ಮಂಡ್ಯ prajakiran.com : ಕೊರೋನಾ ಸೋಂಕಿನ ಹಾವಳಿಯಿಂದ ತತ್ತರಿಸಿದ ಜನಕ್ಕೆ ಮತ್ತೆ ಬ್ಲಾಕ್ಫಂಗಸ್ ಬೆನ್ನುಬಿದ್ದಿದೆ.
ಜಿಲ್ಲೆಯಲ್ಲಿ ಇಬ್ಬರು ಬ್ಲಾಕ್ಫಂಗಸ್ ನಿಂದ ಮೃತಪಟ್ಟಿದ್ದು, ಈವರೆಗೆ ಐದು ಜನ ಬ್ಲಾಕ್ಫಂಗಸ್ನಿಂದ ಸಾವನ್ನಪ್ಪಿದ್ದಾರೆ ಎಂದು ಮಿಮ್ಸ್ ನಿರ್ದೇಶಕ ಡಾ. ಎಂ.ಆರ್. ಹರೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 20 ಮಂದಿಗೆ ಬ್ಲಾಕ್ಫಂಗಸ್ ದೃಢಪಟ್ಟಿದ್ದು, ಇದರಲ್ಲಿ ನಾಲ್ಕು ಮಂದಿ ಗುಣಮುಖರಾಗಿದ್ದಾರೆ.
11 ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಮೃತಪಟ್ಟಿದ್ದಾರೆ ಎಂದರು.
3ನೇ ಅಲೆಯನ್ನು ಎದುರಿಸಲು ಸಕಲ ರೀತಿಯಲ್ಲೂ ಸಿದ್ಧತೆ ನಡೆಸಲಾಗಿದೆ ಎಂದು ಅವರು ಹೇಳಿದರು.