ರಾಜ್ಯ

ಧಾರವಾಡದಲ್ಲಿ ಧಾರಾಕಾರ ಮಳೆಗೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋದ ಆಲೂಗಡ್ಡೆ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು,  ಧಾರಾಕಾರ ಮಳೆಗೆ ಆಲೂಗಡ್ಡೆಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.

ಇದರಿಂದಾಗಿ ಆಲೂಗಡ್ಡೆ ಗದ್ದೆಯಲ್ಲಿ ಕುಳಿತು ರೈತನೊಬ್ಬ ಕಣ್ಣೀರು ಹಾಕಿದ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ನಡೆದಿದೆ.

ತನ್ನ ತೋಳಲಾಟದ ವಿಡಿಯೋಮಾಡಿ ರೈತ ಹರಿಬಿಟ್ಟಿದ್ದಾನೆ.  ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ರೈತ ಗಿರೀಶ ಕಡ್ಲಿಕೊಪ್ಪಅವರಿಗೆ ಸೇರಿದ ಜಮೀನಿನಲ್ಲಿ ಮಳೆ ಬಿಡುವು ಪಡೆದ ಹಿನ್ನೆಲೆಯಲ್ಲಿ ಆಲೂಗಡ್ಡೆ ತೆಗೆದಿಟ್ಟಿದ್ದ.

ಆದರೆ ಏಕಾಎಕಿ ಸುರಿದ ಮಳೆಯಿಂದಾಗಿ  6 ಎಕರೆ ಜಮೀನಿನಲ್ಲಿನ ಆಲೂಗಡ್ಡೆ ಹಳ್ಳದ ಪಾಲು ಆಗಿದೆ.

ರಭಸವಾಗಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಆಲೂಗಡ್ಡೆ ಕೊಚ್ಚಿಕೊಂಡು ಹೋಗಿದ್ದರಿಂದ ಕಂಗಲಾಗಿದ್ದಾನೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *