ಅಂತಾರಾಷ್ಟ್ರೀಯ

ಜುಲೈ 16ರ ವರೆಗೆ ಭಾಗಶಃ ಲಾಕ್‌ಡೌನ್ ಮುಂದುವರಿಸಿದ ಒಡಿಶಾ ಸರ್ಕಾರ

ಓಡಿಸ್ಸಾ prajakiran.com : ಒಡಿಶಾದಲ್ಲಿ ಜುಲೈ 16ರವರೆಗೆ ಭಾಗಶಃ ಲಾಕ್‌ಡೌನ್ ಮುಂದುವರಿಕೆ ಮಾಡಲಾಗಿದೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಜುಲೈ16 ರವರೆಗೆ ಭಾಗಶಃ ಲಾಕ್‌ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ.

ಪಾಸಿಟಿವಿಟಿ ದರದ ಪರೀಕ್ಷೆ ಆಧಾರದ ಮೇಲೆ 10 ಜಿಲ್ಲೆಗಳನ್ನು ‘ಎ’ ಮತ್ತು ‘ಬಿ’ ಎಂದು ವಿಂಗಡಿಸಲಾಗಿದ್ದು, ಕಡಿಮೆ ಪಾಸಿಟಿವಿಟಿ ದರವಿರುವ ‘ಎ’ ಕ್ಯಾಟಗರಿ ಜಿಲ್ಲೆಗಳಲ್ಲಿ ವಾರಾತ್ಯಂದ ಲಾಕ್‌ಡೌನ್ ಇಲ್ಲ.

ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಅಂಗಡಿಗಳು ಓಪನ್ ಆಗಿರಲಿವೆ. ರಿಕ್ಷಾ ಮತ್ತು ಕಾರುಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ. ಮಾರುಕಟ್ಟೆ, ಸಲೂನ್, ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಇದೆ.

ಹೆಚ್ಚು ಪಾಸಿಟಿವಿಟಿ ರೇಟ್ ಇರುವ ‘ಬಿ’ ಜಿಲ್ಲೆಗಳಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ2 ಗಂಟೆವರೆಗೆ ಅಂಗಡಿ ತೆಗೆಯಲು ಅವಕಾಶ ಇದೆ.

ಬ್ಯೂಟಿ ಪಾರ್ಲ್‌ರ್, ಮಾಲ್, ಬಸ್ ಸಂಚಾರ ಮಾಡುವಂತಿಲ್ಲ. ವಾರಾಂತ್ಯದ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಸರಕಾರ ಪ್ರಕಟಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *