ಧಾರವಾಡ Prajakiran.com : ವೇಗವಾಗಿ ಬಂದ ಬೇಂದ್ರೆ ನಗರ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಾಮಗಾರಿಗೆ ಇಟ್ಟಿರುವ ಪುಟ್ ಪಾತ್ ಪ್ಲೇವರ್ಸ ಗೆ ಗುದ್ದಿದ ಘಟನೆ ತಡರಾತ್ರಿ ಧಾರವಾಡ ಹುಬ್ಬಳ್ಳಿ ರಸ್ತೆಯ ಹಳ್ಳಿ ದಾಬಾ ಬಳಿ ನಡೆದಿದೆ.
ಇದರಿಂದಾಗಿ ಪುಟ್ ಪಾತ್ ಪ್ಲೇವರ್ಸ ಹಾಗೂ ಬಸ್ ಮುಂಭಾಗ ಜಖಂ ಗೊಂಡಿದೆ.
ಬೇಂದ್ರೆ ಬಸ್ ಸಂರ್ಪೂರ್ಣ ಪುಟ್ ಪಾತ್ ಗೆ ನುಗ್ಗಿತ್ತು.
ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.