ರಾಜ್ಯ

ಧಾರವಾಡದ ಸಂಗೊಳ್ಳಿ ರಾಯಣ್ಣ ನಗರ ಸೀಲ್ ಡೌನ್… !




ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.  ಇದರಿಂದಾಗಿ ಬಡಾವಣೆಗಳ ಸೀಲ್ ಡೌನ್ ಕೂಡ ಹೆಚ್ಚುತ್ತಲೇ ಇದೆ.

ಮೊನ್ನೆ 35, ನಿನ್ನೆ 47 ಇಂದು ಎಷ್ಟು ಎಂಬ ಪ್ರಶ್ನೆ ಚರ್ಚೆ ನಡೆಯುತ್ತಿರುವಾಗಲೇ ಕರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಿದ್ಯಾನಗರಿ ಧಾರವಾಡದ ಹಲವೆಡೆ ಸೀಲ್ ಡೌನ್ ಮಾಡಲಾಗುತ್ತಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಜಿಲ್ಲಾಡಳಿತದ ಸೂಚನೆಯಂತೆ ಸೀಲ್ ಡೌನ್ ಕೈಗೊಳ್ಳುತ್ತಿದ್ದಾರೆ.



ಶುಕ್ರವಾರ ಧಾರವಾಡದ ಸಂಗೊಳ್ಳಿ ರಾಯಣ್ಣ ನಗರದಲ್ಲಿರುವ ಸೋಂಕಿತ ವಾಸಿಸುವ ರಸ್ತೆಯನ್ನು ಸೀಲ್ ಡೌನ್ ಮಾಡಿದರು.

ಪಿ-16933 ನ ಸೋಂಕಿತ  29 ವರ್ಷದ ಸಂಗೊಳ್ಳಿ ರಾಯಣ್ಣ ನಗರದ ವ್ಯಕ್ತಿಗೆ ಕರೊನಾ ಪಾಸಿಟಿವ್ ಬಂದಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಹೀಗಾಗಿ ಆ ರಸ್ತೆಯಲ್ಲಿ ಯಾರೊಬ್ಬರು ಸಂಚರಿಸದಂತೆ ಆ ವ್ಯಕ್ತಿಯ ನಿವಾಸದ ರಸ್ತೆಯನ್ನು ಮಹಾನಗರ ಪಾಲಿಕೆಯವರು ಸ್ಯಾನಿಟೈಸಿಂಗ್ ಮಾಡಿ ಸೀಲ್ ಡೌನ್ ಮಾಡಿದರು.



ಅದೇ ರೀತಿ ನಿನ್ನೇ ಧಾರವಾಡದ ಸಂಪಿಗೆ ನಗರದಲ್ಲಿ ಒಬ್ಬನಿಗೆ ಹಾಗೂ ವಿಜಯ ನಗರದ ಒಬ್ಬನಿಗೆ ಕರೋನಾ ಸೋಂಕು ವಕ್ಕರಿಸಿದ್ದರಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ನಂ 3 ರ ಸಹಾಯಕ ಆಯುಕ್ತ ಆರ್. ಎಂ. ಕುಲಕರ್ಣಿಯವರ ನೇತೃತ್ವದಲ್ಲಿ ಎರಡು ಬಡಾವಣೆಯ ಸೋಂಕಿತರು ವಾಸಿಸುವ ರಸ್ತೆಯನ್ನು ಸೀಲ್ ಡೌನ್ ಮಾಡಿದ್ದಾರೆ.

ವಿದ್ಯಾನಗರಿಯಲ್ಲಿ ಸೀಲ್ ಡೌನ್ ಹೆಚ್ಚುತ್ತಲೇ ಸಾಗಿರುವುದು ಜನತೆಯನ್ನುಕಂಗೆಡುವಂತೆ ಮಾಡಿದೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ಜನತೆ ಆತಂಕದಲ್ಲಿಯೇ ದಿನದೂಡುವಂತಾಗಿದೆ.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *