ಅಂತಾರಾಷ್ಟ್ರೀಯ

ಮದ್ಯ ಪ್ರಿಯರ ಮನೆ ಬಾಗಿಲಿಗೆ ಸರಬರಾಜು…..!

ಛತ್ತೀಸಗಢ prajakiran.com : ದೇಶದಲ್ಲಿ ಕೊರೋನಾ ಎರಡನೇ ಅಲೆ ಅಟ್ಟಹಾಸವಾಡುತ್ತಿದ್ದು, ದೇಶದ ಬಹುತೇಕ ರಾಜ್ಯಗಳು ಕೊರೋನಾ ತಡೆಗಟ್ಟಲು ಲಾಕ್‌ಡೌನ್ ಮೊರೆಹೋಗಿವೆ.

ಛತ್ತೀಸ್‌ಗಢ ಸಹ ಲಾಕ್‌ಡೌನ್‌ಗೆ ಒಳಗಾಗಿದ್ದು, ಮದ್ಯ ಮಾರಾಟಕ್ಕೆ ತುಸು ಸಡಿಲ ನೀತಿ ಅನುಸರಿಸಲಾಗುತ್ತಿದೆ.

ಸರ್ಕಾರಕ್ಕೆ ಭಾರಿ ಆದಾಯ ತಂದುಕೊಡುವ ಮದ್ಯದಂಗಡಿ ಮುಚ್ಚಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮನೆಯ ಬಾಗಿಲಿಗೇ ಮದ್ಯವನ್ನು ಪೂರೈಕೆ ಮಾಡಲು ಛತ್ತೀಸಗಢ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಅಬಕಾರಿ ಸಚಿವ ಕವಾಸಿ ಲಖ್ಮಾ ಮಾಹಿತಿ ನೀಡಿದ್ದು, ಛತ್ತೀಸಗಢ ರಾಜ್ಯದಲ್ಲಿ ಮದ್ಯ ಹೋಂ ಡೆಲಿವರಿ ಪ್ರಾರಂಭ ಮಾಡಲಾಗುವುದು.

ಲಾಕ್ ಡೌನ್ ನಿಂದ ಸರ್ಕಾರ ನಷ್ಟದಲ್ಲಿದೆ. ನಷ್ಟವನ್ನು ತುಂಬುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *