ್ ಮಲ್ಲನಗೌಡರ (23) ವಿಧಿವಶರಾದರು. ಅವರು ನಿನ್ನೆ ಶುಕ್ರವಾರ ರಾತ್ರಿ ಮೈಸೂರಿನಲ್ಲಿ ಅಪಘಾತದಲ್ಲಿ ಇಹಲೋಕವನ್ನು ತ್ಯಜಿಸಿದರು. ಇವರು ಮೈಸೂರಿನ ಎಲ್ ಆಂಡ್ ಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಯಿ ಕಿರಣ್ ತಂದೆ ಶ್ಯಾಮ್ […]

ಜಿಲ್ಲೆ

ವಿನಯ ಕುಲಕರ್ಣಿಯನ್ನು ‌ಜಿಲ್ಲೆಯಿಂದ‌ ಹೊರಗಿಟ್ಟಿದ್ದು ಜೋಶಿಯಲ್ಲ, ಸುಪ್ರೀಂಕೋರ್ಟ್

*ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೆಗೆ ಮಾಜಿ ಮೇಯರ್ ಈರೇಶ ಅಂಚಟಗೇರಿ ತಿರುಗೇಟು* *ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಿರುದ್ಧ ಇಲ್ಲಸಲ್ಲದ ಆರೋಪ* *ವಿನಯ ಕುಲಕರ್ಣಿ ‌ಜಿಲ್ಲೆಯಿಂದ‌ ಹೊರಗಿಟ್ಟಿದ್ದು ಸುಪ್ರೀಂಕೋರ್ಟ್* *ಪ್ರಹ್ಲಾದ ಜೋಶಿ ಲಿಂಗಾಯತ ವಿರೋಧಿಯಲ್ಲ* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರಿಗೆ ಧಾರವಾಡ ಜಿಲ್ಲೆಯ ಲಿಂಗಾಯತ ಸಮಾಜದ ಮುಖಂಡರು, ಮಾಜಿ ಮೇಯರ್ ಈರೇಶ ಅಂಚಟಗೇರಿ ಹಲವಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಇತ್ತೀಚಿಗೆ ಶಾಸಕರು ಸುದ್ದಿ ಮಾಧ್ಯಮವೊಂದರಲ್ಲಿ ಪಾಲಿಕೆ ಸದಸ್ಯರು […]

ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಮನೆಯಿಂದ ಶೇ.96.05 ರಷ್ಟು ಮತದಾನ

ಧಾರವಾಡ ಜಿಲ್ಲೆಯಲ್ಲಿ ಮನೆಯಿಂದ ಮತದಾನ ಮಾಡಿದ 1141 ಹಿರಿಯ ನಾಗರಿಕರು, 368 ವಿಕಲಚೇತನರು : ಚುನಾವಣಾಧಿಕಾರಿ ದಿವ್ಯ ಪ್ರಭು. ಧಾರವಾಡ ಪ್ರಜಾಕಿರಣ.ಕಾಮ್  ಏಪ್ರಿಲ್ 26: ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನ ಸಭಾ ಮತಕ್ಷೇತ್ರಗಳು ಸೇರಿ 1141 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 368 ವಿಕಲಚೇತನರು ಸೇರಿ ಒಟ್ಟು 1509 ಜನ ಮತದಾರರು ಮನೆಯಿಂದ ಮತ ಚಲಾಯಿಸಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು ಸೇರಿದಂತೆ 85 ವರ್ಷ ಮೇಲ್ಪಟ್ಟ […]

ಜಿಲ್ಲೆ

ಧಾರವಾಡದಲ್ಲಿ ಪೊಲೀಸರು, ಸಿಐಎಸ್‌ಎಫ್‌ ಕಮಾಂಡೊಗಳಿಂದ ಪಥ ಸಂಚಲನ

ಪೊಲೀಸರು, ಸಿಐಎಸ್‌ಎಫ್‌ ಕಮಾಂಡೊಗಳಿಂದ ರೂಟ್ ಮಾರ್ಚ್ – ನಗರ ಸುತ್ತಿದ ಡಿಸಿ ದಿವ್ಯ ಪ್ರಭು ಧಾರವಾಡ ಪ್ರಜಾಕಿರಣ.ಕಾಮ್  : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದಲ್ಲಿ ಅವಳಿನಗರ ಪೊಲೀಸ್‌ ಕಮೀಷನರೇಟ್ ವತಿಯಿಂದ ಪಥ ಸಂಚಲನ ಮ್ಮಿಕೊಳ್ಳಲಾಗಿತ್ತು. ಈ ರೂಟ್ ಮಾರ್ಚ್‌ನಲ್ಲಿ ಸಿಐಎಸ್‌ಎಫ್‌ ಕಮಾಂಡೊಗಳು, ಕೆಎಸ್‌ಆರ್‌ಪಿ ಪ್ಲಟೂನ್, ಸಿಎಆ‌ರ್ ಪೊಲೀಸರು ಪಾಲ್ಗೊಂಡಿದ್ದರು. ಈ ಪೊಲೀಸರೊಂದಿಗೆ ಸ್ವತಃ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್‌ ಆಯುಕ್ತ ರೇಣುಕಾ ಸುಕುಮಾರ, ಡಿಸಿಪಿಗಳಾದ ರಾಜೀವ್‌ ಎಂ., ಆ‌ರ್.ರವೀಶ ಕೂಡ ಪಾಲ್ಗೊಂಡು […]

ಜಿಲ್ಲೆ

ಧಾರವಾಡ ಜಿಲ್ಲೆಯಾದ್ಯಂತ ಮೇ 7 ರಂದು ಜಿಲ್ಲೆಯಾದ್ಯಂತ ಸಂತೆ ರದ್ದು

ಧಾರವಾಡ ಪ್ರಜಾಕಿರಣ.ಕಾಮ್ ಏ. 10 : ಧಾರವಾಡ ಜಿಲ್ಲೆಯಾದ್ಯಂತ ಮೇ 7, 2024 ರಂದು ಮತದಾನ ಜರುಗುವುದರಿಂದ ಸದರಿ ದಿನದಂದು ಮತದಾನವು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಜರುಗಿಸುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ 5, 2024 ರಂದು ಸಂಜೆ 7 ಗಂಟೆ ಯಿಂದ ಮೇ 7, 2024 ರ ಸಂಜೆ 7 ಗಂಟೆಯವರಿಗೆ ಅಥವಾ ಮತದಾನ ಮುಕ್ತಾಯವಾಗುವವರೆಗೆ ಸದರಿ ದಿವಸಗಳಂದು ನಡೆಯುವ ಯಾವತ್ತೂ ಸಂತೆ, ಜಾತ್ರೆ, ಉತ್ಸವ ಮತ್ತು ಇತರೆ ಕಾರ್ಯಕ್ರಮಗಳನ್ನು ನಿಷೇಧಿಸಿ, ಜಿಲ್ಲಾ […]

ಜಿಲ್ಲೆ

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಧಾರವಾಡಕ್ಕೆ 23 ನೇ ಸ್ಥಾನ*

ಧಾರವಾಡ ಪ್ರಜಾಕಿರಣ.ಕಾಮ್ ಏ.10: ಮಾರ್ಚ್ 2024 ರಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಜಿಲ್ಲೆಗೆ 23 ನೇಯ ಸ್ಥಾನ ಲಭಿಸಿದೆ. ಜಿಲ್ಲೆಯಲ್ಲಿ ಒಟ್ಟು 43 ಪರೀಕ್ಷಾ ಕೇಂದ್ರಗಳಲ್ಲಿ 27,428 ವಿದ್ಯಾರ್ಥಿಗಳು ಹಾಜರಿದ್ದು, 21,562 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 80.70% ರಷ್ಟು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಪಿಯು ಫಲಿತಾಂಶ ಕಳೆದ ಬಾರಿ ಶೇಕಡಾ 73.04% ಇದ್ದು, ಈ ಸಾರಿ 80.70% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 27 ನೇ ಸ್ಥಾನದಿಂದ 23ನೇ ಸ್ಥಾನ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ […]

ಜಿಲ್ಲೆ

ಧಾರವಾಡದ ಹಾರೋಬೆಳವಡಿಯಲ್ಲಿ ಎರಡು ಬಣವೆಗಳಿಗೆ ಬೆಂಕಿ….,!

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಸಂಗಪ್ಪ ಕಡಲೆ ಎಂಬುವವರಿಗೆ ಸೇರಿದ ಎರಡು ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು 70 ಸಾವಿರ ಮೌಲ್ಯದ ಮೇವು ಸುಟ್ಟ ಕರಕಲಾಗಿದೆ. ಇಂದು ಮಧ್ಯಾಹ್ನ ಏಕಾಏಕಿ ಎರಡೂ ಬಣವೆಗಳಿಗೆ ಬೆಂಕಿ ತಗುಲಿದ್ದು, ವಿಷಯ ಗೊತ್ತಾದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬೆಂಕಿ ನಿಯಂತ್ರಣಕ್ಕೆ ಬಾರದೇ ಹೋಗಿದ್ದರಿಂದ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ಮುಟ್ಟಿಸಿದ್ದರಿಂದ ಸ್ಥಳಕ್ಕೆ ಬಂದ ಸವದತ್ತಿ ಅಗ್ನಿಶಾಮಕ ದಳದವರು ಬೆಂಕಿ […]

ಜಿಲ್ಲೆ

ಧಾರವಾಡದ ಮದರಮಡ್ಡಿಯಲ್ಲಿ ಕೊಳಚೆ ಮಿಶ್ರಿತ ನೀರು….!?

ಸ್ಥಳೀಯರ ಪ್ರತಿಭಟನೆ* ಧಾರವಾಡ ಪ್ರಜಾಕಿರಣ.ಕಾಮ್  : ಕುಡಿಯುವ ನೀರಿನಲ್ಲಿ ಹುಳಗಳು ಹಾಗೂ ಕೊಳಚೆ ಮಿಶ್ರಿತ ನೀರು ಬರುತ್ತಿದೆ ಎಂದು ಧಾರವಾಡದ ಮದಾರಮಡ್ಡಿ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಬಂದರೂ ಅದರಲ್ಲಿ ಹುಳಗಳು ಬರುತ್ತಿದ್ದು, ಚಿಕ್ಕ ಮಕ್ಕಳಿಗೆ ಕಾಯಿಲೆಗಳು ಬರುತ್ತಿವೆ. ಈ ಕುರಿತು ಮಹಾನಗರ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ  ಎಂದು ಧಿಕ್ಕಾರ ಕೂಗುತ್ತಾ ಅಸಮಾಧಾನ ವ್ಯಕ್ತಪಡಿಸಿದರು ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ […]

ಜಿಲ್ಲೆ

ಧಾರವಾಡದ ನರೇಂದ್ರದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ

ಧಾರವಾಡದ ನರೇಂದ್ರದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ ಧಾರವಾಡ ಪ್ರಜಾಕಿರಣ.ಕಾಮ್ : ಸಮಾಜಕ್ಕೆ ಪ್ರಯೋಜನ ಆಗುವ ಕೆಲಸ ಯಾವುದೇ ರೂಪದಲ್ಲಿ ಇದ್ದರೂ ಅದು ಜನರನ್ನು ತಲುಪುತ್ತದೆ ಎಂದು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ‌ಮಠದ ಶ್ರೀ ಸಂಗಮೇಶ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಸೋಮವಾರ ಮಠದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. ದಿನದರ್ಶಿಕೆಗಳು ನಮ್ಮ‌ ಬದುಕಿಗೆ ಶಿಸ್ತು ಮತ್ತು‌ ಸಮಯಪಾಲನೆ ಸೂಚಿಸುವ ಮಾರ್ಗದರ್ಶಿಗಳು. ನಿತ್ಯದ ಕಾಯಕಗಳಿಗೆ ಸೂಕ್ತ ದಿನ ಮತ್ತು ಸಮಯ […]