ರಾಜ್ಯ

ತಾಕತ್ ಇದ್ದರೆ ಒಂದು ಲಕ್ಷ ಮೂವತ್ತು ಸಾವಿರ ಜನರ ವಜಾ ಮಾಡಿ

ಧಾರವಾಡ prajakiran.com : ಕೆ ಎಸ್ ಆರ್ ಟಿಸಿ ನೌಕರರ ಹೋರಾಟ ಒಂಬತ್ತು ದಿನ‌ ಪೂರೈಸಿದೆ.

ಆದರೂ ಸರಕಾರ ತನ್ನ ಹಠಮಾರಿ ಧೋರಣೆಯನ್ನು ಕೂ ಬಿಡಲು ಸಿದ್ದವಿಲ್ಲ. ಜಿಲ್ಲಾಧಿಕಾರಿ, ಡಿಪೋ ಮ್ಯಾನೇಜರ್ ಕಿರುಕುಳ, ದೌರ್ಜನ್ಯ ಮುಂದುವರೆದಿದೆ.

ಇದರಿಂದಾಗಿ ಮನನೋಂದ ನಾಲ್ಕು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್. ನೀರಲಕೇರಿ ಕಿಡಿ ಕಾರಿದರು.

ಇನ್ನೊ ಕೆಲವರು
ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಿರುಕುಳದಿಂದ ಬೇಸತ್ತು ಹೋಗಿದ್ದಾರೆ. ಕೆಲವು ಅಧಿಕಾರಿಗಳು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.

ನಿವೃತ್ತ ನೌಕರರಿಗೆ
ಎಂಟು ನೂರು ರೂಪಾಯಿ ಭತ್ಯೆ ಕೊಡುವುದಾಗಿ ಆಮಿಷ ಒಡ್ಡಿ ಕೆಲಸಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ನಿಜವಾಗಿಯೂ ತಾಕತ್ ಇದ್ದರೆ
ಒಂದು ಲಕ್ಷ ಮೂವತ್ತು ಸಾವಿರ ಜನರ ವಜಾ ಮಾಡಿ ನಿಮ್ಮ ತಾಕತ್ತು ತೋರಿಸಿ ಎಂದು ಸವಾಲು ಹಾಕಿದರು.

ರಾಜೀಸಂಧಾನಕ್ಕೆ ಯತ್ನಿಸದೆ, ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಗದಾ ಪ್ರಹಾರ ಮಾಡುತ್ತಿದ್ದಾರೆ. ಎರಡು ಮೂರು ಸಂಘಟನೆಯ ನಿವೃತ್ತ ನೌಕರರ ಮುಂದಿಟ್ಡು ಆಟ ಆಡುವುದು ಸರಿಯಲ್ಲ.

ಹೀಗಾಗಿ ಸಾರಿಗೆ ನೌಕರರು ಏ. 20ರ ವರೆಗೆ ಹೋರಾಟ ನಡೆಯಲಿದೆ. ಎ. 16ರಂದು ಡೀಪೋ ಮುಂದೆ ದೀಪ ಹಚ್ಚುವ ಮೂಲಕ ಪ್ರತಿಭಟನೆ ಮಾಡುತ್ತಾರೆ.

ಆನಂತರ ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಹೇಳಿದರು. ಬೇರೆ ಬೇರೆ ಇಲಾಖೆಯ
ಚಾಲಕರಿಗೆ ಸಂಬಳ ವ್ಯತ್ಯಾಸ ಬಹಳಷ್ಟಿದೆ. ಶೇ 31ರಷ್ಟು ತಾರತಮ್ಯ ಇದೆ. ಪೊಲೀಸರನ್ಬು ಮುಂದಿಟ್ಟುಕೊಂಡು ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.

ಅನಗತ್ಯವಾಗಿ ಪ್ರಕರಣ ದಾಖಲಿಸಬಾರದು. ಚಾಲಕರ ವಿನಯಪೂರ್ವಕ ಮನವಿ ಮಾಡಿದ್ದಾರೆ. ದೌರ್ಜನ್ಯ ಹಿಂಸೆ ನೀಡುವುದು ಸರಿಯಲ್ಲ. ಬಸ್ ನಿಲ್ದಾಣದ ಬಳಿ ನಿಂತ ಕಾರು ಸೀಜ್ ಮಾಡುವುದು ಸಾರಿಗೆ ನೌಕರರ ರಕ್ಷಣೆ ಕೊಡಯವ ಬದಲಿಗೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು‌.

ಎಂಟು ಜನರಿಗೆ ಮಾಲೆ ಹಾಕಿದ್ದಕ್ಕೆ ಮೊಕದ್ದಮೆ ದಾಖಲು ಒಳ್ಳೆಯ ಬೆಳವಣಿಗೆ ಅಲ್ಲ. ಮೊಕದ್ದಮೆ ಬೇಡ ಮಾನವಿಯತೆಯಿಂದ ಸ್ದಂದಿಸಿ ದಬ್ಬಾಳಿಕೆ ಬೇಡ.

ನ್ಯಾಯಯುತ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡಿ. ನೀವು ಕೇವಲ ಎಳು ಸಾವಿರ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಅದರಿಂದ ನಾವು ಎದೆಗುಂದುವುದಿಲ್ಲ.

ನಿಮ್ಮ ಯುವಕರಿಗೆ ತೊಂದರೆ ಕೊಡಬೇಡಿ. ಕಾಡುವುದು ಒಳ್ಳೆಯದಲ್ಲ. ಮಾತುಕತೆ ನಡೆಸಿ ಸಕಾರಾತ್ಮಕ ಸ್ಪಂದನೆ ನೀಡುವ ಬದಲಿಗೆ ಸರ್ಕಾರ ಎಜೆಂಟ್ ತರಹ ವರ್ತಿಸುವ ಕೆಲವರನ್ನು ಮುಂದೆ ಬಿಟ್ಟುರುವುದು ಒಳ್ಳೆಯ ಬೆಳವಣಿಗೆ ಅಲ್ಲ.

ಅನಂತ ಸುಬ್ಬರಾವ್, ಕೆ ಎಸ್ ಶರ್ಮಾ ಅವರನ್ನು ಕೈ ಮುಗಿದು ಬೆಂಬಲ ನೀಡಲು ಕೋರುತ್ತೇನೆ. ನಿಮಗೆ ಪಾಪ ಹತ್ತುವುದು ನಿಶ್ಚಿತ ಎಂದರು.

ಸಂಬಳ ಕೊಡಲು ಬೇಕಿದ್ದರೆ ಸಮಯಾವಕಾಶ ನೀಡುತ್ತದೆ. ರಾಜ್ಯ ಪತ್ರ ಹೊರಡಿಸಿ ಆರನೇ ವೇತನ ಆಯೋಗ ಜಾರಿ ಆಗಬೇಕು.

ಶಾಶ್ವತ ಪರಿಹಾರ ಸಿಗಬೇಕು. ಶಿವಯೋಗಿ ಕಳಸದ ಹೀನಾಯವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಸಾರಿಗೆ ಇಲಾಖೆ ಎಂಡಿ ನಡವಳಿಕೆ ನೋವು ತಂದಿದೆ.

1 ಲಕ್ಷ 22 ಸಾವಿರ ನೌಕರರು ಸರಕಾರದ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಬೇಡಿ ಎಂದು ಮನವಿ ಮಾಡಿದರು.

ಗಾಡಿಯಲ್ಲಿ ಎತ್ತಿಹಾಕಿಕೊಂಡು ಹೋಗಬಾರದು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕ್ಕೆ ದೂರು ನೀಡಲಾಗುತ್ತದೆ.ಎಂದು ಪಿಎಚ್ ಮನನ ನೀರಲಕೇರಿ ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *