ರಾಜ್ಯ

ಧಾರಕಾರ ಮಳೆಗೆ ಕಲಘಟಗಿಯ ಗಳಗಿ ಹುಲಕೊಪ್ಪದ ಹಲವು ಮನೆಗಳಿಗೆ ನುಗ್ಗಿದ ನೀರು

ಕಲಘಟಗಿ prajakiran.com : ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪದ ಕೆಲವೊಂದಷ್ಟು ಮನೆಯವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಗಳಗಿ ಹುಲಕೊಪ್ಪದ ಜನತಾ ಪ್ಲಾಟ್ ಹಾಗೂ ಶಿವಾಜಿ ಸರ್ಕಲ್ ಏರಿಯಾದಲ್ಲಿ ಮನೆಗಳಿಗೆ ಹೊಕ್ಕ ನೀರು ಅಪಾರ ಹಾನಿಯುಂಟು ಮಾಡಿದೆ.

ಒಂದೆರಡು ಮನೆಗಳಲ್ಲಿ ಪಾತ್ರೆ, ಪಗಡೆ ಸೇರಿದಂತೆ ಔಷಧಿ, ಹಾಸಿಗೆ ನೀರು ಪಾಲಾಗಿವೆ.

ಈ ಎಲ್ಲಾ ಸಮಸ್ಯೆಗೆ ಗ್ರಾಮ ಪಂಚಾಯತ್ ಸದಸ್ಯರೇ ಕಾರಣ ಎಂದು ಜನತೆ ದೂರಿದ್ದಾರೆ‌.

ಯಾವುದೇ ಗಟಾರು ನಿರ್ಮಾಣ ಸಂಪೂರ್ಣವಾದ ಮತ್ತು ಉಚ್ಚಮಟ್ಟದಲ್ಲಿ ನಿರ್ಮಿಸಿಲ್ಲ. ಹಾಗೇಯೇ ಜನತಾ ಪ್ಲಾಟ್ ಗಟಾರು ನಿನ್ನೆ ಮೊನ್ನೆಯದಲ್ಲ.

ಕಳೆದ 8ರಿಂದ 10 ವರ್ಷ ಹಳೆಯದಾಗಿದೆ. ಪ್ಲಾಟಿನ ಜನರು ಮನವಿ ಪತ್ರಗಳು ಪದೇ ಪದೇ ನೀಡುತ್ತಿದ್ದರೂ ಯಾವುದೇ ಸ್ಪಂದನೆ ಇಲ್ಲದಂತಾಗಿದೆ.

ಜನರು ನೀಡಿದ ಮನವಿ ಪತ್ರಗಳು ಮನೆಯ ಕಸಕ್ಕೆ ಸೇರಿತೆ ವಿನಃ ಮನಸ್ಸಿಗೆ ಮುಟ್ಟಲಿಲ್ಲ. ಯಾವುದೇ ಕಾರ್ಯ ಮಾಡಲಿಲ್ಲ.

ಮಳೆಗಾಲ ಪ್ರಾರಂಭವಾಗುವ ಮುನ್ನವೇ ಈ ಸಮಸ್ಯೆಗೆ ಪರಿಹಾರ ಒದಗಿಸಿಕೊಡಿ ಎಂದು ಕೇಳಿಕೊಳ್ಳು ತ್ತಿರುವ ಗ್ರಾಮದ ಜನತೆ ನೋವಿಗೆ ಸ್ಪಂದಿಸುವವರಾದರೂ ಯಾರು ಎಂಬ ಪ್ರಶ್ನೆ ಎದುರಾಗಿದೆ.

ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಣ್ಣಪ್ಪ ದೇಸಾಯಿ, ಮಾಜಿ ತಾಲ್ಲೂಕ ಪಂಚಾಯತ್ ಸದಸ್ಯ ಈರಯ್ಯ ಸಿಧ್ಧಾಪೂರಮಠ ಮತ್ತು ಬಸವರಾಜ ಬದ್ನೀಗಟ್ಟೀ ಹಾಗೂ ಸಹಾಯ ಮಾಡಿದ ಸ್ಥಳದಲ್ಲಿಯೇ ಇದ್ದ ನೆರೆಯವರಾದ ಮೈಲಾರ್ ಕಬ್ಬೂರ , ಈರಯ್ಯ ಹಿರೇಮಠ,ಪ್ರಶಾಂತ ಹಂಚಿನಮನಿ ಸ್ಥಳ ವೀಕ್ಷಣೆ ಮಾಡಿ ತಮ್ಮ ಕೈಲಾದಮಟ್ಟಿಗೆ ಸಹಾಯ ಮಾಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *