ಲಕ್ನೋ prajakiran.com : ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನ ಲೋನಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬಟ್ಟೆ ವ್ಯಾಪಾರಿ ರಿಯಾಜುದ್ದೀನ್ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ರಿಯಾಜುದ್ದೀನ್ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಟ್ಟು ಕೊಂದಿದ್ದು, ಘಟನೆಯಲ್ಲಿ ರಿಯಾಜುದ್ದೀನ್ ಪತ್ನಿ ಗಾಯಗೊಂಡಿದ್ದಾರೆ.
ಇನ್ನೂ ಈ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಪತ್ನಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಘಟನಾ ಸ್ಥಳಕ್ಕೆ ಗಾಜಿಯಾಬಾದ್ ಪೊಲೀಸರ ತಂಡ ತೆರಳಿದ್ದು, ದಾಳಿಕೋರರ ಗುರುತು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಗೆ ಕಾರಣ ಏನೆಂಬುದು ತನಿಖೆ ನಂತರ ತಿಳಿಯಬೇಕಾಗಿದೆ ಎನ್ನಲಾಗಿದೆ.