ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ “ದಂಡ ಪ್ರಯೋಗ“ ಗದಗ prajakiran.com : ಹೆಲ್ಮೆಟ್ ರಹಿತ ಸವಾರರಿಗೆ ಸೋಮವಾರ ನಗರದ ಗದಗ ಪೊಲೀಸರು ಕಾರ್ಯಾಚರಣೆಗೆ ಇಳಿದು ದ್ವಿಚಕ್ರ ವಾಹನ ಸವಾರರಿಗೆ “ಶಾಕ್” ನೀಡಿದರು. ನೂತನ ಮೋಟಾರು ವಾಹನ ಕಾಯಿದೆಯನ್ವಯ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಚುರುಕು ಮುಟ್ಟಿಸಿದರು. ಬೆಳಗ್ಗೆಯಿಂದ ಹೆಲ್ಮೆಟ್ ಇಲ್ಲದ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ದಂಡ ವಿಧಿಸುತ್ತಿದ್ದ ದೃಶ್ಯಗಳು ಅವಳಿ ನಗರದಲ್ಲಿಸಾಮಾನ್ಯವಾಗಿತ್ತು ಸೋಮವಾರ ಒಂದೇ ದಿನ ೨೦೭ ಕೇಸ್ ದಾಖಲಿಸಿ, ೧,೦೩,೫೦೦ ದಂಡ ವಸೂಲಿ […]