ರಾಜ್ಯ

ಬಿ ಎಡ್ ವಿದ್ಯಾರ್ಥಿಗಳಿಗೆ ಮುಗಿಯದ ಪರೀಕ್ಷೆ ಸಂಕಷ್ಟ

ಪರೀಕ್ಷೆ ಬರೆಯಬೇಕೆ ಬೇಡವೇ ಎಂಬ ಗೊಂದಲ

ಧಾರವಾಡ prajakiran.com : ಕರೋನಾ ಹಿನ್ನಲೆಯಲ್ಲಿ ಪರೀಕ್ಷೆ ಇಲ್ಲದೆ ಮುಂದಿನ ವರ್ಗಗಳಿಗೆ ಬಡ್ತಿ ಪಡೆದಿರುವ ಬಿ ಎಡ್ ಮೊದಲ ಸೆಮಿಸ್ಟರ್ ಹಾಗೂ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಗೊಂದಲ ಮತ್ತೆ ಮುಂದುವರೆದಿದೆ.

ಬಿ ಎಡ್ 1 ಹಾಗೂ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮುಂದಿನ ವರ್ಗಕ್ಕೆ ಬಡ್ತಿಗೊಳಿಸುವ ಕುರಿತು ಕರ್ನಾಟಕ ರಾಜ್ಯ ಸರಕಾರದ ನಿರ್ದೇಶನದಂತೆ ಹಾಗೂ ಸೆ. 9ರಂದು ನಡೆದ ಕರ್ನಾಟಕ ವಿಶ್ವವಿದ್ಯಾಲಯ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆಯಲ್ಲಿ  ನಿರ್ಣಯಿಸಿದಂತೆ ಎಲ್ಲಾವಿದ್ಯಾರ್ಥಿಗಳಿಗೆ ಪರೀಕ್ಷೆ ಜರುಗಿಸದೆ ಮುಂದಿನ ವರ್ಗಗಳಿಗೆ ಬಡ್ತಿ ನೀಡಲಾಗಿದೆ.

ಬಡ್ತಿಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಜಾಲದಲ್ಲಿ ಪ್ರಕಟಿಸಲಿದೆ.

ಒಂದು ವೇಳೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು ಕವಿವಿ ವ್ಯಾಪ್ತಿಯಲ್ಲಿರುವ ಎಲ್ಲಾ ಬಿ ಎಡ್ ಕಾಲೇಜ್ ಗಳು ಪ್ರಾಚಾರ್ಯರಿಗೆ ಸೂಚಿಸಲಾಗಿದೆ ಎಂದು ಕರ್ನಾಟಕವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ ತಿಳಿಸಿದ್ದಾರೆ.

ಅಂದರೆ ಸ್ವತಃ ವಿಶ್ವವಿದ್ಯಾಲಯಕ್ಕೂ ಸಹ ಬಿ ಎಡ್ ವಿದ್ಯಾರ್ಥಿಗಳಿಗೆ ಯಾವ ಆಧಾರದ ಮೇಲೆ ಅವರಿಗೆ ಅಂಕ ನೀಡಬೇಕು ಎಂಬುದು ಸ್ಪಷ್ಟವಾಗಿಲ್ಲ.

ಪರೀಕ್ಷೆ ಇಲ್ಲದೆ ಬಿ ಎಡ್ ವಿದ್ಯಾರ್ಥಿಗಳಿಗೆ ಮುಂದಿನ ವರ್ಗಗಳಿಗೆ ಬಡ್ತಿ ನೀಡಲು ನ್ಯಾಶನಲ್ ಕೌನ್ಸಿಲ್ ಫಾರ್ ಟೀಚರ್ಸ್ ಎಜುಕೇಶನ್ (ಎನ್ ಸಿ ಟಿ ಇ ) ಗ್ರೀನ್ ಸಿಗ್ನಲ್ ಅಗತ್ಯ.

ಅದು ಈವರೆಗೆ ಸಿಕ್ಕಿಲ್ಲ. ವಿಶ್ವವಿದ್ಯಾಲಯ ಈಗಾಗಲೇ ಪತ್ರ ಬರೆದಿದ್ದು, ಅವರ ನಿರ್ದೇಶನಕ್ಕಾಗಿ ಎದುರು ನೋಡುತ್ತಿದೆ.

ಅವರು ಸೂಚಿಸುವ ಮಾನದಂಡಗಳಿಗೆ ಅನುಗುಣವಾಗಿ ಅಂಕಗಳನ್ನು ನೀಡಬೇಕಾಗುತ್ತದೆ ಎಂದು ಕರ್ನಾಟಕವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ. ರವೀಂದ್ರಕುಮಾರ ಕದಂ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.

ಬಿ ಎಡ್ ವೃತ್ತಿ ಶಿಕ್ಷಣವಾಗಿದ್ದರಿಂದ ಕೆಲವರು ಇಂಟರ್ ನಲ್  ಸಲ್ಲಿಸಿದ್ದಾರೆ. ಕೆಲವರು ಸಲ್ಲಿಸಿಲ್ಲ. ಅವ್ರಿಗೆ ಯಾವ ಮಾನದಂಡಅನುಸರಿಸಬೇಕು.

ಅಂಕಗಳನ್ನು ಇಂಟರ್ ನಲ್ ಆಧಾರದ ಮೇಲೆ ನೀಡಬಹುದಾ ಎಂಬುದು ಚರ್ಚೆಯಲ್ಲಿದೆ. ನ್ಯಾಶನಲ್ ಕೌನ್ಸಿಲ್ ಫಾರ್ ಟೀಚರ್ಸ್ ಎಜುಕೇಶನ್ (ಎನ್ ಸಿ ಟಿ ಇ ) ನಿಂದ ಸ್ಪಷ್ಟತೆ ಸಿಕ್ಕಬಳಿಕವಷ್ಟೇ ಎಲ್ಲವೂ ಗೊತ್ತಾಗಲಿದೆ.

ಅಲ್ಲಿಯವರೆಗೆ ಕಾಯಲೇಬೇಕು ಎಂದು ಪ್ರಜಾಕಿರಣ.ಕಾಮ್ ಗೆ ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ ವಿವರಿಸಿದರು.

ಹೀಗಾಗಿ ಈಗ ಬಿ ಎಡ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿದ್ದರೆ ಯಾವ ಆಧಾರದ ಮೇಲೆ ಅಂಕ ನೀಡುತ್ತಾರೆ ಎಂಬುದು ಅರಿತುಕೊಳ್ಳಲು ಹೆಣಗಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಪರೀಕ್ಷೆ ಬರೆಯಬೇಕೆ, ಬೇಡವೇ ಎಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಗಳು ಕಾಲೇಜುಗಳ ಪ್ರಾಚಾರ್ಯರಿಗೆ ವಿಚಾರಿಸಿದರೆ ಅವರ ಬಳಿಯೂ ಪೂರ್ಣ ಮಾಹಿತಿ ಇಲ್ಲ. ಹೀಗಾಗಿ ಕೆಲವು ವಿದ್ಯಾರ್ಥಿಗಳಂತೂ ಈ ಗೊಂದಲದಿಂದಾಗಿ ಯಾಕಾದರೂ ಬಿ ಎಡ್ ಮಾಡಿದ್ದೇವೆ ಎಂದು ಶಪಿಸುವಂತಾಗಿದೆ.

ಬಿ ಎಡ್ ವಿದ್ಯಾರ್ಥಿಗಳ ಪರೀಕ್ಷಾ ಗೊಂದಲ ಯಾವಾಗ ಬಗೆಹರಿಯುತ್ತದೆ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *