ರಾಜ್ಯ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಪ್ತ ಸಹಾಯಕ, ಸ್ಟೇನೋಗ್ರಾಫರ್ ಅಮಾನತು

ಧಾರವಾಡ prajakiran.com : ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಹಿಳಾ ಕಾರ್ಮಿಕರ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಕುಲಪತಿಗಳ ಆಪ್ತ ಸಹಾಯಕ ಮನಸೂರ ಮುಲ್ಲಾ ಹಾಗೂ ಕೃಷಿ ವಿಶ್ವವಿದ್ಯಾಲಯದ ಸ್ಟೇನೋಗ್ರಾಫರ್ ಉಳವಪ್ಪ ಮೇಸ್ತ್ರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಆಡಳಿತಾಧಿಕಾರಿ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪ್ರತಿಭಾ ಶಿವಾಜಿ ಗೊಂದಳಿ ಎಂಬುವರು ಉಪನಗರ ಠಾಣೆಯಲ್ಲಿ ಏ.೨೧ ರಂದು ಇವರಿಬ್ಬರ ಮೇಲೆ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಕ್ಕೆ ಗುರಿಯಾಗಿರುವ ಮನಸೂರ ಮುಲ್ಲಾ ಹಾಗೂ ಉಳವಪ್ಪ ಮೇಸ್ತ್ರಿ ಅವರಿಬ್ಬರನ್ನು ಸರಳ ತನಿಖೆಗಾಗಿ ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಜನಜಾಗೃತಿ ಸಂಘ ಅಧ್ಯಕ್ಷ ಬಸವರಾಜ ಕೊರವರ, ಭಜರಂಗದಳ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ ಸೇರಿ ಹಲವರು ಉಪಕುಲಪತಿ ಭೇಟಿಯಾಗಿ ಆಗ್ರಹಿಸಿದ್ದರು

ಮುಖಂಡರ ಒತ್ತಾಯಕ್ಕೆ ಮಣಿದ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.

ಅದರ ಬೆನ್ನಲ್ಲೇ ಕೃಷಿ ವಿಶ್ವವಿದ್ಯಾಲಯ ದಿಂದ ಮಹತ್ವದ ಆದೇಶ ಹೊರಬಿದ್ದಿದೆ.

 ಇಲಾಖೆ ವಿಚಾರಣೆ ಕಾಯ್ದರಿಸಿ ಇಬ್ಬರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಗರಿಕ ಸೇವಾಕಾಯ್ದೆ ಅನ್ವಯ ಅಮಾನತು ಮಾಡಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *