ನವದೆಹಲಿ prajakiran.com : ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯನ್ನು ಜೂನ್ ಅಂತ್ಯದಲ್ಲಿ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತದೆ ಎಂದು ಭಾರತ್ ಬಯೋಟೆಕ್ನ ಬ್ಯುಸಿನೆಸ್ ಡೆವಲಪ್ ಮೆಂಟ್ ಮುಖ್ಯಸ್ಥ ಡಾ. ರಾಚ್ಸ್ ತಿಳಿಸಿದ್ದಾರೆ.
ಮಕ್ಕಳಲ್ಲಿ ಸೋಂಕು ಹೆಚ್ಚಾಗುವ ಭೀತಿಯಿಂದ ಮಕ್ಕಳಿಗೆ ಕೊರೋನಾ ಲಸಿಕೆ ಸಿದ್ಧಗೊಳಿಸಲು ಭಾರತ್ ಬಯೋಟೆಕ್ ಮುಂದಾಗಿದೆ.
ಭಾರತ್ ಬಯೋಟೆಕ್ನ ಲಸಿಕೆಯು 3ನೇ ತ್ರೈ ಮಾಸಿಕ ಅಥವಾ 4ನೇ ತ್ರೈ ಮಾಸಿಕದ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ ಕೋವ್ಯಾಕ್ಸಿನ್ ಗೆ ಅನುಮೋದನೆ ನೀಡುವ ನಿರೀಕ್ಷೆಯಲ್ಲಿದೆ ಎಂದರು.
ಈ ವರ್ಷದ ಅಂತ್ಯಕ್ಕೆ ಕೋವಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಸುಮಾರು 700 ಮಿಲಿಯನ್ ಡೋಸ್ಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.