ರಾಜ್ಯ

ನ್ಯಾಶನಲ್ ಹೆರಾಲ್ಡ್ ಪ್ರಕರಣ : ಬಿಜೆಪಿಯಿಂದ ದ್ವೇಷದ ರಾಜಕಾರಣ ಪಿ.ಎಚ್. ನೀರಲಕೇರಿ ಕಿಡಿ

ಧಾರವಾಡ prajakiran.com :
ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಚಾರ ನಡೆದಿದ್ದರೆ ಜಾರಿ ನಿರ್ದೇಶನಾಲಯ ಈವರೆಗೆ ಪ್ರಕರಣ ಏಕೆ ದಾಖಲಿಸಿಲ್ಲ.

ಕೇವಲ ವಿಚಾರಣೆ ನಡೆಸುತ್ತಿರುವುದು ದ್ವೇಷದ ರಾಜಕಾರಣವಲ್ಲವೇ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಕಿಡಿಕಾರಿದರು.

ಅವರು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಗೆ ಪೊಲೀಸ್ ಗುಂಡಾಗೂರಿ ನಡೆಸಿರುವುದು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆ ಹತ್ತಿಕ್ಕುವ ನೆಪದಲ್ಲಿ ಒಂದು ದಿನ ಮುಂಚಿತವಾಗಿ ಯುಥ್ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಅರೆಸ್ಟ್ ಮಾಡಿದರು.

ಆಡಳಿತ ವಿರೋಧಿ ನಡೆ ಖಂಡಿಸಿ ಶಾಂತಿಯುತ ಪಾದಯಾತ್ರೆ ನಡೆಸಲು ಮುಂದಾದರೆ ಇವರಿಗೇನು ತೊಂದರೆ. ಎಐಸಿಸಿ ಕಚೇರಿ ಬರುವ ಮುನ್ನವೇ ಅನೇಕರನ್ನು ಬಂಧನ ಮಾಡಿದ್ದು ಸರಿಯಲ್ಲ ಎಂದರು.

2023,2024ರ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದ ಪತ್ರಕ್ಕೆ ಈವರೆಗೆ ಉತ್ತರ ಬಂದಿಲ್ಲ.

ಬಸವನಗೌಡ ಪಾಟೀಲ ಯತ್ನಾಳ 2000 ಕೋಟಿ ಕೊಟ್ಟರೆ ಸಿಎಂ ಹೇಳಿಕೆ, ಬಿಜೆಪಿ ಶಾಸಕರು, ಸಚಿವರು ಅಕ್ರಮ ಆಸ್ತಿ ಪಾಸ್ತಿ ತನಿಖೆ ಮಾಡಿಲ್ಲ.

ಆದರೆ ಕೇವಲ ವಿರೋಧಿಗಳನ್ನು ಹತ್ತಿಕ್ಕಲು ಸಂವಿಧಾನ ಬದ್ದ ಸಂಸ್ಥೆ ದುರುಪಯೋಗ ಪಡಿಸಿಕೊಳ್ಳುವ ಯತ್ನ ಒಳ್ಳೆಯದಲ್ಲ.
ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಸರಕಾರದ ಈ ದಮನಕಾರಿ ನೀತಿ ಖಂಡಿಸುತ್ತೇವೆ. ಕಾಂಗ್ರೆಸ್ ಸುಮ್ಮನೆ ಕೂಡುವುದಿಲ್ಲ. ಜನರ ಪರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ದೇಶದಲ್ಲಿ ಅಘೋಷಿತ ಕರ್ಪ್ಯೂ ವಾತವರಣ ನಿರ್ಮಾಣವಾಗಿದೆ. ಗಾಳಿಗೆ ತೂರಿ ಕಾನೂನು ಕ್ರಮ ಕಾಂಗ್ರೆಸ್ ನಾಯಕರಿಗೆ ಯಾಕೆ ಎಂದು ಪ್ರಶ್ನಿಸಿದರು

ದ್ವೇಷದ ದಳ್ಳೂರಿ ಸರಿಯಲ್ಲ :
ದಿನೇಶ ಗುಂಡೂರಾವರ, ಎಚ್.ಕೆ ಪಾಟೀಲ, ಡಿ.ಕೆ. ಸುರೇಶ ಬಂಧನ ಸರಿಯಲ್ಲ. ಅನಾವಶ್ಯಕವಾಗಿ ಪ್ರಜಾಪ್ರಭುತ್ವ ಕೊಲೆ ಮಾಡುವ ಪ್ರಯತ್ನ ಇದು ಎಂದು ಪಿ.ಎಚ್. ನೀರಲಕೇರಿ ದೂರಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *