ಅಂತಾರಾಷ್ಟ್ರೀಯ

ವಿಜಯಪುರದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ನಿರಂತರ ಮಾಹಿತಿ

ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ನಿರಂತರ ಮಾಹಿತಿ

ಬೆಂಗಳೂರು, ಜನವರಿ 02: ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶ್ರೀಗಳ ಭೇಟಿ ಯಾದಾಗ ಅವರು ನನ್ನ ಗುರುತು ಹಿಡಿದರು. ಮಾತನಾಡಲು ಆಗುತ್ತಿರಲಿಲ್ಲ ಎನ್ನುವುದನ್ನು ಬಿಟ್ಟರೇ ಅವರ ಎಲ್ಲಾ ಅಂಗಾಂಗಗಳ ಮಾನದಂಡಗಳು ಸಾಮಾನ್ಯವಾಗಿಯೇ ಇತ್ತು ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತನಾಡಿದಾಗ ಧ್ವನಿ ಗುರುತು ಹಿಡಿದು ಶುಭ ಕೋರಿದರು.

ಇಂದೂ ಕೂಡ ಅವರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಂಬಂಧ ಪಟ್ಟವರ ಸಂಪರ್ಕದಲ್ಲಿದ್ದೇನೆ ಎಂದರು.

ಯಾವುದೇ ಆತಂಕಕ್ಕೆ ಅವಕಾಶವಿಲ್ಲ. ಸಿದ್ಧೇಶ್ವರ ಸ್ವಾಮಿಗಳಿಗೆ ಅವರದ್ದೇ ಆದ ಅಂತರ್ಗತ ಶಕ್ತಿ ಇದೆ.

ಅದರ ಮೂಲಕ ಅನಾರೋಗ್ಯವನ್ನು ಗೆದ್ದು ಜಯಶಾಲಿಯಾಗಿ ಬರುತ್ತಾರೆ. ದೀರ್ಘಕಾಲ ನಮ್ಮ ಜೊತೆಗಿದ್ದು, ಆಶೀರ್ವಾದ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ನಮ್ಮ ಕೆಲಸ, ಆಡಳಿತದ ಆಧಾರದ ಮೇಲೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ವೈಯ್ಯಾಲಿಕಾವಲ್ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಿಂದೂ ಧರ್ಮದಲ್ಲಿ ಪವಿತ್ರವಾದ ದಿನ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕೆಂದು ಪ್ರತೀತಿ.

ತಿರುಪತಿಗೆ ಹೋಗಲು ಸಾಧ್ಯವಿಲ್ಲ ದಿರುವರರಿಂದ ಟಿ ಟಿ ಡಿ ಯವರ ದೇವಸ್ಥಾನಕ್ಕೆ ಬಂದು ಪುನೀತ ಭಾವನೆ ಮೂಡಿದೆ.

ಕರ್ನಾಟಕದ ಜನತೆ ಅಭಿವೃದ್ಧಿ, ಸಮೃದ್ಧಿಯಾಗುವಂತೆ ದೇವರಲ್ಲಿ ಬೇಡಿಕೊಂಡಿದ್ದು, ಖಂಡಿತವಾಗಿ 2023 ರಲ್ಲಿ ವೆಂಕ್ತೇಶ್ವನ ಆಶೀರ್ವಾದ ಇರುತ್ತದೆ.

ವೆಂಕಟೇಶ್ವರ ಎಂದರೆ ಅಭಿವೃದ್ಧಿ, ಸಮೃದ್ಧಿಯ ಸಂಕೇತ. ಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

*ಕಾನೂನು ಪ್ರಕಾರ ಕ್ರಮ*
ಉದ್ಯಮಿ ಪ್ರದೀಪ್ ಅವರು ಶಾಸಕ ಅರವಿಂದ ಲಿಂಬಾವಳಿ ಯವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದುಎಫ್.ಐ.ಆರ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಕ್ರಿಯೆ ಏನಾಗಬೇಕೋ ಆಗಿದೆ. ಮುಂದೂ ಕೂಡ ಕಾನೂನು ಪ್ರಕಾರವಾಗಿ ಆಗಲಿದೆ ಎಂದರು.

*ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ನಿರಂತರ ಮಾಹಿತಿ*

ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಮಾತನಾಡಿ ಅವರನ್ನು ಭೇಟಿ ಯಾದಾಗ ಗುರುತು ಹಿಡಿದರು. ಮಾತನಾಡಲು ಆಗುತ್ತಿರಲಿಲ್ಲ ಎನ್ನುವುದನ್ನು ಬಿಟ್ಟರೇ ಅವರ ಎಲ್ಲಾ ಅಂಗಾಂಗಗಳ ಮಾನದಂಡಗಳು ಸಾಮಾನ್ಯವಾಗಿಯೇ ಇತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತನಾಡಿದಾಗ ಧ್ವನಿ ಗುರುತು ಹಿಡಿದು ಶುಭ ಕೋರಿದರು. ಇಂದೂ ಕೂಡ ಅವರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಂಬಂಧ ಪಟ್ಟವರ ಸಂಪರ್ಕದಲ್ಲಿದ್ದೇನೆ.

ಯಾವುದೇ ಆತಂಕಕ್ಕೆ ಅವಕಾಶವಿಲ್ಲ. ಸಿದ್ಧೇಶ್ವರ ಸ್ವಾಮಿಗಳಿಗೆ ಅವರದ್ದೇ ಆದ ಅಂತರ್ಗತ ಶಕ್ತಿ ಇದೆ. ಅದರ ಮೂಲಕ ಅನಾರೋಗ್ಯವನ್ನು ಗೆದ್ದು ಜಯಶಾಲಿಯಾಗಿ ಬರುತ್ತಾರೆ. ದೀರ್ಘಕಾಲ ನಮ್ಮ ಜೊತೆಗಿದ್ದು, ಆಶೀರ್ವಾದ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *