ರಾಜ್ಯ

ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಜನುಮದಿನ : 61 ಯುವಕ, ಯುವತಿಯರಿಂದ ರಕ್ತದಾನ

ಧಾರವಾಡದಲ್ಲಿ  ಅರ್ಥಪೂರ್ಣ ಆಚರಣೆ

ನೂರಾರು ಕ್ಯಾನ್ಸರ್ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಸಾರ್ಥಕತೆ ಮೆರೆದ ಗೆಳೆಯರ ಬಳಗ

ಧಾರವಾಡ ಪ್ರಜಾಕಿರಣ. ಕಾಮ್ : ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ 47 ನೇ ಜನುಮದಿನದ ಅಂಗವಾಗಿ
ಜನಜಾಗೃತಿ ಸಂಘ,
ಬಾಲನಂದನ ಟ್ರಸ್ಟ್
ಮತ್ತು ಬಸವರಾಜ ಹೆಚ್. ಕೊರವರ ಗೆಳೆಯರ ಬಳಗ ಹಾಗೂ ಅಭಿಮಾನಿಗಳ ಬಳಗ,
ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಧಾರವಾಡದ ದೊಡ್ಡ ನಾಯಕನಕೊಪ್ಪದಲ್ಲಿ
ಬೃಹತ್ ರಕ್ತದಾನ ಶಿಬಿರ ಗುರುವಾರ ನಡೆಯಿತು.

61 ಯುವಕ, ಯುವತಿಯರು ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು.

46 ರಕ್ತದ ಬಾಟಲ್ ಕ್ಯಾನ್ಸರ್ ಆಸ್ಪತ್ರೆ ರೋಗಿಗಳಿಗೆ ಮೀಸಲಿಟ್ಟರೆ, 15 ಬಾಟಲ್ ಧಾರವಾಡ ಜಿಲ್ಲಾಸ್ಪತ್ರೆಗೆ ನೀಡಲಾಯಿತು‌.

ಸಂಜೆ ನವನಗರದ ಕ್ಯಾನ್ಸರ್ ಆಸ್ಪತ್ರೆಗೆ ತೆರಳಿ ನೂರಾರು ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಅವರಿಗೆ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಲಾಯಿತು.

ಈ ವೇಳೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೋರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸುಮಂಗಲಾ ಬಸವರಾಜ ಕೊರವರ,
ಡಾ. ಉಮೇಶ್ ಹಳ್ಳಿಕೇರಿ, ದಯಾನಂದ ಸಾದನಿ, ವಿಶಾಲ ಕರಣಿ, ರವಿಶಂಕರ್ ಮಾಲಿಪಾಟೀಲ, ಸುರೇಶ ಕೋರಿ, ಬಸವರಾಜ ಕೊತದೊಡ್ಡಿ, ಲಾಲ್ ಸಾಬ್,
ತಾಯಣ್ಣ ನಾಡಿಗೇರಿ, ಶಿವನಗೌಡ ಪಾಟೀಲ, ಲಿಂಗರಾಜ, ಹೆಬ್ಬಳ್ಳಿ ಗ್ರಾಮದ ಹಿರಿಯರಾದ
ಅಶೋಕ ಲಕ್ಕಮ್ಮನವರ, ಈರಣ್ಣ ಹಡಪದ, ಬಸವರಾಜ ಹೆಬ್ಬಾಳ, ಹಟೇಲ್ ಸಾಬ ಗುಡಿಸಲಮನಿ, ಪ್ರಕಾಶ ಸುಣಗಾರ, ಕಲ್ಲಪ್ಪ ಹಡಪದ, ಮಂಗಳಗಟ್ಟಿ, ಮುಳಮುತ್ತಲ, ಲೋಕೂರು, ಕನಕೂರ, ನರೇಂದ್ರ, ಕೋಟೂರ, ಮಾದನಬಾವಿ, ತಡಕೋಡ, ತೇಗೂರ, ಕಲ್ಲೂರ, ಶಿಬಾರಗಟ್ಟಿ, ಮರೇವಾಡ, ಅಮ್ಮಿನಬಾವಿ, ಲಕಮಾಪುರ, ಶಿಗನಹಳ್ಳಿ, ಧಾರವಾಡ ತಾಲೂಕಿನ ಹಾಗೂ ಧಾರವಾಡ ಶಹರದ ವಿವಿಧ ಬಡಾವಣೆಯ ಗುರು ಹಿರಿಯರು, ಯುವಕರು ಸೇರಿದಂತೆ ಅಪಾರ
ಯುವ ಸಮೂಹ ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *