ಅಂತಾರಾಷ್ಟ್ರೀಯ

34 ದಿನಗಳ ಬಳಿಕ ಎಸ್ ಐ ಟಿ ವಶಕ್ಕೆ ಪ್ರಜ್ವಲ್ ರೇವಣ್ಣ…!

ಬೆಂಗಳೂರು ಪ್ರಜಾಕಿರಣ.ಕಾಮ್ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ 34 ದಿನಗಳ ಬಳಿಕ ಎಸ್ ಐ ಟಿ ವಶಕ್ಕೆ ಪಡೆದಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಜರ್ಮನ್ ನಿಂದ ವಿಮಾನ ಇಳಿಯುತ್ತಿದ್ದಂತೆ ಎಸ್‌ಐಟಿಯಿಂದ ಬಂಧನಕ್ಕೊಳಗಾದ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ರಾತ್ರಿಯೇ ಎಸ್‌ಐಟಿ ಪೊಲೀಸ್ ಜೀಪ್‌ನಲ್ಲಿ ಕಚೇರಿಗೆ ಕರೆದುಕೊಂಡು ಹೋಯಿತು.

ರಾತ್ರಿ ಎಸ್‌ಐಟಿ ಕಚೇರಿಯಲ್ಲಿಯೇ ಕಳೆದಿದ್ದು, ಶುಕ್ರವಾರ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ಆ ಬಳಿಕ ತಮ್ಮ ಕಸ್ಟಡಿಗೆ ಪಡೆದು
ಅತ್ಯಾಚಾರ ನಡೆದ ಪ್ರಜ್ವಲ್ ರೇವಣ್ಣ ವಸತಿ ಗೃಹ ಮತ್ತು ಹೊಳೆನರಸೀಪುರದ ಫಾರ್ಮ್‌ ಹೌಸ್‌, ಸಂಸದರ ಕಚೇರಿಗಳಿಗೆ ಸ್ಥಳ ಮಹಜರು ನಡೆಸಲಿದೆ.

ಆನಂತರ ಅವರ ವಿರುದ್ದ ಕೇಳಿಬಂದ ದೂರುಗಳ ಕುರಿತು ಎಸ್‌ಐಟಿ ಅಧಿಕಾರಿಗಳು ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ.

ಸುಮಾರು 34 ದಿನಗಳಿಂದ ಎಸ್ ಐ ಟಿ ಕಣ್ಣು ತಪ್ಪಿಸಿ ವಿದೇಶದಲ್ಲಿದ್ದ ಪ್ರಜ್ವಲ್ ವಿರುದ್ದ ಎರಡು ಅತ್ಯಾಚಾರ ಪ್ರಕರಣಗಳು ಸೇರಿದಂತೆ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.

ಹೀಗಾಗಿ ಅವರ ವಿರುದ್ಧ ಬಂಧನ ವಾರಂಟ್ ಹಾಗೂ ಇಂಟರ್‌ಪೋಲ್ ಮೂಲಕ ಸಿಬಿಐ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *