ಅಂತಾರಾಷ್ಟ್ರೀಯ

ಟ್ವೀಟರ್ ನಲ್ಲಿ ಟ್ರೇಡಿಂಗ್ ಆದ ಹೇಂಗ ಪುಂಗ್ ಲೀ ….! :14 ಸಾವಿರ ದಾಟಿದ ಸೂಲಿಬೆಲೆ ಚಕ್ರವರ್ತಿ ಟ್ರೋಲ್

ಬೆಂಗಳೂರು prajakiran.com : ಖ್ಯಾತ ವಾಗ್ಮಿ, ಚಿಂತಕ, ಬರಹಗಾಗ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿಅವರ ಕುರಿತು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಅದರಲ್ಲೂ ಡ್ರೋನ್ ಪ್ರತಾಪನ ಸಂದರ್ಶನ ನಡೆಸಿದ ಕಿರಿಕ್ ಕಿರ್ತಿಗೆ ಕೆಲವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಅವರನ್ನು ಯಾವಾಗ ಸಂದರ್ಶನಕ್ಕೆ ಕರಿಯುತ್ತಿರಿ. ಬೇಕಿದ್ದರೆ ಇವಷ್ಟು ಪ್ರಶ್ನೆ ಕೇಳಿ ಸಾಕು.

ನಿಮ್ಮತನ ತೋರಿಸಿ, ಮಾಧ್ಯಮಗಳು ಕೇವಲ ಸಣ್ಣವರ ಮೇಲೆ ಪ್ರಯೋಗ ಮಾಡಿದ್ದು ಸಾಕು ಎಂದು ನೀತಿ ಮಾತುಗಳನ್ನು ಹೇಳಿದ್ದಲ್ಲದೆ, ಕೆಲವರು ಮನಬಂದಂತೆ ಮಾತನಾಡಿದ್ದಾರೆ.

ಇದೀಗ ಟ್ವೀಟರ್ ನಲ್ಲಿ ಸೂಲಿಬೆಲೆ ಚಕ್ರವರ್ತಿಯವರು ಮಾತನಾಡಿದ ವೀಡಿಯೋ ತುಣುಕು, ಚಿನ್ನದ ರಸ್ತೆ ಉದ್ಘಾಟಿಸಿದ ಚಿತ್ರ, ಚೀನಾದ ಹೇಂಗ ಪುಂಗ ಲೀ ಹೀಗೆ ವಿವಿಧ ಚಿತ್ರ ವಿಚಿತ್ರ ಪೋಟೋಗಳನ್ನು ಹಾಕಿರುವುದು ಟ್ರೇಂಡಿಗ್ ಆಗಿ ಟ್ರೋಲ್ ಆಗುತ್ತಿದೆ.

ಅವರನ್ನಅಪಹಾಸ್ಯ ಮಾಡಿಕೊಳ್ಳುವವರ ಕಾಲೆಳೆಯುವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ನರೇಂದ್ರ ಮೋದಿಯವರು ಮತ್ತೋಮ್ಮೇ ಈ ದೇಶದ ಪ್ರಧಾನ ಮಂತ್ರಿ ಆದರೆ ದೇಶದ ಎಲ್ಲಾ ರಸ್ತೆಗಳು ಚಿನ್ನದ ರಸ್ತೆಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಹೇಳಿಕೆಗೆ ದೇಶದ ರಸ್ತೆಗಳ ಅಧೋಗತಿ ತೋರಿಸಿದ್ದಾರೆ.

ಸಮುದ್ರ ಕುರಿತು ಈ ದೇಶದ ಜನತೆಗೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆಗುವವರೆಗೆ ಕಲ್ಪನೆಯೇ ಇರಲಿಲ್ಲ.

ಸಮುದ್ರ ಎಂದರೆ ಕೇವಲ ಮೀನು ಹಿಡಿಯುವುದು ಎಂದು ತಿಳಿದುಕೊಂಡಿದ್ದರು. ಆದರೆ ಟ್ರಾನ್ಸಪೋರ್ಟೇಶನ್ ಅಂತ ಗೊತ್ತಿರಲಿಲ್ಲ.

ಟ್ರೇನ್ ನಲ್ಲಿ ಸಾಗಿಸಲು ಆರು ರೂಪಾಯಿ ಖರ್ಚಾದರೆ  ಹಡಗಿನಲ್ಲಿ ಒಂದು ರೂಪಾಯಿ ಖರ್ಚಾಗುತ್ತದೆ. ರೋಡಿಗೆ ಇಷ್ಟು ಇನವೆಸ್ಟ್ ಮಾಡುವ ಅಗತ್ಯವೇ ಇರಲಿಲ್ಲ ಎಂಬ ವೀಡಿಯೋ ಲಿಂಕ್ ಹಾಕಿದ್ದಾರೆ.

#Heng_pung_lee #HengPungLee ಕೆಲವರು ಈ ಹೇಂಗ್ ಪುಂಗ್ ಲೀ ಯಾಕೆ ಟ್ರೋಲ್ ಆಗ್ತಿದೆ, ಟ್ರೇಂಡಿಗ್ ಯಾಕೆ ಆಗತಿದೆ ಎಂದು ಕೇಳಿದ್ದಾರೆ.

ಇದು ಸುಮಾರು 14 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್ ಹಾಗೂ ರೀ ಟ್ವೀಟ್ ಮಾಡಿದ್ದಾರೆ. ಈ ಟ್ರೇಂಡಿಗ್ ಅನ್ನು ಸೂಲಿಬೆಲೆ ಚಕ್ರವರ್ತಿಯವರ ಟ್ವೀಟರ್ ಖಾತೆಗೆ ಟ್ಯಾಗ್ ಮಾಡಿ ಹ್ಯಾಶ್ ಟ್ಯಾಗ್ ಮಾಡಿದ್ದಾರೆ

https://twitter.com/astitvam ಗೆ ನೆಟ್ಟಿಗರು ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಡ್ರೋನ್ ಪ್ರತಾಪ ಸುಳ್ಳು ಡ್ರೋನ್ ಹಾರಿಸಿದರೆ ಸೂಲಿಬೆಲೆ ಚಕ್ರವರ್ತಿ ರಾಕೇಟ ಗಳನ್ನು ಹಾರಿಸಿದ್ದಾರೆ ಎಂದು ಕಾಲು ಎಳೆದಿದ್ದಾರೆ.

ಅಲ್ಲದೆ, ದೇಶದ ಮೊದಲ ಚಿನ್ನದ ರಸ್ತೆ ಉದ್ಘಾಟಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆಎಂದು ಕಶ್ಯಪ್ ನಂದನ್ ಕುಟುಕಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *