ರಾಜ್ಯ

ಧಾರವಾಡ : 30ನೇ ದಿನಕ್ಕೆ ಬಸವರಾಜ ಕೊರವರ, ನಾಗರಾಜ ಕಿರಣಗಿ ನೇತೃತ್ವದ ಹೋರಾಟಕ್ಕೆ ಜಯ

82 ಜನರಿಗೆ ಮೊದಲ ಹಂತದಲ್ಲಿ ನಾಳೆಯಿಂದಲೇ ಕೆಲಸಕ್ಕೆ ನೇಮಕ ಶಾಸಕ ಅರವಿಂದ ಬೆಲ್ಲದ ಭರವಸೆ

ಇನ್ನುಳಿದವರಿಗೆ ಹಂತ ಹಂತವಾಗಿ ನೇಮಕದ ಅಭಯ

4 ತಿಂಗಳ ಸಂಬಳವೂ ಶೀಘ್ರದಲ್ಲೇ ಬಿಡುಗಡೆ

ಸ್ಥಳದಿಂದಲೇ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ ಶಾಸಕ ಅರವಿಂದ

30 ದಿನಗಳ ನಿರಂತರವಾದ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್

ಬಸವರಾಜ ಕೊರವರ, ನಾಗರಾಜ ಕಿರಣಗಿ ನೇತೃತ್ವದ 30 ದಿನಗಳ ಹೋರಾಟಕ್ಕೆ ಕೊನೆಗೂ ಮಣಿದ  ಸರ್ಕಾರ

ಧಾರವಾಡ ಪ್ರಜಾಕಿರಣ.ಕಾಮ್ :  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನೀರು ಸರಬರಾಜು ಕೆಲಸ ನಿರ್ವಹಣೆ ಮಾಡುತ್ತಿದ್ದ 358 ನೌಕರರ ಮರು ನೇಮಕಕ್ಕೆ ಆಗ್ರಹಿಸಿ ಕಳೆದ 30 ದಿನಗಳಿಂದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹಾಗೂ ಉಪಾಧ್ಯಕ್ಷ ನಾಗರಾಜ ಕಿರಣಗಿ ನೇತೃತ್ವದಲ್ಲಿ ನಿರಂತರವಾದ ಹೋರಾಟಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ‌.

ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರು ವಿಶೇಷ ‌ಮುತುವರ್ಜಿವಹಿಸಿ ಜಿಲ್ಲೆಯ ಸಂಸದರು ಆಗಿರುವ ಕೇಂದ್ರ ಸರ್ಕಾರದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿಯವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಗಮನ ಸೆಳೆದಿದ್ದರು.

ಅದರಂತೆ ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ. ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಕೇವಲ 82 ಜನರಿಗೆ ನೇಮಕಾತಿ ಭರವಸೆ ನೀಡಿದ್ದರು.

ಇನ್ನುಳಿದವರ ನೇಮಕದ ಬಗ್ಗೆ ಭರವಸೆ ನೀಡಿರಲಿಲ್ಲ. ಆದರೆ ಸಂಜೆ ಸ್ವತಃ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಅರವಿಂದ ಬೆಲ್ಲದ ಅವರು 82 ಜನರಿಗೆ ಮೊದಲ ಹಂತದಲ್ಲಿ ನಾಳೆಯಿಂದಲೇ ಮಾ.1ರಿಂದ ನೀರಿನ ಸಮಸ್ಯೆ ಇರುವ ವಾರ್ಡ್ ಗಳಲ್ಲಿ ಕೆಲಸಕ್ಕೆ ನಿಯುಕ್ತಿ ಮಾಡಿಕೊಳ್ಳಲು ಸೂಚಿಸಿದರು.

ಇನ್ನುಳಿದವರಿಗೆ ಎರಡು ಮೂರು ತಿಂಗಳಲ್ಲಿ ಹಂತ ಹಂತವಾಗಿ ನೇಮಕದ ಅಭಯ ನೀಡಿದರು.

ಜೊತೆಗೆ ಇದೇ ವೇಳೆಗೆ ನೀರು ಸರಬರಾಜು ನೌಕರರ
4 ತಿಂಗಳ ಸಂಬಳವೂ ಶೀಘ್ರದಲ್ಲೇ ಬಿಡುಗಡೆಗೊಳಿಸುವ ಕುರಿತು
ಸ್ಥಳದಿಂದಲೇ ಪಾಲಿಕೆ ಆಯುಕ್ತರಿಗೆ  ಶಾಸಕ ಅರವಿಂದ ಬೆಲ್ಲದ ಸೂಚಿಸಿದರು.

ಅಲ್ಲದೆ, 30 ದಿನಗಳ ನಿರಂತರವಾದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲು ಜನಜಾಗೃತಿ ಸಂಘದ ಅಧ್ಯಕ್ಷರಾದ
ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ ಹಾಗೂ ನೌಕರರಿಗೆ ಮನವಿ ಮಾಡಿ, ಸಿಹಿ ತಿನಿಸಿದರು.

ಹೀಗಾಗಿ ಬಸವರಾಜ ಕೊರವರ, ನಾಗರಾಜ ಕಿರಣಗಿ ನೇತೃತ್ವದ 30 ದಿನಗಳ ಹೋರಾಟಕ್ಕೆ ಕೊನೆಗೂ ಒಂದು ಹಂತದ ಜಯ ಸಿಕ್ಕಂತಾಗಿದೆ.

ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಅವರ ವಿಶೇಷ ಕಾಳಜಿಯಿಂದ 358 ನೀರು ಸರಬರಾಜು ನೌಕರರ ಪೈಕಿ ಮೊದಲ ಹಂತದಲ್ಲಿ 82 ಜನರಿಗೆ ನೇಮಕ ಭರವಸೆ ನೀಡಲಾಗಿದೆ.

ಇನ್ನುಳಿದವರಿಗೆ ಹಂತ ಹಂತವಾಗಿ ತೆಗೆದುಕೊಂಡು ನ್ಯಾಯ ಒದಗಿಸುವ ಭರವಸೆ ಶಾಸಕ ಅರವಿಂದ ಬೆಲ್ಲದ ನೀಡಿದ್ದರಿಂದ ತಾತ್ಕಾಲಿಕವಾಗಿ ಹೋರಾಟ ಹಿಂದಕ್ಕೆ ಪಡೆಯಲಾಗುವುದು.

ಇನ್ನುಳಿದವರಿಗೆ ಒಂದು ವೇಳೆ ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟದ ಹಾದಿ ತುಳಿಯುವುದು ನಿಶ್ಚಿತ ಎಂದು ಹೇಳಿದರು‌‌‌.

ಈ 30 ದಿನಗಳ ಬಹೃತ್ ಹೋರಾಟಕ್ಕೆ ಬೆಂಬಲ ನೀಡಿದ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸರ್ವ ಸದಸ್ಯರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮಾಧ್ಯಮ ಮಿತ್ರರು, ಪೊಲೀರಿಗೆ ತುಂಬು ಹೃದಯದಿಂದ ಧನ್ಯವಾದಗಳು ಎಂದು ತಿಳಿಸಿದರು.

ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸಿ, ಅದನ್ನು ಗೌರವಿಸಬೇಕಾದ ಮಹಾನಗರ ಪಾಲಿಕೆ ಮೇಯರ್, ಆಯುಕ್ತರ ಒಣ ಪ್ರತಿಷ್ಠೆಯಿಂದಾಗಿ ಒಂದು ತಿಂಗಳ ಕಾಲ ನಿರಂತರವಾದ ಹತ್ತು ಹಲವು ವಿಭಿನ್ನ, ವೈಶಿಷ್ಟ್ಯ ಪೂರ್ಣ ಹೋರಾಟ ನಡೆಸಿ ಜನಾಂದೋಲನವಾಗಿ ಮಾರ್ಪಟ್ಟಿತು.

ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿಯೇ ಮುಗಿಯಬಹುದಾದ ಒಂದು ಸಣ್ಣ ಸಮಸ್ಯೆ ರಾಜ್ಯ ಮಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಎರಡು ಬಾರಿ ಸದನದಲ್ಲಿ ಗಮನ ಸೆಳೆಯುವ ಪರಿಸ್ಥಿತಿ ನಿರ್ಮಾಣವಾಯಿತು.

ಅಲ್ಲದೆ, ಎಲ್ ಆಂಡ್ ಟಿ ಕಂಪನಿಯ ಜನವಿರೋಧಿ ನಿಲುವಿನ ವಿರುದ್ಧ ಚಾಟಿ ಬೀಸಿ, ಬಿಸಿ ತಾಕಿಸಲಾಯಿತು.

ಕೊನೆಗೆ ಎಚ್ಚೆತ್ತುಕೊಂಡಿರುವುದು ಸಮಾಧಾನ ಹಾಗೂ ಸಂತಸದ ಸಂಗತಿಯಾಗಿದೆ. ಬಡವರ ಮಕ್ಕಳ ಶೋಷಣೆ ನಿಲ್ಲಲಿ. ಅವರ ಗಟ್ಟಿಯಾದ ಹೋರಾಟದ ಫಲ ಇಂದು ಮೊದಲ ಹಂತವಾಗಿ 82 ಜನರಿಗೆ ಮರುನೇಮಕದ ಭರವಸೆ ಸಿಕ್ಕಿದೆ.ಇನ್ನುಳಿದವರಿಗೂ ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನೀರು ಸರಬರಾಜು ನೌಕರರ ಸಂಘದ ಮಹಾಂತೇಶ ಗೌಡರ, ಆನಂದ ಕಾಳಮ್ಮನವರ, ಬಸವರಾಜ ಮುಕ್ಜಲ, ಶೇಖು ಬೆಟಗೇರಿ,
ಸೂರಿ, ನಾಗೇಂದ್ರ ಹಮ್ಮಣಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *