ರಾಜ್ಯ

ಮುಳ್ಳಯ್ಯನಗಿರಿ ದತ್ತ ಪಿಠಕ್ಕೆ ರೋಪ್ ವೇ ನಿರ್ಮಾಣ

ಚಿಕ್ಕಮಗಳೂರುprajakiran.com, ಮೇ 18: ಮುಳ್ಳಯ್ಯನಗಿರಿ ದತ್ತ ಪಿಠಕ್ಕೆ ರೋಪ್ ವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಅವರು ಇಂದು ಜಿಲ್ಲೆಯ ವಿವಿಧ ಯೋಜನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಹಾಗೂ ಸವಲತ್ತುಗಳನ್ನು ವಿತರಿಸಿ ಮಾತನಾಡುತ್ತಿದ್ದರು.

*ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ*
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ರೋಪ್ ವೇ ಗಳನ್ನು ಪ್ರಥಮ ಬಾರಿಗೆ ರಾಜ್ಯದಲ್ಲಿ ಪ್ರವಾಸೀ ತಾಣಗಳಿಗೆ ಪರಿಚಯಿಸಲು ತೀರ್ಮಾನಿಸಲಾಗಿದೆ.

ಚಾಮುಂಡಿಬೆಟ್ಟ, ನಂದಿ ಬೆಟ್ಟ, ಅಂಜನಾದ್ರಿ ಬೆಟ್ಟದಲ್ಲಿ ನಿರ್ಮಿಸಲಾಗುತ್ತಿದೆ ಎಂದರು. ಇಲ್ಲಿಗೆ ವಿಮಾನ ಸೌಲಭ್ಯ ಅಗತ್ಯವಿದೆ. ಅದಕ್ಕಾಗಿ ಏರ್ ಸ್ಟ್ರಿಪ್ ನಿರ್ಮಿಸಿ ಪ್ರವಾಸೋದ್ಯಕ್ಕೆ ಇಂಬು ಕೊಡಲು ಪ್ರಯತ್ನಿಸಲಾಗುವುದು.

ಮೂರು ಕಡೆಗಳಲ್ಲಿ ಹೆಲಿಪೋರ್ಟ್ ನಿರ್ಮಿಸಲಾಗುತ್ತಿದೆ. ಹಂಪಿ, ಚಿಕ್ಕಮಗಳೂರು ಮತ್ತು ಮಡಿಕೇರಿಗಳಲ್ಲಿ ನಿರ್ಮಿಸಲಾಗುತ್ತಿದೆ.

ಚಿಕ್ಕಮಗಳೂರಿನಲ್ಲಿ ಹೆಲಿಪೋರ್ಟ್ ನ್ನು ಇದೇ ವರ್ಷ ಪ್ರಾರಂಭ ಮಾಡಲಾಗುವುದು. ಗ್ರಾಮಿಣ ಪ್ರದೇಶದಲ್ಲಿ ಸಂಚಾರಿ ಆಸ್ಪತ್ರೆಯನ್ನು ನಾಲ್ಕು ಜಿಲ್ಲೆಗಳಲ್ಲಿ ಪ್ರಾರಂಭಿಸಿದ್ದು, ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯೂ ಒಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಭಿವೃದ್ಧಿ ಜನರ ಬಳಿಗೆ ಜನರ ಸುತ್ತಲೂ ಆಗಬೇಕು. ಅಭಿವೃದ್ಧಿ ಸುತ್ತಲೂ ಜನ ಓಡಾಡಬಾರದು. ಆನರ ಬೇಕು ಬೇಡಗಳನ್ನು ಅರ್ತ ಮಾಡಿಕೊಂಡು ಅವರ ಹತ್ತಿರ ಹೋಗುವಂಥ ಕೆಲಸ ಸರ್ಕಾರದಲ್ಲಿ ಆಗಬೇಕು.

ಜನಪ್ರತಿನಿಧಿಗಳು ಆ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಕರ್ನಾಟದಲ್ಲಿ ಅಭಿವೃದ್ಧಿಗೆ ಮಾದರಿಯಾಗಿದೆ.

ಸಿ.ಟಿ ರವಿ ಅವರು ಜನೋಪಯೋಗಿ ಜನಪ್ರತಿನಿಧಿಗಳು. ಅವರ ನಿರಂತರ ಪ್ರಯತ್ನದಿಂದಾಗಿ ಅರಣ್ಯ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ವಲಯಗಳಿಗೆ ಸಂಬಂಧಿಸಿದಂತೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದೆ ಎಂದರು.

*ಕೆರೆ ತುಂಬುವ ಯೋಜನೆ*

ನಮ್ಮ ಸರ್ಕಾರ ಜನರ ಬೇಕುಬೇಡಿಕೆಗಳನ್ನು ಅರಿತು ಕೆಲಸ ಮಾಡುವ ಸರ್ವಸ್ಪರ್ಶಿ, ಸ್ವರ್ವವ್ಯಾಪಿ ಬಜೆಟ್ ನೀಡಿದೆ. ಈ ಜಿಲ್ಲೆಗೆ ಬಜೆಟ್‍ನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.

ಭದ್ರಾ ಯೋಜನೆಯಡಿಯಲ್ಲಿ ಕಡೂರು , ಚಿಕ್ಕಮಗಳೂರು ಮತ್ತು ತರೀಕರೆಯಲ್ಲಿ 1283 ಕೊಟಿ ರೂ..ಗಳ ಕೆರೆ ತುಂಬುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಮೊದಲನೇ ಹಂತದ ಕಾಮಗಾರಿ ಪ್ರಾರಂಭವಾಗಿದೆ.

2-3 ನೇ ಹಂತಕ್ಕೆ ಇದೇ ವರ್ಷದಲ್ಲಿ ಅನುಮೋದನೆ ನೀಡಲಾಗುವುದು. ಈ ಕಾರ್ಯಕ್ರಮದಿಂದ ಮೂರು ತಾಲ್ಲೂಕುಗಳ ನೀರಿನ ಮಟ್ಟ ಉತ್ತಮವಾಗಿ ರೈತಾಪಿ ವರ್ಗಕ್ಕೆ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಸರ್ಕಾರದ ಮಹತ್ವದ ಕೊಡುಗೆ ಇದು. ಗೋಂದಿ ಅಣೆಕಟ್ಟು ಏತ ನೀರಾವರಿಯಿಂದ ಇದೇ ವರ್ಷ ಕೈಗೆತ್ತಿಕೊಳ್ಳಲಾಗುವುದು ಎಂದರು

*ದುಡಿಮೆಯಲ್ಲಿ ಆರ್ಥಿಕತೆ*
ನಮ್ಮ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಿದೆ. 11 ಲಕ್ಷ ಮಕ್ಕಳಿಗೆ ಈ ಆರು ತಿಂಗಳಲ್ಲಿ ಲಾಭ ದೊರೆತಿದೆ.

ಈ ವರ್ಷ 14 ಲಕ್ಷ ಮಕ್ಕಳಿಗೆ ನೀಡುವ ಗುರಿ ಇದೆ. 5 ಲಕ್ಷ ಹೆಣ್ಣುಮಕ್ಕಳಿಗೆ ಉದ್ಯೋಗ ಕೊಡುವ ಕಾರ್ಯಕ್ರಮವನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ ಹಾಗೂ ಈ ವರ್ಷ ಪ್ರಾರಂಭಿಸಲಾಗಿದೆ.

ದುಡಿಮೆಯಲ್ಲಿ ಆರ್ಥಿಕತೆ ಇದೆ. ಜನರ ದುಡಿಮೆಯೇ ಆರ್ಥಿಕತೆ. ಇದನ್ನು ನಂಬಿ ಕೆಲಸ ಮಾಡಲಾಗುತ್ತಿದೆ. ದುಡಿಯುವವರು ದೊಡ್ಡವರಾಗುತ್ತಾರೆ. ದುಡಿಯುವ ಸಮಾಜವನ್ನು ಕಟ್ಟಬೇಕೆನ್ನುವುದು ಸರ್ಕಾರದ ಧ್ಯೇಯ ಎಂದರು.

*ಸಮಾನತೆಯ ಸಮಾಜ ನಿರ್ಮಾಣವಾಗಬೇಕು.*
ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಸಾಮಾಜಿಕ ನ್ಯಾಯ ಭಾಷಣದ ಸರಕಾಗಿದೆ. .ಇಷ್ಟು ವರ್ಷ ಮಾತನಾಡಿದ್ದು ಆಗಿದೆ. ಸಮಾನತೆಗೆ ಬೇಕಾಗಿರುವ ಕಾರ್ಯಕ್ರಮವನ್ನು ರೂಪಿಸಿ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ

ಆದ್ದರಿಂದ ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತಂದು ಅವರೂ ಸ್ವಾವಲಂಬನೆಯ ಸ್ವಾಭಿಮಾನಿ ಬದುಕು ಬದಕಬೇಕೆನ್ನುವುದು ನಮ್ಮ ಗುರಿ.

ಅದಕ್ಕಾಗಿ ಶಿಕ್ಷಣ, ಆರೋಗ್ಯಕ್ಕೆ ಅತಿ ಹೆಚ್ಚು ಒತ್ತು ನೀಡಲಾಗಿದೆ. 100 ಅಂಬೇಡ್ಕರ್ ವಿದ್ಯಾರ್ಥಿನಿಲಯ ಹಾಗೂ 50 ಹಿಂದುಳಿದ ವರ್ಗಗಳ ಹಾಸ್ಟಲ್‍ಗಳನ್ನು ಕನಕದಾಸರ ಹೆಸರಿನಲ್ಲಿ ಪ್ರಾರಂಭಿಸಲಾಗುತ್ತಿದೆ.

ದೊಡ್ಡ ನಗರಗಳಲ್ಲಿ 1000 ವಿದ್ಯಾರ್ಥಿಗಳ ಕ್ಲಸ್ಟ್‍ರ್ ನ್ನು ನಿರ್ಮಿಸಲಾಗುತ್ತಿದೆ. ಮುಂಬರು ದಿನಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲಾಗುವುದು. ಎಸ್.ಸಿ/ಎಸ್.ಟಿ ವರ್ಗದವರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಲಾಗಿದೆ.

ಇದುವರೆಗೂ ಯಾವ ಸರ್ಕಾರವೂ ಈ ಕೆಲಸವನ್ನು ಮಾಡಿಲ್ಲ. ಅವರಿಗೆ 2 ಲಕ್ಷ ರೂ.ಗಳನ್ನು ಗೃಹ ನಿರ್ಮಾಣಕ್ಕೆ ನೀಡಲಾಗಿದೆ. 3000 ಕಿಮಿ ರಸ್ತೆ, ರೈಲು, ಹಾಸನ – ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುವುದು. ಅಭಿವೃದ್ಧಿಯ ಪಥ ನಿರಂತರವಾಗಿ ಸಾಗಲು ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *