ರಾಜ್ಯ

ಬೆಳಗ್ಗೆ ೧೦ ಗಂಟೆ ಒಳಗೆ ಎಪಿಎಂಸಿ ವ್ಯಾಪಾರ ಅಸಾಧ್ಯ : ಶಿವಶಂಕರ ಹಂಪಣ್ಣವರ

ಕರೋನಾ ಲಾಕ್ ಡೌನ್ ಹೆಸರಿನಲ್ಲಿ ರೈತರಿಗೆ ಅನ್ಯಾಯ :   
ಧಾರವಾಡ prajakiran.com : ಕರೋನಾ ಲಾಕ್ ಡೌನ್ ಹೆಸರಿನಲ್ಲಿ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರದಿಂದಲೇ ರೈತರಿಗೆ ಅನ್ಯಾಯವಾಗಿದೆ ಎಂದು ಧಾರವಾಡ ದಲಾಲ್ ಮತ್ತು ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಕಿಡಿಕಾರಿದ್ದಾರೆ.

ಯಾವುದೇ ಕಾರಣಕ್ಕೂ ಬೆಳಗ್ಗೆ ೧೦ ಗಂಟೆ ಒಳಗೆ ಎಪಿಎಂಸಿಯಲ್ಲಿ ರೈತರು ತಮ್ಮ ಕಾಳು ಕಡಿಗಳನ್ನು ತೆಗೆದುಕೊಂಡು ಬಂದು ಮಾರಾಟ ಮಾಡಿ ಅದರ ಹಣ ಪಡೆದುಕೊಂಡು ಮರಳಿ ಹಳ್ಳಿಗೆ ಹೋಗಲು ಸಾಧ್ಯವಿಲ್ಲ.

ಬೇಕಿದ್ದರೆ ಸರಕಾರ ಇಲ್ಲವೇ ಸಂಬAಧಪಟ್ಟ ಅಧಿಕಾರಿಗಳು ಅದನ್ನು ಮಾಡಿತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ರೈತರು ಕಾಳು ಕಡಿಗಳನ್ನು ಎಪಿಎಂಸಿಗೆ ೯ ಗಂಟೆ ಒಳಗೆ ತರಲು ಸಾಧ್ಯವೇ ಇಲ್ಲ. ಅಲ್ಲದೆ, ದುಡಿಯುವವರು ಕೂಡ ಒಂಬತ್ತು ಗಂಟೆ ಮೇಲೆಯೇ ಬರುತ್ತಾರೆ. ಇದಕ್ಕಿಂತ ಎಪಿಎಂಸಿಯನ್ನು ಪೂರಾ ಬಂದ್ ಮಾಡುವುದು ಸರಿ ಎಂದು ಪ್ರಶ್ನಿಸಿದ್ದಾರೆ.

ಒಂದು ಕಡೆ ಸರಕಾರವೇ ಆಹಾರ ಧಾನ್ಯ ಸರಬರಾಜಿಗೆ ಮುಕ್ತ ಅವಕಾಶ ಎಂದು ಹೇಳುತ್ತದೆ. ಇನ್ನೊಂದಡೆ ಎಪಿಎಂಸಿ ಕೇವಲ ಬೆಳಗ್ಗೆ ಹತ್ತು ಗಂಟೆಯವರೆಗೆ ಎಂದರೆ ಹೇಗೆ. ಸರಕಾರಕ್ಕೆ ಇಷ್ಟು ಕೂಡ ತಿಳುವಳಿಕೆ ಇಲ್ಲವೇ.

ಒಂದು ಲಾರಿಗೆ ಸಾಮಾಗ್ರಿ ಹೇರಿ, ಅದಕ್ಕೆ ದಾಖಲೆ ನೀಡಿ, ತೂಕ ಮಾಡಿಸಲು ಕನಿಷ್ಟ ಎನಿಲ್ಲವೆಂದರೂ ಒಂದು ಗಂಟೆ ಸಮಯ ಹಿಡಿಯುತ್ತದೆ. ಅಷ್ಟೊಂದು ಕಡಿಮೆ ಸಮಯದಲ್ಲಿ ಎಲ್ಲವೂ ಮಾಡಲು ಹೇಗೆ ಸಾಧ್ಯ.

ಇದಲ್ಲದೆ, ರೈತರು ಮುಂಗಾರು ಬಿತ್ತನೆಗೆ ಅಗತ್ಯ ಬೀಜ ಗೊಬ್ಬರ ಸಿದ್ದತೆ ಮಾಡಿಕೊಳ್ಳಲು ಅವರು ತಮ್ಮ ಜಮೀನಿನಲ್ಲಿ ಬೆಳೆದ ಕಾಳು ಕಡಿ ಮಾರಾಟ ಮಾಡಲು ರೈತರಿಗೆ ಮುಕ್ತ ಅವಕಾಶ ಕೊಡಲೇಬೇಕು.

ಕಳೆದ ವರ್ಷ ಕೇಂದ್ರ ಸರಕಾರ ಲಾಕಡೌನ್ ಸಮಯದಲ್ಲಿ ಪುಲ್ ಟೈಮ್ ಅನುಕೂಲ ಕಲ್ಪಿಸಿತ್ತು. ಬೇಕಿದ್ದರೆ ಅವರು ಎಪಿಎಂಸಿ ಕಾರ್ಯದರ್ಶಿಯಿಂದ ದಲಾಲ್ ವ್ಯಾಪಾರಸ್ಥರಿಗೆ ರೈತರಿಗೆ ಪಾಸ್ ಕೊಡಲಿ. ಕಳೆದ ವರ್ಷದ ಮಾದರಿಯನ್ನು ಅನುಸರಿಸಲಿ.

ಹೀಗಾಗಿ ರೈತರಿಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಅವಕಾಶ ಕಲ್ಪಿಸಬೇಕು. ರೈತರಿಗೆ ಅನುಕೂಲ ಮಾಡಿದರೆ ಮಾತ್ರ ಎಪಿಎಂಸಿ ವಹಿವಾಟು ನಡೆಸಲು ಸಾಧ್ಯ.

ಇದಕ್ಕೆ ಧಾರವಾಡ ಜಿಲ್ಲಾಡಳಿತ ಹಾಗೂ ವ್ಯಾಪಾರಸ್ಥರು ಮತ್ತು ಸರಕಾರ ಕೈಗೂಡಿಸಬೇಕು. ಹೀಗಾಗಿ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಕಾನೂನು ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಬೇಕು.

ಸರಕಾರಕ್ಕೆ ಚುನಾವಣೆ ಮಾಡಲು ಕರೋನಾ ಇಲ್ಲವೇ ಎಂದು ಈಗಾಗಲೇ ಮದ್ರಾಸ್ ಹೈಕೋರ್ಟ ಛೀಮಾರಿ ಹಾಕಿದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ. ರೈತೆರು ದಂಗೆ ಏಳುವ ಮುನ್ನಅವಕಾಶ ನೀಡಬೇಕು ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸರಕಾರದ ಕಾನೂನು ರೈತರಿಗೆ ಮಾರಕವಾಗಿದೆ. ವ್ಯಾಪಾರಸ್ಥರು ಹಳ್ಳಿಗೆ ಹೋಗಿ ಖರೀದಿಸಲು ೧೦ ಗಂಟೆ ಒಳಗೆ ಆಗಲ್ಲ. ಬ್ಯಾಂಕ್ ನಿಂದ ಹಣ ತಂದು ಅವರಿಗೆ ಕೊಡಬೇಕಾಗುತ್ತದೆ. ಟೆಂಡರ್ ಮಾಡಲು ಸಮಯ ಹಿಡಿಯುತ್ತದೆ.

ಹೀಗಾಗಿ ಕೂಡಲೇ ಸರಕಾರ ಮರುಪರಿಶೀಲಿಸಬೇಕು ಎಂದು ಧಾರವಾಡ ದಲಾಲ್ ಮತ್ತು ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಆಗ್ರಹಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *