ಆಧ್ಯಾತ್ಮ

ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದರು : ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣ ಆಚರಣೆ

ಧಾರವಾಡ prajakiran.com : ಸ್ವಾಮಿ ವಿವೇಕಾನಂದರ ೧೫೮ನೇ ಜಯಂತಿಯನ್ನು ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ನಲ್ಲಿ ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಭಾನುವಾರ ಬೆಳಗ್ಗೆ ಕಲಾವಿದ ಮಂಜುನಾಥ ಹಿರೇಮಠ ಅವರು ಸ್ವಾಮಿ ವಿವೇಕಾನಂದರ ಕಲಾಕೃತಿಯನ್ನು ಮರಳಿನಲ್ಲಿ ಅರಳಿಸಿದರು. ಬೆಳಗ್ಗೆ ೫-.೩೦ರಿಂದ ೯ಗಂಟೆಯವರೆಗೆ ಸತತ ನಾಲ್ಕು ಗಂಟೆಗಳಲ್ಲಿ ತಮ್ಮ ಕೈ ಚಳಕ ತೋರುವಲ್ಲಿ ಯಶಸ್ವಿಯಾದರು.

ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿಗಳು ಕಲಾಕೃತಿಯನ್ನು ವೀಕ್ಷಿಸಿ, ಭಕ್ತಿಯಿಂದ ನಮಿಸಿ ಪೂಜೆ ಸಲ್ಲಿಸಿದರು.

ಬಳಿಕ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಧರ್ಮ ಜಾಗೃತಿಯನ್ನು ಗೊಳಿಸಿದ ಅವರು ಎಂದಿಗೂ ಅಮರರಾಗಿರುತ್ತಾರೆ.

ಒಬ್ಬ ವೀರಸನ್ಯಾಸಿ ಹೇಗೆ ಬದುಕಬೇಕು, ಇತರರಿಗೆ ಯಾವ ರೀತಿ ಸ್ಪೂರ್ತಿ ತುಂಬಬೇಕು ಎಂಬುದನ್ನು ಬದುಕಿ ತೋರಿಸಿದ ಧೀಮಂತ ವ್ಯಕ್ತಿಯಾಗಿದ್ದರು. ಇಂದಿನ ಯುವ ಪೀಳಿಗೆ ಅವರ ಬದುಕನ್ನು ಅಥೈಸಿಕೊಂಡು ಬಾಳು ಸಾಗಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜನ ಜಾಗೃತಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಈರಣ್ಣಅಗಳಗಟ್ಟಿ, ಬಸವಣ್ಣೆಪ್ಪ ಕಮತಿ, ಸುಮಾ ಬಸವರಾಜ ಕೊರವರ, ರೇಷ್ಮಾ, ಸುರೇಶ ಪವಾರ, ಆನಂದ ಪಾಟೀಲ, ಸಚಿನ್ ತಡವಾಡಕರ್, ಮಲ್ಲೇಶ ಅಂಬಿಗೇರ, ವೀರಣ್ಣ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *