ಅಂತಾರಾಷ್ಟ್ರೀಯ

ಮೊಬೈಲ್ ಫೋನ್ ಬಿಡಿಭಾಗ, ಪವರ್ ಬ್ಯಾಂಕ್ ಮೇಲೆ ಸುಂಕ ಏರಿಕೆ : ಚಿನ್ನ, ಬೆಳ್ಳಿ ಮೇಲಿನ ತೆರಿಗೆ ಇಳಿಕೆ ಮಾಡಿದ ಬಜೆಟ್

ನವದೆಹಲಿ prajakiran.com : ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಕೇಂದ್ರ ಸರಕಾರದ ಬಹು ಮಹತ್ವಾಂಕ್ಷೆ ಬಜೆಟ್ ಮಂಡಿಸಿದ್ದಾರೆ‌

ಆಮದು ಸುಂಕವನ್ನು ಏರಿಕೆ ಮಾಡಿದ್ದರಿಂದ ರೆಫ್ರಿಜಿರೇಟರ್, ಏರ್ ಕಂಡೀಷನರ್, ಮದ್ಯ, ಕಚ್ಚಾ ರೇಷ್ಮೆ, ಸ್ಪಾಂಡೆಕ್ಸ್ ಫೈಬರ್, ಸೋಲಾರ್ ಲ್ಯಾಂಟೆನ್ರ್ಸ್, ಮೊಬೈಲ್ ಫೋನ್, ಪವರ್ ಬ್ಯಾಂಕ್ ಬೆಲೆಗಳು ಏರಿಕೆಯಾಗಲಿವೆ.

ಮೊಬೈಲ್ ಫೋನ್ ಬಿಡಿಭಾಗಳು, ಪವರ್ ಬ್ಯಾಂಕ್ ಮೇಲೆ ಸುಂಕ ಏರಿಕೆ ಮಾಡಲಾಗಿದೆ. ಆದರೆ ಮಹಿಳೆಯರ ಅಚ್ಚಮೆಚ್ಚಿನ ಚಿನ್ನ ಬೆಳ್ಳಿ ಮೇಲಿನ ತೆರಿಗೆಯನ್ನ ಇಳಿಕೆ ಮಾಡಲಾಗಿದೆ.

ರೆಫ್ರಿಜಿರೇಟರ್, ಏರ್ ಕಂಡೀಷನರ್ ಬಿಡಿ ಭಾಗಗಳ ಮೇಲಿನ ಆಮದು ತೆರಿಗೆ ಶೇ.12.5 ರಿಂದ ಶೇ.15ಕ್ಕೆ ಏರಿಕೆ ಮಾಡಲಾಗಿದೆ. ಏಪ್ರಿಲ್ ಒಂದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದಲ್ಲಿ ಸಿದ್ಧವಾಗುವ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಿದ್ದಾರೆ.

ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಬೆಳವಣಿಗೆಗೆ ಸಹಕಾರಿಯಾಗುವ ಕೆಲ ಘೋಷಣೆಗಳನ್ನ ಪ್ರಕಟಿಸಿದ್ದಾರೆ.

ಎಂಎಸ್‍ಎಂಇ ಗಳು ಉತ್ತಮ ಗುಣಮಟ್ಟ ಮತ್ತು ಬಾಳಿಕೆ ಹೊಂದಿರುತ್ತವೆ. ಹಾಗಾಗಿ ಫಿನಿಶಡ್ ಸಿಂಥೆಟಿಕ್ ಜೆಮ್ ಸ್ಟೋನ್ ಮೇಲೆ ತೆರಿಗೆ ಏರಿಕೆ ಮಾಡಲಾಗಿದೆ. ಇದರಿಂದ ದೇಶಿಯ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿ ಆಗಲಿದೆ.

ಆಟೋಮೊಬೈಲ್ ವಲಯದ ಉತ್ಪನ್ನಗಳಾದ ವೈರಿಂಗ್ ಸೆಟ್, ಸೇಫ್ಟಿ ಗ್ಲಾಸ್ ಮತ್ತು ಸಿಗ್ನಲ್ ಉಪಕರಣಗಳ ಮೇಲಿನ ತೆರಿಗೆ ಶೇ.7.5/10ರಿಂದ ಶೇ.15ಕ್ಕೆ ಏರಿಕೆ ಕಾಣಲಿದೆ.

ಪೆಟ್ರೋಲಿಯಂ ಮತ್ತು ರಬ್ಬರ್ ಉತ್ಪನ್ನಗಳ ಮೇಲಿನ ಸೆಸ್ ಶೇ.2.5 ಇಳಿಕೆಯಾಗಲಿದೆ. ಚಿನ್ನ ಮತ್ತು ಬೆಳ್ಳಿ ಆಮದು ಸುಂಕ ಶೇ. 7.5ರಷ್ಟು ಇಳಿಕೆಯಾಗಿದ್ದು, ಪ್ಲಾಟಿನಂ, ಹವಳ ಮೇಲೆ ತೆರಿಗೆ ಶೇ.12.5ರಿಂದ ಶೇ.10ಕ್ಕೆ ಇಳಿಕೆಯಾಗಿದೆ.

ಬೆಲೆ ಹೆಚ್ಚಳ ವಿವರ :

ಮೊಬೈಲ್ ಫೋನ್, ಪವರ್ ಬ್ಯಾಂಕ್, ಚಾರ್ಜರ್
ಕಾಟನ್ ಬಟ್ಟೆ, ವಿದೇಶಿ ಮದ್ಯ, ವಿದೇಶಿ ಬಟ್ಟೆ
ರೆಫ್ರಿಜಿಟರೇಟರ್, ಏರ್ ಕಂಡೀಷನರ್
ವಿದೇಶಿ ಆಟಿಕೆ ವಸ್ತುಗಳು,ಪೆಟ್ರೋಲ್ ಮತ್ತು ಡೀಸೆಲ್.

ಬೆಲೆ ಇಳಿಕೆ ವಿವರ :
ಚಿನ್ನ, ಬೆಳ್ಳಿ, ಪೆಟ್ರೋಲಿಯಂ, ರಬ್ಬರ ಉತ್ಪನ್ನಗಳು,ಪೇಂಟ್,ಕಾಪರ್ ಸ್ಕ್ರಾಪ್, ಮೆಟಲ್ ಕಾಯಿನ್,ನೈಲಾನ್ ಫೈಬರ್,ಪ್ಲಾಟಿನಂ
ಚರ್ಮದ ವಸ್ತುಗಳು ಹೀಗೆ ಹಲವಾರು ಉತ್ಪನ್ಬಗಳಿಗೆ ಬೆಲೆ ಎರಿಕೆ ಹಾಗೂ ಇಳಿಕೆ ಅನ್ವಯವಾಗಲಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *