ರಾಜ್ಯ

ಶಿಕ್ಷಕರ ಮನೆ ಮನೆ ಭೇಟಿ ಬೇಡ, ಶಾಲೆ ಪ್ರಾರಂಭಿಸಿ

ಹುಬ್ಬಳ್ಳಿ prajakiran.com  : ರಾಜ್ಯದಲ್ಲಿ ಆಗಷ್ಟ ೩೧ ರ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶಗಳ ಪ್ರಕಾರ ಶಾಲೆಗಳನ್ನು ತೆರೆಯುವಂತಿಲ್ಲ.

ಆನ್ ಲೈನ್ ಹಾಗೂ ದೂರ ಶಿಕ್ಷಣ ಮೂಲಕ ಪ್ರೋತ್ಸಾಹಿಸಬೇಕು ಎಂದಿರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿದ್ಯಾಗಮ ಎಂಬ ಮಾರ್ಗಸೂಚಿಯ ಸುತ್ತೋಲೆಯನ್ನು ಆಗಸ್ಟ್  ೪ ರಂದು ಹೊರಡಿಸಿದೆ  

ಆಗಸ್ಟ್ ೭ ರಂದು ರಾಜ್ಯ ಹಂತದ ಇಲಾಖಾ ವಿ.ಸಿ ಯಲ್ಲಿ ಮನೆ ಮನೆಗೆ ಭೇಟಿ ಮಾಡಿ ಮಕ್ಕಳಿಗೆ ಮಾರ್ಗದರ್ಶನ ಮಾಡಲು ಸೂಚಿಸಿರುವರು.

ಆದರೆ ಸದ್ಯ ಮಹಾಪೂರ,ಪ್ರವಾಹ,ಭಾರೀ ಮಳೆ ಇದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು ಅಲ್ಲದೆ ಕೋವಿಡ್ -೧೯ ಈಗಾಗಲೇ ಬಹಳ ಜನ ಶಿಕ್ಷಕ ಶಿಕ್ಷಕಿಯರಿಗೆ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ.

ಅಲ್ಲದೆ,ರಾಜ್ಯದ ನಾಲ್ಕೈದು ಲಕ್ಷ ಶಿಕ್ಷಕರಲ್ಲಿ ಬಹುಪಾಲು ಮಹಿಳೆಯರು ಇದ್ದು, ವಿದ್ಯಾಗಮ ಕಾರ್ಯಾನುಷ್ಠಾನ ಮಾಡುವುದು ಕಷ್ಟಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ತಾವು ಈ ಸಂಗತಿಯನ್ನು  ಅತ್ಯಂತ ಗಂಭೀರವಾಗಿ ಪರಿಗಣಿಸಿ ಪೂರಕವಾದ ವಾತಾವರಣ ನಿರ್ಮಾಣವಾಗುವವರೆಗೆ ವಿದ್ಯಾಗಮ ಯೋಜನೆಯನ್ನು ಮಕ್ಕಳ ಶಿಕ್ಷಕರ ಪಾಲಕರ ಹಿತ ದೃಷ್ಟಿಯಿಂದ ಕರುಣಾಮಯಿಗಳಾದ ತಾವುಗಳು ವಿದ್ಯಾಗಮ ಕಾರ್ಯ ಯೋಜನೆಯನ್ನು ಅನಿರ್ದಿಷ್ಠ ಅವಧಿಯವರೆಗೆ ಸ್ಥಗಿತಗೊಳಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ, ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಯಾವುದೇ ಕಾರಣಕ್ಕೂ ಮನೆ ಮನೆ ಭೇಟಿ ಬೇಡ, ಶಾಲೆ ಪ್ರಾರಂಭಿಸಿ ಬಿಡಿ.

ಸರದಿ ಪ್ರಕಾರ ಶಾಲಾ ಪ್ರಾಂಗಣದಲ್ಲಿ ಮಾರ್ಗದರ್ಶನ ಮಾಡಲು ನಾವು ಸಿದ್ಧ, ವಠಾರ ಶಾಲೆ ಕೊರೋನಾ ಹಾಟ್ ಸ್ಪಾಟ ಮಾಡಬೇಡಿ, ಶಿಕ್ಷರ ಮೇಲೆ ನಿಷ್ಕರುಣೆ ತೋರಬೇಡಿ..ಕರುಣೆ ತೋರಿ ಎಂದು ಆಗ್ರಹಿಸಿದ್ದಾರೆ.

ಜೊತೆಗೆ ಶಿಕ್ಷಕ ಸಂಘಟನೆಗಳ ಶಿಕ್ಷಕರ ಅಳಲಿಗೆ ಕ್ಯಾರೆ ಅನ್ನದ ಶಿಕ್ಷಣ ಇಲಾಖೆ ವಿರುದ್ದ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ  ಅಶೋಕ ಎಮ್.ಸಜ್ಜನ, ಪ್ರ.ಕಾ. ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ ಕಾರ್ಯಾಧ್ಯಕ್ಷ  ಶರಣಪ್ಪಗೌಡ್ರ ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ ಕಲ್ಪನ ಚಂದನಕರ, ಆರ್ ಎಂ ಕುರ್ಲಿ ಶಿವಲೀಲಾ ಪೂಜಾರ ಎಂ ವಿ ಕುಸುಮಾ ಜಿ ಟಿ ಲಕ್ಷ್ಮೀದೇವಮ್ಮ, ರಾಜಶ್ರೀ ಪ್ರಭಾಕರ ತಮ್ಮಅಸಮಾಧಾನ ಹೊರ ಹಾಕಿದ್ದಾರೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *