ಅಂತಾರಾಷ್ಟ್ರೀಯ

ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಮಾಜಿ ಸಚಿವ ವಿನಯ ಕುಲಕರ್ಣಿ

ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ  ನವದೆಹಲಿ prajakiran.com : ಧಾರವಾಡ ಜಿಲ್ಲೆಯ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೆ ಒಳಗಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇದರಲ್ಲಿ ಮೊದಲ ಪ್ರತಿವಾದಿಯಾಗಿ ಕರ್ನಾಟಕ ಸರ್ಕಾರ ಹಾಗೂ ಎರಡನೇಯವರಾಗಿ ಸಿಬಿಐ ವಿರುದ್ದ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿ ಮೇ 28ರಂದೇ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದೆ. ಅದು ಮುಂದಿನ 90 ದಿನಗಳಲ್ಲಿ […]

ರಾಜ್ಯ

ಕೇಂದ್ರ ಸರಕಾರದ ಯೋಜನೆಗಳು ಅನರ್ಹರ ಪಾಲಾದರೆ ಕ್ರಿಮಿನಲ್ ಪ್ರಕರಣ….!

ಧಾರವಾಡ prajakiran.com  : ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ, ವಸತಿ ಯೋಜನೆಗಳಲ್ಲಿ ಕೇಂದ್ರ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಭ್ರಷ್ಟಾಚಾರ, ಯಾವುದೇ ರೀತಿಯ ಒತ್ತಡಗಳಿಗೆ ಅವಕಾಶ ಮಾಡುವ ಮತ್ತು ತಪ್ಪು ಮಾಹಿತಿ ದಾಖಲಿಸಿ ಯೋಜನೆಗಳ ಲಾಭ ಅನರ್ಹರಿಗೆ ತಲುಪಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಸಿಇಓ ಅವರಿಗೆ ಸೂಚಿಸಿದರು. ಅವರು ಮಂಗಳವಾರ ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವೆಬೆಕ್ಸ್ ಮೂಲಕ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕೃತ […]

ರಾಜ್ಯ

ಯಾದಗಿರಿ ಜಿಲ್ಲಾ ಪಂಚಾಯತ್ : ಕಾಂಗ್ರೆಸನ ಬಂಡಾಯ ಅಭ್ಯರ್ಥಿ ಗೆ ಬಿಜೆಪಿಯ10 ಸದಸ್ಯರ ಬೆಂಬಲ….!

ಯಾದಗಿರಿ prajakiran.com : ಕಳೆದ ದಿನಗಳ ಹಿಂದೆ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವು ತೆರವಾದ ಹಿನ್ನೆಲೆಯಲ್ಲಿ ನಡೆದ ಜುಲೈ 10 ರಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು. ಕರೋನ ವೈರಸ್ ನಿಂದ ಸ್ವಲ್ಪ ತಡೆ : ಯಾದಗಿರಿ ಜಿಲ್ಲಾಡಳಿತದ ಸಿಬ್ಬಂದಿಗಳಿಗೆ ಕರೋನಾವೈರಸ್  ಬಂದಿರುವ ಹಿನ್ನೆಲೆ ಜಿಲ್ಲಾಡಳಿತದ ಭವನಕ್ಕೆ ಸಂಪೂರ್ಣ ಸ್ಯಾನಿಟೇಜಿಂಗ್ ಸಿಂಪರಣೆ ಮಾಡಲಾಗುತ್ತಿತ್ತು. ಹೀಗಾಗಿ ಬೆಳಿಗ್ಗೆ ಪ್ರಾರಂಭವಾಗಬೇಕಿದ್ದ  ಜಿಲ್ಲಾ ಪಂಚಾಯತ್ ಅಧ್ಯಕ್ಷರ  ಚುನಾವಣೆ    ಮಧ್ಯಾಹ್ನ ಪ್ರಾರಂಭವಾಯಿತು. ಮಧ್ಯಾಹ್ನ 3 ಗಂಟೆಗೆ 22 ಜಿಲ್ಲಾ […]

ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ : ಎಸಿಪಿ, ಇನ್ಸಪೆಕ್ಟರ್ ಸೇರಿ 6 ಜನರ ವಿಚಾರಣೆ

ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಧಾರವಾಡ ಎಸಿಪಿ ಹಾಗೂ ಸದ್ಯ ಗದಗ ಎಸಿಬಿ ಡಿವೈಎಸ್ಪಿ ಆಗಿರುವ ವಾಸುದೇವ ನಾಯ್ಕ, ಅಂದಿನ ಉಪನಗರ ಪೊಲೀಸ್ ಇನ್ಸಪೆಕ್ಟರ್ ಮೋತಿಲಾಲ್ ಪವಾರ್ ಸೇರಿ ಆರು ಜನ ಪೊಲೀಸರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳ ತಂಡ ನಡೆಸಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ವಿಚಾರಣೆ ಆರಂಭಿಸಿ ರಾತ್ರಿಯವರೆಗೆ ವಿಚಾರಣೆ ನಡೆಸಿದರು ಎಂದು ಗೊತ್ತಾಗಿದೆ. 2016ರ […]

ರಾಜ್ಯ

ಧಾರವಾಡ ಜಿಲ್ಲಾ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ

ಧಾರವಾಡ prajakiran.com : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ  ಹಳೇ ತೇಗೂರ ಗ್ರಾಮದ ಜನರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿ ರೈತ- ಕೃಷಿಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಧಾರವಾಡ ಜಿಲ್ಲಾ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನೆಡೆಸಲಾಯಿತು.  ಇಲ್ಲಿಯವರೆಗೆ ಮಾಡಿದ ೨೬ ದಿನಗಳ ಕೂಲಿಯನ್ನು ಬಿಡುಗಡೆ ಈ ಕೂಡಲೇ  ಮಾಡಬೇಕು ಎಂದು ಒತ್ತಾಯಿಸಿದರು.  ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ  ಅನೂಕೂಲವಾಗಲಿ […]