ಅಂತಾರಾಷ್ಟ್ರೀಯ

ಲಿಂಗಾಯತ ಸಮಾಜ ಸಮುದ್ರ ಇದ್ದಂತೆ : ಬಸವರಾಜ ಬೊಮ್ಮಾಯಿ

*ಲಿಂಗಾಯತ ವೇದಿಕೆ ಕಾಲ್ಪನಿಕ ಸಂಘಟನೆ*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಹುಬ್ಬಳ್ಳಿ, ಮೇ08: ಲಿಂಗಾಯತ ವೇದಿಕೆ ಎನ್ನುವುದು ಎಲ್ಲಿಯೂ ಇಲ್ಲ, ಅದೊಂದು ಕಾಲ್ಪನಿಕ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ವೀರಶೈವ ಸಮಾಜ ದೊಡ್ಡದಿದ್ದು ಯಾವುದೇ ಸಂಸ್ಥೆಯ ಅಡಿಯಲ್ಲಿ ಇಲ್ಲ. ವೀರಶೈವ ಮಹಾಸಭಾ ಅಧ್ಯಕ್ಷರನ್ನು ಗೌರವಿಸುವುದಾಗಿ ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷಕ್ಕೆ ಸಂಸ್ಥೆಯ ಹೆಸರು ಬಳಸುವುದು ಸರಿಯಲ್ಲ.

ನಾಲ್ಕು ಜನ ಸೇರಿ ಏನೋ ಹೇಳಿದ್ರೆ ಅದು ಲಿಂಗಾಯತರ ಧ್ವನಿ ಆಗುತ್ತದೆಯೇ?ಲಿಂಗಾಯತ ಸಮಾಜ ಸಮುದ್ರ ಇದ್ದಂತೆ.
ಲಿಂಗಾಯತ ವೇದಿಕೆ ಚುನಾವಣೆ ಸಂದರ್ಭಗಳಲ್ಲಿ ಹುಟ್ಟಿಕೊಂಡ ಸಂಘಟನೆ ಎಂದರು.

*ನಮ್ಮನ್ನು ಪ್ರಶ್ನಿಸಲು ನೈತಿಕತೆ ಇಲ್ಲ*
ಬಿಜೆಪಿ ವಿರುದ್ಧ ಯಾವುದೇ ಪ್ರಕರಣ ಇಲ್ಲ, ಸಾಕ್ಷಿಯೂ ಇಲ್ಲ. ಭ್ರಷ್ಟಾಚಾರ ಆರೋಪದ ದಾಖಲೆ‌ ಕೊಡಿ ಎಂದು ಚುನಾವಣಾ ಆಯೋಗವನ್ನು ಕೇಳಿದ್ದು ಅವರಿಗೆ ಕೊಡಲು ಆಗಿಲ್ಲ ಎಂದರು.

ಇಷ್ಟೆಲ್ಲಾ ಮಾತನಾಡುವ ಎಲ್ಲಾ ಕಾಂಗ್ರೆಸ್‌ನವರ ಮೇಲೆ ಭ್ರಷ್ಟಾಚಾರ ಪ್ರಕರಣಗಳಿದ್ದು, ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ
ಯಾವ ನೈತಿಕತೆಯಿಂದ ನಮ್ಮನ್ನು ಪ್ರಶ್ನಿಸುತ್ತಾರೆ? ಎಂದರು.

*ತಪ್ಪು ಮಾಡುವುದನ್ನು ಕಾಂಗ್ರೆಸ್ ಬಿಡಲಿ*
ಐಟಿಯವರು ಎಲ್ಲಾ ಜಿಲ್ಲೆಗಳಲ್ಲಿ ಇದ್ದಾರೆ, ಅವರಿಗೆ ಎಲ್ಲಿ ತಪ್ಪು‌ನಡೆಯುತ್ತೆ ಅನ್ನೋ ಮಾಹಿತಿ ಅವರಿಗೆ ಇರುತ್ತದೆ.

ಕಾಂಗ್ರೆಸ್ ನವರು ತಪ್ಪು ಮಾಡಿದ್ದಾರೆ ನಾವು ಏನು ಮಾಡೋಕಾಗುತ್ತೆ.? ದಾಳಿಯಾಗುತ್ತದೆ ಎಂದು ಎಂ.ಬಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಮೊದಲೇ ಹೇಳಿ ಬಿಡೋದು ಕಾಂಗ್ರೆಸ್ ನವರ ತಂತ್ರಗಾರಿಕೆ ಎಂದರು.

*ಭಾವನಾತ್ಮಕ ಸಂಬಂಧ*
ನಮ್ಮ ರಾಷ್ಟ್ರೀಯ ನಾಯಕರು ಎಲ್ಲಾ ಚುನಾವಣೆಗಳಲ್ಲಿ ರಾಜ್ಯಕ್ಕೆ‌ ಬಂದಿದ್ದಾರೆ. ರಾಷ್ಟ್ರೀಯ ನಾಯಕರದ್ದು ಹಾಗೂ ಕರ್ನಾಟಕದ ಜನರದ್ದು ಭಾವನಾತ್ಮಕ ಸಂಬಂಧ
ಇದರಿಂದ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬೂಸ್ಟ್ ಕೊಡಲಿದೆ, ಇಂದೊಂದು ಬೂಸ್ಟರ್ ಡೋಸ್ ಎಂದರು.

ರಾಜ್ಯಾದ್ಯಂತ ಅಂತಿಮ ಹಂತದ ಬಹಿರಂಗ ಪ್ರಚಾರ ನಡೆಯುತ್ತಿದೆ‌. ಎಲ್ಲ ನಾಯಕರು ಬಹಿರಂಗ ಸಭೆ- ರೋಡ್ ಷೋ ನಡೆಸುತ್ತಿದ್ದಾರೆ. ೨೨೪ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ ಎಂದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *