ಅಪರಾಧ

ಧಾರವಾಡ ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳನ ಬಂಧಿಸಿದ ಅರಣ್ಯ ಇಲಾಖೆ

ಧಾರವಾಡ prajakiran. com ಮಾ.04 : ಇತ್ತೀಚೆಗೆ ಧಾರವಾಡ ಜಿಲ್ಲಾ ಅಧಿಕಾರಿಗಳ ಮನೆ ಆವರಣದಲ್ಲಿದ್ದ ಒಂದು ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಆರೋಪಿ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಮಾರುತಿ ತಂದೆ ಯಮನಪ್ಪ ಕಟ್ಟಿಮನಿ(31) ಆಗಿದ್ದು, ಆರೋಪಿಯನ್ನು ನಿನ್ನೆಯ ದಿನ ಮಾಲು ಸಮೇತ ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಧಾರವಾಡ ಶಹರದಲ್ಲಿರುವ ಜಿಲ್ಲಾಧಿಕಾರಿಗಳ ವಸತಿಗೃಹ ಆವರಣದಲ್ಲಿನ ಒಂದು ಶ್ರೀಗಂಧದ ಮರ ಮತ್ತು ಗುಂಗರಗಟ್ಟಿ ಶ್ರೀಗಂಧದ ನೇಡುತೋಪಿನಲ್ಲಿರುವ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ, ಸುಮಾರು ಒಂದು ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುವ ಸಮಯದಲ್ಲಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ.

 ಇಂದು ಬೆಳಿಗ್ಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮತ್ತು ಕಳ್ಳತನದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಸದರಿ ದಾಳಿಯನ್ನು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಆರ್.ಎಸ್.ಉಪ್ಪಾರ ಹಾಗೂ ಉಪ ವಲಯ ಅರಣ್ಯಧಿಕಾರಿಗಳಾದ ಎಮ್.ಎಮ್.ತಲ್ಲೂರ, ಸಿ.ಎಸ್.ರೊಟ್ಟಿ, ಯಲ್ಲನಾಯಕ ಹಮಾಣಿ, ಅರಣ್ಯ ರಕ್ಷಕರುಗಳಾದ ಭರತೇಶ ಮಗದುಮ್, ಚಾಂದಭಾಷಾ ಮುಲ್ಲಾ, ಕಲ್ಲಪ್ಪ ಕೆಂಗರ, ಬಸಪ್ಪ ಕರಡಿ, ಶಾರೂನ್.ಎಸ್,.ಮಾರುತಿ ಎಣ್ಣಿ, ಶಿವಾನಂದ ಕೊಂಡಿಕೊಪ್ಪ, ಪರಶುರಾಮ ಗಾಡಿವಡ್ಡರ ಹಾಗೂ ಅಲ್ತಾಫ ಮುಲ್ಲಾ ಪೊಲೀಸ್ ನೀರಿಕ್ಷಕರು ಹಾಗೂ ಎನ್.ಎಚ್.ಸಾಳುಂಕೆ ಎ.ಎಸ್.ಐ,. ಡಿ.ಎನ್. ಗುಂಡಗೈ, ಎಸ್.ಎಚ್. ಕೆಂಪೋಡಿ, ಸಿ.ಸಿ.ಬಿ, ಧಾರವಾಡ, ಸಿಬ್ಬಂದಿಯವರು ದಾಳಿಯಲ್ಲಿ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *