ರಾಜ್ಯ

ಕೆ ಐ ಎ ಡಿ ಬಿ ಬಹುಕೋಟಿ ಹಗರಣ : ಕೊನೆಗೂ ಸಿ ಐ ಡಿ ಬಲೆಗೆ ಬಿದ್ದ ಕಿಂಗ್ ಪಿನ್ ಅಶ್ಫಕ್ ದುಂಡಸಿ

ಕೆ ಐ ಎ ಡಿ ಬಿ ಬಹುಕೋಟಿ ಹಗರಣ : ಕೊನೆಗೂ ಸಿ ಐ ಡಿ ಬಲೆಗೆ ಬಿದ್ದ ಕಿಂಗ್ ಪಿನ್ ಅಶ್ಫಕ್ ದುಂಡಸಿ

*ನೂರಾರು ಕೋಟಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದ ಕೆ ಐ ಎ ಡಿ ಬಿ ಏಜೆಂಟ್*

*ಅಧಿಕಾರಿಗಳೊಂದಿಗೆ ಶಾಮೀಲಾಗಿ ಶೇ. 60 ಕಮಿಷನ್ ಹೊಡೆದಿದ್ದ ಆರೋಪ*

*ಸಣ್ಣ ವಾರ ಪತ್ರಿಕೆಯೊಂದರ ಹೆಸರಿನಲ್ಲಿ ಕಚೇರಿಗೆ ಕಾಲಿಟ್ಟಿದ್ದ ಭೂಪ ಬಾಚಿದ್ದು ಕೋಟಿ ಕೋಟಿ*

*ಆಸ್ತಿ ಮುಟ್ಟುಗೋಲಿಗೆ ಸಿ ಐ ಡಿ ಚಿಂತನೆ*

ಧಾರವಾಡ ಪ್ರಜಾಕಿರಣ.ಕಾಮ್ : ಕೆಐಎಡಿಬಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಐಡಿ ಅಧಿಕಾರಿ ಎಲ್ ಆರ್
ಅಗ್ನಿಯವರ ನೇತೃತ್ವದ ಸಿ ಐ ಡಿ ತಂಡ

ಕೆ ಐ ಎ ಡಿ ಬಿ ಹಗರಣದ “ಕಿಂಗ್‌ಪಿನ್‌ ಮೆಹಬೂಬ್‌ ಅಲಿಯಾಸ್ ಅಶ್ಪಾಕ್ ದುಂಡಸಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ತನಕ ಏಳು ಜನರನ್ನು ಜೈಲಿಗಟ್ಟಿದ್ದ ಸಿಐಡಿ ತಂಡ ಕಳೆದ ಹಲವಾರು ದಿನಗಳಿಂದ ಈತನ ಬಗ್ಗೆ ನಿಗಾ ವಹಿಸುವುದರ ಜೊತೆಗೆ ದಾಖಲೆ,ಚಿರಾಸ್ತಿ,ಚರಾಸ್ತಿ ಮಾಹಿತಿ ಕಲೆ ಹಾಕಿದ್ದರು.

ಈತ ಕೆಐಎಡಿಬಿಯಲ್ಲೇ ಠಿಕಾಣಿ ಹೂಡುತ್ತಾ ಅಧಿಕಾರಿಗಳನ್ನು ಕೋಟ್ಯಾಂತರ ರೂಪಾಯಿ ಹಣದ ಆಮಿಷವೊಡ್ಡಿ
ತನ್ನ ಬಲೆಗೆ ಹಾಕಿಕೊಂಡಿದ್ದ ಎನ್ನಲಾಗಿದೆ

60% ಕಮಿಷನ್ ಆಸೆಗೆ ಅಧಿಕಾರಿಗಳ ಜೊತೆ ಶಾಮಿಲಾಗಿ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ
ಎರಡು ಬಾರಿ ಪರಿಹಾರ ಪಡೆದಿದ್ದ.
ಈಗ ಬ್ಯಾಂಕ್‌, ಕೆಐಎಡಿಬಿಯ
ಭ್ರಷ್ಟ ಅಧಿಕಾರಿಗಳನ್ನು, ಮತ್ತು ನಕಲಿ ರೈತರನ್ನು ಹಳ್ಳಕ್ಕೆ ಕೆಡವಿ ಅವರನ್ನೂ ಜೈಲು ಪಾಲು ಮಾಡಿ ಇಂದು ತಾನೂ ಕೂಡ ಜೈಲು ಸೇರಿದ್ದಾನೆ.

ಎಫ್ಐಆರ್‌ನಲ್ಲಿ ಹೆಸರಿಲ್ಲ‌. ತನ್ನ ಅಕೌಂಟ್‌ಗೆ ಹಣ ಬಂದಿಲ್ಲ ಎಂಬ ಬಂಢ ಧೈರ್ಯದಿಂದ ಇದ್ದ.

“ಏನೇ ಆದರೂ ಹಣ ತನ್ನ ಅಕೌಂಟ್‌ಗೆ ಹಣ ಬಂದಿಲ್ಲ ಯಾರೇನೂ ಮಾಡಲಾಗದು ಎಂದು ಆತನಿಗೆ ಯಾರೋ ದಾರಿ ತಪ್ಪಿಸಿದ್ದರು.

ಹೀಗಾಗಿ ಈತ ಬಿಂದಾಸ್‌ ಆಗಿಯಿದ್ದ. ಕೊನೆಗೆ ತಾನೆ ಕೆಡವಿದ್ದ ಖೆಡ್ಡಾಕ್ಕೆ ಬಿದ್ದಿದ್ದಾನೆ.

ಇನ್ನೂ ಈತ ವಿಜಯಪುರದಲ್ಲಿ ಬೇನಾಮಿ ಆಸ್ತಿ ಮಾಡಿರುವ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ನವನಗರ ಎಪಿಎಮ್‌ಸಿ ಠಾಣೆಯ ರೌಡಿ ಶೀಟರ್‌ ಅಷ್ಪಾಕ್‌, ಹಗರಣ ಹೊರಬಂದು ತಾ ಒಳಗೆ ಹೋದರೇ ಕೊಲೆಮಾಡುವ ಬೆದರಿಕೆ ಹಾಕಿದ್ದ.

ಸ್ಥಳಿಯ ವಾರಪತ್ರಿಕೆಯಲ್ಲಿ ತಾನು ಪತ್ರಕರ್ತ ಎಂದು ಕಾರಿನಲ್ಲಿ ಐಡಿ ಇಟ್ಟು ಕಾರಿನಲ್ಲಿಯೇ ಕಾರೋಬಾರ್‌ ಮಾಡುತ್ತಿದ್ದನೆಂದೂ ಕೊನೆಗೆ ಆ ಪತ್ರಿಕೆ ಸಂಪಾದಕರು ತಮ್ಮ ಮೇಲೆ ಆಪಾದನೆ ಬಂದ ಹಿನ್ನೆಲೆಯಲ್ಲಿ
ಆತನನ್ನು ಹೊರಹಾಕಿ
ಕೈ ತೊಳೆದುಕೊಂಡಿದ್ದರು ಎನ್ನಲಾಗಿದೆ.

ಕೋಟಿ ಕೋಟಿ ಬಡ್ಡಿ ನೀಡಿ ಬಿಂದಾಸ್‌ ಬದುಕು,ಈ ಕೆಐಎಡಿಬಿ ಹಗರಣದ 60% ಹಣದಿಂದ ಕೋಟಿ ಕೋಟಿ ಸ್ಥಿರಾಸ್ತಿ,ಚರಾಸ್ತಿ ಮಾಡಿದ್ದ.

ಸದ್ಯ ಅಷ್ಪಕ್‌ ದುಂಡಸಿಗೆ 14 ದಿನ ನ್ಯಾಯಾಂಗ ಬಂಧನ ನೀಡಿದ್ದು,ಸಿಐಡಿ ತನಿಖೆಯಿಂದ ಇನ್ನಷ್ಟು ಆರೋಪಿಗಳ ಬಂಧನ ಆಗೋದು ಗ್ಯಾರಂಟಿ ಎಂದು ತಿಳಿದುಬಂದಿದೆ.

ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ, ಆರ್ ಟಿ ಐ ಕಾರ್ಯಕರ್ತ ಮಿಥನ್ ಜಾಧವ್ , ವಕೀಲರಾದ ಐ ಕೆ

ಧರಣೆಪ್ಪ ಗೌಡ, ರೈತ ಮುಖಂಡ ಗುರು ಅಂಗಡಿ ಈ ಹಗರಣದ ವಿರುದ್ಧ ಸಮರ ಸಾರಿದಲ್ಲದೆ, ದಾಖಲೆ ಸಮೇತ ಲೋಕಾಯುಕ್ತರಿಗೆ ಹಾಗೂ ಸರಕಾರದ ಗಮನ ಸೆಳೆದು ಬಯಲಿಗೆ ತಂದಿತ್ತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *