ರಾಜ್ಯ

ಬ್ಯಾಂಕ್ ಅಧಿಕಾರಿಗಳ ಬೆವರಿಳಿಸಿದ ಧಾರವಾಡ ಜಿಲ್ಲಾಧಿಕಾರಿ

ಧಾರವಾಡ: ನಗರದಲ್ಲಿ ಬುಧವಾರ ನಡೆದ ಜಿಲ್ಲಾ ಅಗ್ರಣೀಯ ಬ್ಯಾಂಕ್ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಬ್ಯಾಂಕ್ ಅಧಿಕಾರಿಗಳ ಬೆವರಿಳಿಸಿದ ಪ್ರಕರಣ ನಡೆಯಿತು.

ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಜನರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ಎಡುವುತ್ತಿರುವ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅದರಲ್ಲಿಯೂ ರೈತರಿಗೆ ಲೃಷಿ ಸಾಲ ವಿತರಣೆ ಮತ್ತು ವಸೂಲಾತಿ ಹಂತದಲ್ಲಿ ಬ್ಯಾಂಕ್ ಅಧಿಕಾರಿಗಳ ನಿಯಮ ಉಲ್ಲಂಘನೆ ಜಿಲ್ಲಾಧಿಕಾರಿಗಳ ಪಿತ್ತ ನೆತ್ತಿಗೇರಿಸಿತ್ತು.

ರೈತರ ಬೆಳೆ ಸಾಲಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡುವುದು, ಓಟಿಎಸ್ ಸೌಲಭ್ಯ ಕಲ್ಪಿಸುವುದಾಗಿ ರೈತರಿಂದ ಅಕ್ರಮವಾಗಿ ವಸೂಲಾತಿ, ಬೆಳೆ ಸಾಲ ವಸೂಲಿ ಸಂಬಂಧಿಸಿದಂತೆ ಕುಟುಂಬದವರಿಗೆ ಕಿರಿಕಿರಿ ನೀಡುವುದು.

ಸಾಲಗಾರರ ಮಕ್ಕಳು ಮತ್ತು ಸಮೀಪದವರ ಬ್ಯಾಂಕ್ ವ್ಯವಹಾರಗಳಿಗೆ ಅಡಚಣಿ ಉಂಟು ಮಾಡುವುದು, ಸಾಲಗಾರರ ಇತರ ಖಾತೆಗಳಲ್ಲಿನ ಹಣ ಹಿಡಿದಿಟ್ಟುಕೊಳ್ಳುವುದು, ಹಣ ವರ್ಗಾವಣೆ ಮಾಡುವ ಬ್ಯಾಂಕ್ ಅಧಿಕಾರಿಗಳ ಪ್ರವೃತ್ತಿ.

ಇದರಿಂದ ರೈತರಿಗೆ ಆಗುವ ಮುಜುಗರ ಮತ್ತು ಆತ್ಮ ಸ್ಟೈರ್ಯಕ್ಕೆ ಧಕ್ಕೆ ತರುವ ಕ್ರಮಗಳ ಕುರಿತು ರೈತ ಹಿತರಕ್ಷಣಾ ಪರಿವಾರದ ಸಂಚಾಲಕ, ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ, ಜೆಡಿಯು ಮುಖಂಡ ಶ್ರೀಶೈಲಗೌಡ ಕಮತರ, ಗ್ರಾಪಂ ಸದಸ್ಯ ಭೀಮಪ್ಪ ಕಾಸಾಯಿ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ನಿದರ್ಶನಗಳ ಸಮೇತ ದೂರು ನೀಡಿದರು.

ಜಿಲ್ಲಾಧಿಕಾರಿಗಳು ಪ್ರತಿಯೊಬ್ಬ ರೈತರ ಅಭಿಪ್ರಾಯ, ಅವರಿಗೆ ನೀಡಿದ ನೋಟೀಸು, ವಸೂಲಾತಿ ಕುರಿತು ಕಾನೂನು ಬಾಹಿರ ಒತ್ತಡ ತರುವ ಬ್ಯಾಂಕಿನ ಅಧಿಕಾರಿಗಳ ಪ್ರವೃತ್ತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಬ್ಯಾಂಕಿನ ಅಧಿಕಾರಿಗಳಿಂದ ಸಂಪೂರ್ಣ ವಿವರಣೆ ಪಡೆದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಇನ್ನಿತರ ಬ್ಯಾಂಕ್ ಅಧಿಕಾರಿಗಳ ಬೇಜವಾಬ್ದಾರಿ ಕಂಡು ಬಂದಿತು.

ಆಗ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಸರಕಾರದ ಮಾರ್ಗಸೂಚಿ ಪಾಲಿಸದ ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಕೆಂಡಾಮಂಡಲವಾದರು.

ಪ್ರಕೃತಿಯ ಶಾಪ, ಕೊರೊನಾ ಸಂಕಷ್ಟ ಇನ್ನಿತರ ಅಪಾಯಗಳನ್ನು ಗುರುತಿಸಿದ ಸರಕಾರ, ರೈತರಿಗೆ ಸಾಲ ಮನ್ನಾ ಸೌಲಭ್ಯ ಕಲ್ಪಿಸಿದೆ.

ಈ ಸೌಲಭ್ಯವನ್ನು ಅರ್ಹ ರೈತರಿಗೆ ತಲುಪಿಸಬೇಕಾದ ಹೊಣೆ ಬ್ಯಾಂಕಿನದ್ದು. ಆದರೆ, ಬ್ಯಾಂಕಿನ ಅಧಿಕಾರಿಗಳು ಬೇಜಬ್ದಾರಿತನ ತೋರಿಸುತ್ತಿರುವುದು ಸರಿಯಲ್ಲ.

ಸಮಪರ್ಕವಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸುವ ಮುಖಾಂತರ ಎಚ್ಚರಿಸಿದರು..

ಇನ್ನು ಮುಂದೆ ಬ್ಯಾಂಕಿನ ಅಧಿಕಾರಿಗಳಿಂದ ಯಾವೊಬ್ಬ ರೈತರಿಗೂ ಬೆಳೆಸಾಲ ವಸೂಲಾತಿ ಕುರಿತು ರೈತರಿಗೆ ಆತ್ಮ ಸ್ಟೈರ್ಯ ಕಳೆದುಕೊಳ್ಳುವ ಯಾವುದೇ ಕ್ರಮವನ್ನು ಮಾಡುವಂತಿಲ್ಲ ಎಂದು ಖಡಕ್ ಸಂದೇಶ್ ಕೊಡುವ ಮೂಲಕ ಅಸಹಾಯಕ ರೈತ ಪರ ತಮ್ಮ ಕಾಳಜಿ ಪ್ರದರ್ಶಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸಮಚಿತ್ತದಿಂದ ಎಲ್ಲ ಆಲಿಸಿ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು ರೈತರ ಬಗ್ಗೆ ಹೊಂದಿದ ಅವರ ಕಾಳಜಿಯಿಂದ ಸಬೆಯಲ್ಲಿದ್ದ ರೈತರು ನಿಟ್ಟುಸಿರು ಬಿಡುವಂತಾಯಿತು.

ಜಿಲ್ಲಾಧಿಕಾರಿಗಳ ಕ್ರಮದಂತೆ ರೈತರಿಗೆ ನಡೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರು ಉಗ್ರ ಪ್ರತಿಭಟನೆ, ಬ್ಯಾಂಕ್ ಘೇರಾವು, ಅಲ್ಲದೇ ಬ್ಯಾಂಕುಗಳಿಗೆ ಬೇಲಿ ಹಚ್ಚ ಬೇಕಾಗುತ್ತದೆ ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ತಿಳಿಸುವ ಮೂಲಕ ಬ್ಯಾಂಕುಗಳಿಗೆ ಪರೋಕ್ಷ ಎಚ್ಚರಿಕೆ ರವಾನಿಸುವಲ್ಲಿ ಯಶಸ್ವಿಯಾದರು.

ಖಾತೆ ಹಿಂಪಡೆಯಿರಿ : 

ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಿರಿಯ ಅಧಿಕಾರಿಯ ವಿವರಣೆಯಿಂದ ತೃಪತ್ತರಾಗದ ಜಿಲ್ಲಾಧಿಕಾರಿಗಳು, ಮುಂದಿನ ಸಭೆಗೆ ಬ್ಯಾಂಕಿನ ಚೇರಮನ್ ಅವರೇ ಖುದ್ದಾಗಿ ಪಾಲ್ಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಜನತೆಗೆ ಸಮರ್ಪಕ ಬ್ಯಾಂಕಿಂಗ್ ಸೇವೆ ಒದಗಿಸದ ಕೆವಿಜಿ ಬ್ಯಾಂಕಿನ ಆಡಳಿತ ಮಂಡಳಿಯ ಬೇಜವಾಬ್ದಾರಿತನ ಅರಿತ ಜಿಲ್ಲಾಧಿಕಾರಿಗಳು, ಜಿಲ್ಲಾ ಆಡಳಿತ ಬ್ಯಾಂಕಿನಲ್ಲಿ ಹೊಂದಿರುವ ಎಲ್ಲ ಖಾತೆಗಳನ್ನು ಈ ತಿಂಗಳಳೊಗೆ ಹಿಂದಕ್ಕೆ ಪಡೆಯುವುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ ಘಟನೆಯೂ ನಡೆಯಿತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *