education minister sureshkumar
ರಾಜ್ಯ

ನವೆಂಬರ್ ಅಂತ್ಯದವರೆಗೆ ಶಾಲೆ ಆರಂಭ ಪ್ರಶ್ನೆಯೇ ಇಲ್ಲ ಎಂದ ಸುರೇಶಕುಮಾರ್

ಬೆಂಗಳೂರು prajakiran.com : ರಾಜ್ಯದ 40 ಶಾಸಕರ ಅಭಿಪ್ರಾಯವನ್ನು ಸ್ವತಃ ಭೇಟಿ ಮಾಡಿ ಸಂಗ್ರಹಿಸಿದ್ದೇನೆ. ರಾಜ್ಯದ ಬಹುತೇಕ ಶಾಸಕರು ನವೆಂಬರ್ ಅಂತ್ಯದವರೆಗೆ ಶಾಲೆ ಆರಂಭಿಸುವುದು ಬೇಡ ಎಂದಿದ್ದಾರೆ. ಹೀಗಾಗಿ ರಾಜ್ಯದ ಶಿಕ್ಷಣ ಇಲಾಖೆ ಮುಂದೆ ಸದ್ಯಕ್ಕೆ ಶಾಲೆ ಆರಂಭಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬರುವ ಶುಕ್ರವಾರ ಹಾಗೂ ಸೋಮವಾರ ಮಹತ್ವದ ಸಭೆ ನಡೆಸಲಾಗುವುದು. ಸಭೆಯಲ್ಲಿ ಶಿಕ್ಷಣ ತಜ್ಞರ, ಬಿಇಒ ಜೊತೆಗೆ ಸಮಾಲೋಚಿಸಿ, ಆನಂತ ನಿರ್ಧಾರ ಪ್ರಕಟಿಸಲಾಗುವುದು ಎಂದರು. […]

ರಾಜ್ಯ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡಲು ಆಗ್ರಹ

ಹುಬ್ಬಳ್ಳಿ prajakiran.com : ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಕಳೆದ  ಹಲವಾರು ವರ್ಷಗಳಿಂದ ನಿಯಮಿತವಾಗಿ ನಡೆಯದೆ ಇರುವುದರಿಂದ 70 ಸಾವಿರಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗಿ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಆದ್ದರಿಂದ ಆದಷ್ಟು ಬೇಗ  ಆಕ್ಷೇಪಣೆಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿ ನಿಯಮಗಳನ್ನು ಹೊರಡಿಸಿ ವರ್ಗಾವಣೆ ವೇಳಾ ಪಟ್ಟಿ ಪ್ರಕಟಿಸಬೇಕು ಎಂದು ಕರ್ನಾಟಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆಗ್ರಹಿಸಿದೆ. ನಿಯಮಗಳಲ್ಲಿ ಈಗಾಗಲೇ ಸಲ್ಲಿಸಲಾಗಿರುವ ಶೇ.೨೫ ಮಿತಿ ಕೈ ಬಿಡುವುದು, ಪರಸ್ಪರ ವರ್ಗಾವಣೆ ಮೂರು ವರ್ಷ […]

ರಾಜ್ಯ

ರಾಜ್ಯಾದ್ಯಂತ 25 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸೋಂಕು, 57 ಹೋಮ್ ಕ್ವಾರಂಟಿನ್

ಬೆಂಗಳೂರು prajakiran.com : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ 25 ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದ್ದರೆ, 57 ಹೋಮ್ ಕ್ವಾರಂಟಿನ್  ಮಾಡಿರುವುದು ಪಾಲಕರಿಗೆ ಆತಂಕ ಮೂಡಿಸಿದೆ. ಹಾಸನ, ಗದಗ, ಬಾಗಲಕೋಟೆ, ಬೆಂಗಳೂರಿನ ಹಲವು ವಿದ್ಯಾರ್ಥಿಗಳಿಗೆ ಮಹಾಮಾರಿ ಕರೋನಾ ಕಾಡುತ್ತಿದೆ. ಇದಲ್ಲದೆ, ಹಲವಡೆ ಶಿಕ್ಷಕರು, ಭದ್ರತ್ರೆಗೆ ನಿಯೋಜನೆಗೊಂಡ ಪೊಲೀಸರಿಗೂ ಕ್ರೂರಿ ಕರೋನಾ ಹರಡಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಸುರೇಶಕುಮಾರ್ ಅವರು ಮುಂದೇನು ಎಂಬ ಬಗ್ಗೆ ತಜ್ಞರ ಸಮಿತಿಯಿಂದ ಸಲಹೆ ಕೇಳಿದ್ದಾರೆ. ಸೋಂಕಿತ ವಿದ್ಯಾರ್ಥಿಗಳಿಗೆ […]

ರಾಜ್ಯ

ಶುಲ್ಕ ಹೆಚ್ಚಿಸಿದ್ದ ಒಂದು ಸಾವಿರ ಖಾಸಗಿ ಶಾಲೆಗಳಿಗೆ ನೋಟಿಸ್

ಬೆಂಗಳೂರು prajakiran.com : ರಾಜ್ಯಾದ್ಯಂತ ಶುಲ್ಕ ಹೆಚ್ಚಿಸಿದ್ದ ಒಂದು ಸಾವಿರ ಖಾಸಗಿ ಶಾಲೆಗಳಿಗೆ ನೋಟಿಸ್ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ. ಕರೋನಾದಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಶಾಲಾ ಆಡಳಿತಮಂಡಳಿಗೆ ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಿಸಬಾರದು ಎಂದು ಹೇಳಲಾಗಿದೆ. ಆದರೂ ಶಾಲೆಗಳು ನಿಯಮ ಬಾಹಿರವಾಗಿ ವಸೂಲಿಗೆ ಮುಂದಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ರಾಜ್ಯದ 350 ಶಾಲೆಗಳು ಶುಲ್ಕ ಇಳಿಸಿವೆ. ಉಳಿದ ಶಾಲೆಗಳು ಭಂಡತನ ತೋರಿದರೆ ನಿಯಮದ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆನ್ […]