ಜಿಲ್ಲೆ

ಜನ ಭಾಗಿದಾರಿ ಕಲ್ಪನೆಯಡಿ ಧಾರವಾಡ ಜಿಲ್ಲೆಯಲ್ಲಿ “ಕೋರೊನಾ ಮುಕ್ತ ಗ್ರಾಮ” ಅಭಿಯಾನ 

ಧಾರವಾಡ prajakiran.com :  ಪ್ರಧಾನ ಮಂತ್ರಿಗಳು ತಿಳಿಸಿರುವಂತೆ ಜನ ಭಾಗಿದಾರಿ ಕಲ್ಪನೆಯಡಿ ಜಿಲ್ಲೆಯಲ್ಲಿನ ಗ್ರಾಮೀಣ ಭಾಗಗಳಲ್ಲಿ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಸಹಯೋಗದಲ್ಲಿ ಕೋರೊನಾ ಮುಕ್ತ ಗ್ರಾಮ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು

ಮತ್ತು ಈ ಕುರಿತು ಮಾರ್ಗಸೂಚಿಗಳಿರುವ ಪ್ರತ್ಯೆಕವಾದ ಪತ್ರವನ್ನು ಎಲ್ಲ ಗ್ರಾಮ ಪಂಚಾಯತಿಗಳಿಗೆ ಶೀಘ್ರದಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಅವರು ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಜರುಗಿದ ವಿಡಿಯೋ ಸಂವಾದ ಕಾರ್ಯಕ್ರಮದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.

ಕೋರೋನಾ ಮುಕ್ತ ಗ್ರಾಮ ಅಭಿಯಾನವನ್ನು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಯಶಸ್ವಿಗೊಳ್ಳಿಸಲು ಕ್ರಮಕೈಗೊಳ್ಳಲಾಗುವುದು.

ಅಭಿಯಾನದಲ್ಲಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಪಿಡಿಓ, ಗ್ರಾಮಲೇಕ್ಕಾಧಿಕಾರಿಗಳನ್ನು ಒಳಗೊಂಡ ಕೋವಿಡ್ ಕಾರ್ಯ ಪಡೆ ಮೂಲಕ ಕೊವಿಡ್ ನಿಯಂತ್ರಿಸುವ ಕಾರ್ಯ ಮಾಡಲಾಗುವುದು ಎಂದು ಅವರು ಹೇಳಿದರು.

ಗ್ರಾಮ ಪಂಚಾಯತಿಗಳು ಗ್ರಾಮ ಸಭೆಯಲ್ಲಿ ಠರಾವ್ ಮಾಡುವ ಮೂಲಕ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಲಾಕ್‍ಡೌನ್ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ, ಕೋವಿಡ್ ಮುಂಜಾಗೃತಾ ಕ್ರಮಕೈಗೊಳ್ಳುವ ಹಾಗೂ ಒಂದು ಸ್ಥಳ ಅಥವಾ ಕಟ್ಟಡದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ಅದನ್ನು ಮೈಕ್ರೋ ಕಂಟೋನ್ಮೆಂಟ್ ಹಾಗೂ ಕಂಟೋನ್ಮೆಂಟ್ ಪ್ರದೇಶಗಳೆಂದು ಗುರುತಿಸಿ ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡಬಹುದು.

ಗ್ರಾಮ ಮಟ್ಟದಲ್ಲಿ ಎಲ್ಲರನ್ನು ಒಗ್ಗುಡಿಸುವ ಮೂಲಕ ಕೋರೋನಾ ಕುರಿತ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿ, ಸ್ಥಳದಲ್ಲಿಯೆ ಅಗತ್ಯ ಸಲಹೆ ನೀಡಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು.

ಗ್ರಾಮ ಪಂಚಾಯತ ಪ್ರತಿನಿಧಿಗಳು ತಮ್ಮ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮವನ್ನು ಕೋರೊನಾದಿಂದ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಅವರಿಗೆ ಅಗತ್ಯವಿರುವ ಔಷಧಿ, ಚಿಕಿತ್ಸಾ ಸೌಲಭ್ಯ, ವೈದ್ಯಕೀಯ ಅನುಕೂಲತೆಗಳನ್ನು ಆರೋಗ್ಯ ಇಲಾಖೆಯಿಂದ ಕಲ್ಪಿಸಿ, ಕ್ರಮಕೈಗೊಳ್ಳಲಾಗುವುದು.

ಗ್ರಾಮ ಸಶಕ್ತಿಕರಣದ ಮೂಲಕ ಕೋರೋನಾ ಮುಕ್ತ ಗ್ರಾಮ ಅಭಿಯಾನವನ್ನು ಪರಿಣಾಮಕಾರಿಯಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಪ್ರತಿ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಸೌಲಭ್ಯ:

ಪ್ರತಿ ಗ್ರಾಮ ಪಂಚಾಯತಿಗಳು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೆಂದ್ರಗಳಿಗೆ ಸ್ಥಳದಲ್ಲಿಯೆ ಕೋವಿಡ್ ಪರೀಕ್ಷೆ ಮಾಡಲು ತಲಾ 50 ರ್ಯಾಟ್‍ಕಿಟ್, ಒಂದು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲಾಗುತ್ತಿದೆ.

ಮತ್ತು ಈಗಾಗಲೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ 6 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮತ್ತು ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧಿಗಳಿರುವ 100 ಔಷಧಿ ಪಾಕೆಟ್‍ಗಳನ್ನು ಕೋವಿಡ್ ಸೋಂಕಿತರಿಗೆ ವಿತರಿಸಲು ನೀಡಲಾಗುವುದು.

ಹೊಬಳಿಗೊಂದು ಕೋವಿಡ್ ಕೆರಸೇಂಟರ್ ಆರಂಭಿಸಲು ಕ್ರಮ : ಈಗಾಗಲೆ ಪ್ರತಿ ತಾಲೂಕಿಗೆ 50 ಬೆಡ್‍ಗಳಿರುವ ಒಂದು ಕೋವಿಡ್ ಕಾಳಜಿ ಕೇಂದ್ರವನ್ನು ಆರಂಭಿಸಲಾಗಿದೆ.

ಮುಂದಿನ ದಿನಗಳಲ್ಲಿ ತಾಲೂಕಾ ಕೇಂದ್ರದಲ್ಲಿರುವ ಹೊಬಳಿಯನ್ನು ಹೊರತುಪಡಿಸಿ, ಉಳಿದ ಎಲ್ಲ ಹೊಬಳಿಗಳಲ್ಲಿ ತಲಾ ಒಂದರಂತೆ ಸುಮಾರು 25 ರಿಂದ 30 ಬೆಡ್‍ಗಳು ಇರುವ ಕೋವಿಡ್ ಕಾಳಜಿ ಕೇಂದ್ರವನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು.

ವಿಶೇಷ ಚೇತನರಿಗೆ ಲಿಸಿಕೆ ನೀಡಲು ಕ್ರಮ:*

ಜಿಲ್ಲೆಯ ವಿಶೇಷ ಚೇತನರಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ನೀಡುವಲ್ಲಿ ಆದ್ಯತೆ ನೀಡಲಾಗುವುದು. ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಲಸಿಕೆ ಪಡೆಯಬಹುದು.

ಜನದಟ್ಟನೆಯನ್ನು ಕಡಿಮೆ ಮಾಡಲು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಲಸಿಕೆ ನೀಡುವುದನ್ನು ನಿಲ್ಲಿಸಿ ಅದರ ಬದಲಾಗಿ ಲ್ಯಾಮಿಂಗ್‍ಟನ್ ಶಾಲೆಯಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಲಸಿಕೆ ಪಡೆಯುವವರಿಗಾಗಿ ಪ್ರತಿ ಲಸಿಕಾ ಕೇಂದ್ರದಲ್ಲಿ ಟೊಕನ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಒಟ್ಟು ಟೊಕನ್‍ಗಳ ಪೈಕಿ ಅರ್ಧದಷ್ಟನ್ನು ಬೆಳಿಗ್ಗೆ 9:30 ಗಂಟೆಗೆ ಮತ್ತು ಉಳಿದ ಅರ್ಧದಷ್ಟನ್ನು ಮಧ್ಯಾಹ್ನ 12 ಗಂಟೆಗೆ ವಿತರಿಸಲು ಸೂಚಿಸಲಾಗಿದೆ.

ಎರಡು ಹಂತಗಳಲ್ಲಿ ಟೋಕನ್ ವಿತರಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *