ರಾಜ್ಯ

ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರದ ನೂತನ ಮಾರ್ಗಸೂಚಿ

ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ವೈರಸ್ ನ ನೂತನ ತಳಿ ಓಮಿಕ್ರಾನ್ ಭೀತಿಯ ನಡುವೆ  ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಸರ್ಕಾರದ ಹೊಸ ಮಾರ್ಗಸೂಚಿಗಳು ತಿಳಿಸಿವೆ.

◆ ಕ್ರಿಸ್‌ಮಸ್‌ ಸಂದರ್ಭದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು.

ಯಾವುದೇ ರೀತಿಯ ಬಹಿರಂಗ ಪಾರ್ಟಿ ಮಾಡುವಂತಿಲ್ಲ.

◆ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಎಂದರೆ ಮೊದಲು ಹೈಲೈಟ್‌ ಆಗುವುದು ಎಂಜಿರಸ್ತೆ ಮತ್ತು ಬ್ರಿಗೆಡ್‌ ರಸ್ತೆ.

ಆದರೆ ಈ ಬಾರಿಯೂ ಕಳೆದ ವರ್ಷದಂತೆ ಸಾಮೂಹಿಕವಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.

ಇವಿಷ್ಟೇ ಅಲ್ಲದೇ, ರಾಜ್ಯದ ಯಾವುದೇ ಭಾಗಗಳಲ್ಲಿ ಹೊಸ ವರ್ಷಕ್ಕೆಂದು ಜನರು ಗುಂಪುಗೂಡುವಂತಿಲ್ಲ..

◆ ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ಡಿಸ್ಕೋ ಜಾಕಿ (ಡಿಜೆ), ಇತ್ಯಾದಿ ಅಬ್ಬರದ ಸಂಗೀತಗಳಿಗೆ ನಿಷೇಧ ಹೇರಲಾಗಿದೆ.

◆ ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಇರುವ ಕೆಪ್ಯಾಸಿಟಿಗಿಂತ ಶೇ.50ರಷ್ಟು ಮಾತ್ರ ಜನರು ಇರಲು ಅವಕಾಶ ಕಲ್ಪಿಸಲಾಗಿದೆ. ಶೇ.50ಕ್ಕಿಂತ ಹೆಚ್ಚು ಜನರು ಇವುಗಳಲ್ಲಿ ಸೇರುವಂತಿಲ್ಲ..

◆ ಅ‍ಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಸಾಮೂಹಿಕವಾಗಿ ಪಾರ್ಟಿ ಮಾಡುವಂತಿಲ್ಲ, ಡಿಸ್ಕೋ ಜಾಕಿ ಇತ್ಯಾದಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.

ಇವುಗಳ ಜವಾಬ್ದಾರಿಯನ್ನು ಆಯಾ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನೋಡಿಕೊಳ್ಳಬೇಕು..

◆ ಇವೆಲ್ಲವೂ ಡಿಸೆಂಬರ್‌ 30ರಿಂದ ಜನವರಿ 2ನೇ ತಾರೀಖಿನವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ..

◆ ಸಾಮಾಜಿಕ ಅಂತರ, ಸೆನಿಟೈಸರ್‌ ಸೇರಿದಂತೆ ರಕ್ಷಣಾಕ್ರಮ ಅನುಸರಿಸಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *