ರಾಜ್ಯ

ರಾಜ್ಯದ ಟ್ರಾಫಿಕ್ ಪೊಲೀಸರಿಗೆ ರೇನ್ ಕೋಟ್ ವಿತರಣೆ

ಬೆಂಗಳೂರು prajakiran. com :ಮಳೆ, ಗಾಳಿ, ಚಳಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲ ಟ್ರಾಫಿಕ್ ಪೊಲೀಸರಿಗೆ ಸದ್ಯದಲ್ಲಿಯೇ ಸರ್ಕಾರದ ವತಿಯಿಂದ ರೈನ್ ಕೋರ್ಟ್ ಗಳನ್ನು ವಿತರಣೆ ಮಾಡುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ಟೌನ್ ಹಾಲ್ ಬಳಿ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ ಆಯೋಜಿಸಿದ್ದ ಫೆಸ್ ಶೀಲ್ಡ್, ರೈನ್ ಕೋಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಂಗಳವಾರ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮುಖ್ಯಮಂತ್ರಿಗಳ ಜೊತೆಗೆ ಬರುತ್ತಿದ್ದಾಗ ಮಳೆ ಸುರಿಯುತ್ತಿತ್ತು. ಆ ಸಂದರ್ಭದಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ತೊಡಗಿದ್ದ ಪೊಲೀಸ್ ಪೇದೆಯನ್ನು ಕಂಡು ಮುಖ್ಯಮಂತ್ರಿಗಳು ಕನಿಕರ ವ್ಯಕ್ತಪಡಿಸಿದರು.

ಇಷ್ಟೊಂದು ಮಳೆ ಸುರಿಯುತ್ತಿದ್ದರೂ ಅವರಿಗೆ ರೇನ್ ಕೋಟ್ ಇಲ್ಲ. ಹೀಗಾಗಿ ಅವರಿಗೆ ಮಳೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಅನುವಾಗುವಂತೆ ರೇನ್ ಕೋಟ್ ವಿತರಿಸಿ ಎಂದು ನನಗೆ ಸೂಚಿಸಿದರು.

ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಎಸ್ ಡಿ ಆರ್ ಎಫ್ ನಿಧಿಯಡಿ ರಾಜ್ಯದ ಎಲ್ಲಾ ಟ್ರಾಫಿಕ್ ಪೊಲೀಸರಿಗೆ ರೇನ್ ಕೋಟುಗಳನ್ನು ಎಸ್ ಡಿ ಆರ್ ಎಫ್ ನಿಧಿಯಿಂದ ಖರೀದಿಸಿ ವಿತರಣೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 12 ಹೈಸ್ಪೀಡ್ ಕಾರಿಡಾರ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಎಂಟು ತಿಂಗಳ ಅವಧಿಯಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ನಗರ ಪ್ರವೇಶಿಸುವ ವಾಹನಗಳಿಂದ ಆಗುವ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯ ಎಂದು ಅವರು ತಿಳಿಸಿದರು.

ಬೆಂಗಳೂರು ಪೊಲೀಸ್ ಆಯುಕ್ತ ಕಮಲಪಂಥ ನೇತೃತ್ವದಲ್ಲಿ ಬೆಂಗಳೂರಿನ ಪೊಲೀಸ್ ಠಾಣೆಗಳ ಆಧುನಿಕರಣ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಹಗಲಿರುಳೆನ್ನದೆ ಸಂಚಾರ ಪೊಲೀಸರು ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಂಥವರ ನೆರವಿಗೆ ಎಂಬೆಸ್ಸಿ ಕಂಪನಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ 4500 ಫೇಸ್ ಶೀಲ್ಡ್ ಹಾಗೂ 8000 ಹ್ಯಾಂಡ್ ಗ್ಲೌಸ್ ಗಳನ್ನು ಸಿಎಸ್ಆರ್ ನಿಧಿಯಲ್ಲಿ ನೀಡಿದೆ.

ಆಕ್ಟ್ ಇಂಟರ್ನೆಟ್ ಕಂಪನಿ 57ಲಕ್ಷ ರೂಪಾಯಿ ವೆಚ್ಚದಲ್ಲಿ 4750 ಗಳನ್ನು ರೈನ್ ಕೋಟ್ ಗಳನ್ನು ನೀಡಿದೆ. ಬಿ ಎಂ ಆರ್ ಸಿ ಎಲ್ ಕಂಪನಿ ವತಿಯಿಂದ 88 ಲಕ್ಷ ರೂಪಾಯಿ ಮೊತ್ತದ ವೇರಿಯಬಲ್ ಮೆಸೇಜಿಂಗ್ ಸಿಸ್ಟಮ್ ಗಳನ್ನು ಕೊಡುಗೆಯಾಗಿ ನೀಡಲಾಗಿದೆ

ಇದಕ್ಕಾಗಿ ಈ ಕಂಪನಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.‌

ಸಮಾರಂಭದಲ್ಲಿ ಟ್ರಾಫಿಕ್ ಪೊಲೀಸರಿಗೆ ಫೇಸ್ ಶೀಲ್ಡ್ ಹ್ಯಾಂಡ್ ಗ್ಲೌಸ್ ಮತ್ತು ರೈನ್ಕೋಟ್ ಗಳನ್ನು ಸಚಿವರು ವಿತರಿಸಿದರು.

ಬಿ ಎಂ ಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ,
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬೆಂಗಳೂರು ನಗರ ಸಂಚಾರ ಬಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ, ಎಂಬೆಸ್ಸಿ ಕಂಪನಿಯ ವೆಂಕಟೇಶ್, ಆಕ್ಟ್ ಇಂಟರ್ ನೆಟ್ ಕಂಪನಿಯ ಸಿಇಒ ಬಾಲ‌ಮಲ್ಲಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *