ರಾಜ್ಯ

ಧಾರವಾಡ ಗ್ರಾಮೀಣ ಬಿಜೆಪಿ ಟಿಕೇಟ್ ಸಿಗುವ ವಿಶ್ವಾಸವಿದೆ ಎಂದ ತವನಪ್ಪ ಅಷ್ಟಗಿ

ಧಾರವಾಡ ಪ್ರಜಾಕಿರಣ.ಕಾಮ್ : ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಬಿಜೆಪಿ ಟಿಕೇಟ್ ಕೇಳಿದ್ದೇನೆ. ಅದಕ್ಕೆ ಅಗತ್ಯ ತಯಾರಿ ಕೂಡ ಮಾಡಿಕೊಂಡಿದ್ದೇನೆ. ನನಗೆ ಟಿಕೇಟ್ ಸಿಗುವ ವಿಶ್ವಾಸ ಇದೆ ಎಂದು ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತವನಪ್ಪ ಅಷ್ಟಗಿ ಹೇಳಿದರು.

ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿ ಕೂಡ ಗೆಲ್ಲುವ ಕುದರೆಗೆ ಮಣೆ ಹಾಕಲಿದ್ದು, ಪಾರ್ಟಿ ನಿರ್ಧಾರವನ್ನು ಕಾದುನೋಡುವೆ ಎಂದರು.

2018 ರಲ್ಲಿ ನನಗೆ ಅವಕಾಶ ವಂಚಿತವಾಗಿದೆ. ಅವರು ನನಗೆ ಸಿಕ್ಕರೆ ಸಹಕರಿಸಬೇಕು ಎಂದು ಧಾರವಾಡ ಗ್ರಾಮೀಣ ಶಾಸಕರಿಗೆ ಹೇಳಿದರು.

ನಾನು ಬಿಜೆಪಿ ಪಕ್ಷದ ನಿಷ್ಠಾವಂತ ವ್ಯಕ್ತಿ. ಕಾಂಗ್ರೆಸ್ ನನಗೆ ಸಂಪರ್ಕ ಮಾಡಿಲ್ಲ. ನಾನು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಸದಸ್ಯನಾಗಿ ಯಾವುದೇ ರೀತಿಯ ಚ್ಯೂತಿ ತಂದಿಲ್ಲ ಎಂದರು.

ಸರ್ವೆದಾಗ ನನ್ನ ಹೆಸರು ಕೂಡ ಬಂದಿದೆ. ಹೀಗಾಗಿ ಟಿಕೇಟ್ ಸಿಗುವ ವಿಶ್ವಾಸ ಇದೆ. ಕ್ಷೇತ್ರದ ವಾತವರಣ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ಮೇಲೆ ಟಿಕೇಟ್ ಹಂಚಿಕೆ ಮಾಡಲಿದ್ದಾರೆ ಎಂದು ತವನಪ್ಪ ಅಷ್ಟಗಿ ವಿವರಿಸಿದರು.

ನಮ್ಮ ಕ್ಷೇತ್ರದಲ್ಲಿ ಜಾತಿ ಲೆಕ್ಕಕ್ಕಿಲ್ಲ. ನಾನು ಜೈನ ಸಮುದಾಯದವನಾಗಿದ್ದರೂ ಎಲ್ಲರಿಗೂ ಬೇಕಾದವನಿದ್ದೇನೆ. ಮಾಜಿ ಶಾಸಕಿ ಸೀಮಾ ಮಸೂತಿ, ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಸೇರಿದಂತೆ ಹಲವರ ಹೆಸರು ರೇಸ್ ನಲ್ಲಿವೆ ಎಂದು ತವನಪ್ಪ ಅಷ್ಟಗಿ ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *