ಅಂತಾರಾಷ್ಟ್ರೀಯ

ಅಮೆರಿಕಾದಲ್ಲೂ ಖಡಕ್ ರೊಟ್ಟಿ, ಮಿರ್ಚಿ ಪಾರ್ಟಿ…..!

ಅಮೆರಿಕಾದಲ್ಲಿ ರೊಟ್ಟಿ, ಗುರೆಳ್ಳು ಗಮ್

ಮಿರ್ಚಿ ಪಾರ್ಟಿ ಮಾಡಿ ಸಂಭ್ರಮಿಸಿದ ಕನ್ನಡಿಗರು…..!

ಆಸ್ಟಿನ್ ಟೆಕ್ಸಾಸ್ ಅಮೇರಿಕಾ (ಪ್ರಜಾಕಿರಣ.ಕಾಮ್) :
ಸುಮಾರು ೫೦೦ ಜನ ಕನ್ನಡಿಗರು ಬಹಳೇ ಉತ್ಸಾಹದಿಂದ ಉತ್ತರ ಕರ್ನಾಟಕ ಜೋಳದ ರೊಟ್ಟಿ, ಮಿರ್ಚಿ ಪಾರ್ಟಿ ಮಾಡಿ ತಮ್ಮ ತಾಯಿ ನಾಡಿನ ಸಂಪ್ರದಾಯವನ್ನು ಆಚರಿಸಿ, ಸಂಭ್ರಮಿದರು

ಕಟಕ್ ರೊಟ್ಟಿ, ಗುರೆಳ್ಳ ಚಟ್ನಿ, ಝುಣುಕದ ವಡೆ ಹೋಳಿಗೆ, ಕರದಂಟು ಮಿರ್ಚಿ, ಗಿರಮಿಟ್ಟು ಬೊಂದಿ ಉಂಡಿ ಮಜ್ಜಿಗೆ ಮಾಡಿ
ಸವಿದು ನಲಿದರು.

ತಾಯ್ನಾಡಿನಿಂದ ೧೦,೦೦೦ ಮೈಲು ದೂರ ಇದ್ದರೂ ನಮ್ಮದೇ ಆಹಾರ ಪದ್ಧತಿ ಮರೆತಿಲ್ಲ ಎಂಬುದು ವಿಶೇಷ.

ಹೂಸ್ಟನ್, ಡಲ್ಲಾಸ್, ಸ್ಯಾನ್ ಅಂಟೋನಿಯೋ, ಮುಂತಾದ ನಗರಗಳಿಂದ ಕನ್ನಡಿಗರು ಬಂದು ಖುಷಿ ಪಟ್ಟರು.

ಅಲ್ಲದೆ, ವಚನ ಸಾಹಿತ್ಯ,ದಾಸರ ಪದಗಳನ್ನು ಹಾಡಿ, ಹೊಗಳಿ, ಕುಣಿದು‌, ಕುಪ್ಪಳಿಸಿದರು.

ಇದರ ಜೊತೆಗೆ ಕೆಲ ಮಹಿಳೆಯರು ಉತ್ತರ ಕರ್ನಾಟಕ ಭಾಗದ ಸೊಬಗುಗಳಾದ ಇಳಕಲ್ ಸೀರೆ ಧರಿಸಿ ಸಂಪ್ರದಾಯಿಕತೆಯನ್ನು ಮೆರೆದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *