ಅಪರಾಧ

ಪೊಲೀಸ್ ಇನ್ಸಪೆಕ್ಟರಗಳ ಹೆಸರಿನಲ್ಲಿ ನಕಲಿ ಫೇಸಬುಕ್ ಖಾತೆ ಸೃಷ್ಟಿಸಿ ಹಣ ವಂಚನೆ

ಧಾರವಾಡ prajakiran.com : ಪೊಲೀಸ್ ಇನ್ಸಪೆಕ್ಟರ್ಗಳ ಹೆಸರಿನಲ್ಲಿ ನಕಲಿ ಫೇಸಬುಕ್  ಖಾತೆ ಸೃಷ್ಟಿಸಿ ಹಣ ವಂಚನೆಮಾಡಿರುವ ಪ್ರಕರಣಗಳು ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ಇನ್ಸಪೆಕ್ಟರ್ ಗಳಾಗಿರುವ ಗಿರೀಶ ಬೋಜಣ್ಣವರ, ವೈ.ಡಿ.ಅಗಸಿಮನಿ ಹಾಗೂ ಪಿ ಎಸ್ ಐ ವನಮಾಲಾ ಅವರ ಹೆಸರಿನಲ್ಲಿ ಈ ನಕಲಿ ಫೇಸ್ ಬುಕ್ ಖಾತೆಗಳನ್ನು ತೆಗೆದು ಸಾವಿರಾರು ರೂಪಾಯಿ ಹಣ ಪೀಕಿದ್ದಾರೆ.

 ಇನ್ಸಪೆಕ್ಟರ್ ವೈ.ಡಿ. ಅಗಸಿನಮನಿ ಅವರ ಹೆಸರಿನಲ್ಲಿ ಬೆಂಗಳೂರಿನ ಒಬ್ಬರಿಂದ ಹದಿನೈದು ಸಾವಿರ, ಬಳ್ಳಾರಿಯ ಇಬ್ಬರಿಂದ 15-20 ರೂಪಾಯಿ ಪೀಕಿದ್ದಾರೆ.ಹೀಗೆ ಇನ್ಸಪೆಕ್ಟರ್ ಹೆಸರಿನಲ್ಲಿ 35-40 ಸಾವಿರ ಹಣ ಪಡೆದಿದ್ದಾರೆ.

ನಾಳೆ ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಆದರೆ ಅದು ಫೇಕ್ ಐಡಿ ಎಂಬುದು ಅವರ ಸ್ನೇಹಿತರಿಗೆ ಗೊತ್ತಾಗಿಲ್ಲ. ಫೇಸಬುಕ್ ನಲ್ಲಿ ಕೂಡ ಈಗ ನಕಲಿ ಕಳ್ಳರಿದ್ದಾರೆ ಎಚ್ಚರಿಕೆ ಇರುವುದು ಒಳಿತು ಎಂದರೆ ತಪ್ಪಾಗಲಾರದು.

ಈ ಕುರಿತು ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದಾರೆ. ಕಳೆದ ಹಲವು ದಿನಗಳಿಂದ ಇಂತಹ ದಂಧೆ ಜೋರಾಗಿ ನಡೆದಿದ್ದು, ಯಾಮಾರುವ ಮುನ್ನ ಇರಲಿ ಎಚ್ಚರ.

ಅದೇ ರೀತಿ ಪೊಲೀಸ್ ತರಬೇತಿ ಶಾಲೆಯ ಇನ್ಸಪೆಕ್ಟರ್ ಗಿರೀಶ್ ಬೋಜಣ್ಣವರ, ಪಿ ಎಸ್ ಐ ವನವಾಲಾ ಅವರ ಹೆಸರಿನಲ್ಲೂ ನಕಲಿ ಫೇಸಬುಕ್ ಖಾತೆ ತೆಗೆದು ಹಣ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಅವರು ಕೂಡ ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಜಾಕಿರಣ.ಕಾಮ್ ಗೆ ಮೂಲಗಳು ತಿಳಿಸಿವೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *