ಬೆಂಗಳೂರು prajakiran.com : ಕೊರೋನಾದ ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಒಬ್ಬರಿಗೆ ಹಾಗೂ ಮೈಸೂರಿನ ಒಬ್ಬರಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನಿಡಿದ್ದು, ಡೆಲ್ಟಾ ಪ್ಲಸ್ ವೈರಸ್, ಭಾರತದಲ್ಲಿ ಕಂಡುಬಂದ ಡೆಲ್ಟಾ ಮಾದರಿ ವೈರಾಣುವಿನ ರೂಪಾಂತರ ಎನ್ನಲಾಗುತ್ತಿದ್ದು, ಈ ಸ್ವರೂಪದ ವೈರಸ್ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ.
ರೂಪಾಂತರಿ ರೋಗವಾಗಿರುವ ಡೆಲ್ಟಾ ಫ್ಲಸ್, ಇದೀಗ ಮೈಸೂರಿನಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಎನ್ ಸಿ ಬಿ ಎಸ್ ನಡೆಸಿದ ಜೀನೋಮಿಕ್ ಸೀಕ್ವೆನ್ಸಿಂಗ್ ನಲ್ಲಿ ಡೆಲ್ಟಾ ಫಸ್ ರೂಪಾಂತರಿ ತಳಿ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.